Homeಕರ್ನಾಟಕಬಿಜೆಪಿ ಒಂಥರಾ ವಾಷಿಂಗ್ ಮೆಷಿನ್; ಅಲ್ಲಿ ಭ್ರಷ್ಟರು ಪವಿತ್ರರಾಗಬಹುದು: ಕಾಂಗ್ರೆಸ್‌ ವ್ಯಂಗ್ಯ

ಬಿಜೆಪಿ ಒಂಥರಾ ವಾಷಿಂಗ್ ಮೆಷಿನ್; ಅಲ್ಲಿ ಭ್ರಷ್ಟರು ಪವಿತ್ರರಾಗಬಹುದು: ಕಾಂಗ್ರೆಸ್‌ ವ್ಯಂಗ್ಯ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವಂತಹ ವಿರೋಧ ಪಕ್ಷಗಳ ಹಲವು ನಾಯಕರನ್ನು ಬಿಜೆಪಿ ತನ್ನಲ್ಲಿಗೆ ಬರಮಾಡಿಕೊಳ್ಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, “ಬಿಜೆಪಿ ಅಂದ್ರೆ ಒಂಥರಾ ವಾಷಿಂಗ್ ಮೆಷಿನ್ ಇದ್ದಂತೆ” ಎಂದು ಟೀಕಿಸಿದೆ.

ಈ ಕುರಿತು ಎಕ್ಸ್‌ ತಾಣದಲ್ಲಿ ಪೋಸ್ಟ್‌ ಮಾಡಿ, “ಕಂಪೆನಿಗಳು ಭ್ರಷ್ಟಾಚಾರದ ಆರೋಪ ಹೊತ್ತಿದ್ದರೆ ಚುನಾವಣಾ ಬಾಂಡ್ ಖರೀದಿಸುವ ಮೂಲಕ ಶುದ್ಧರಾಗಬಹುದು! ರಾಜಕಾರಿಣಿಗಳು ಭ್ರಷ್ಟರಾಗಿದ್ದರೆ ಬಿಜೆಪಿ ಸೇರುವ ಮೂಲಕ ಪವಿತ್ರರಾಗಬಹುದು!” ಎಂದು ಲೇವಡಿ ಮಾಡಿದೆ.

“ಯಾವೊಬ್ಬ ಭ್ರಷ್ಟಾಚಾರಿಯನ್ನೂ ಬಿಡುವುದಿಲ್ಲ” ಎಂದಿದ್ದ ಮೋದಿಯವರು ನುಡಿದಂತೆ ನಡೆಯುತ್ತಿದ್ದಾರೆ, ಯಾವೊಬ್ಬ ಭ್ರಷ್ಟರನ್ನೂ ಬಿಡದೆ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ! ಭ್ರಷ್ಟಾಚಾರದ ವಿರುದ್ಧ ಮೋದಿಯವರ ಸರ್ಜಿಕಲ್ ಸ್ಟ್ರೈಕ್ ಅಮೋಘವಾದುದು!!” ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments