ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ವ್ಯವಸ್ಥೆಗಾಗಿ ‘ನಂಬಿಕೆ ನಕ್ಷೆ'(ನಂಬಿಕೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆ, ‘ಹೊಸ ಆಸ್ತಿ ತೆರಿಗೆ ವ್ಯವಸ್ಥೆ’ ಹಾಗೂ ‘ಖಾತಾ ವ್ಯವಸ್ಥೆ'(ನಾಗರೀಕ ಸ್ವಯಂ ಘೋಷಣೆ ಆಧಾರಿತ ತಾತ್ಕಾಲಿಕ ಆಸ್ತಿ ತೆರಿಗೆ ಸಂಖ್ಯೆ ನಿಯೋಜನೆ ಮತ್ತು ‘ಬಿಬಿಎಂಪಿ ಖಾತಾ ವಿತರಣೆ ಯೋಜನೆ)ಗೆ ಡಿಸಿಎಂ ಡಿ ಕೆ ಶಿವಕುಮಾರ್ ಚಾಲನೆ ನೀಡಿದರು.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್, ಬಿಡಿಎ ಅಧ್ಯಕ್ಷರಾದ ಎನ್.ಎ ಹ್ಯಾರೀಸ್, ಶಾಸಕರಾದ ರಿಜ್ವಾನ್ ಹರ್ಷದ್, ಮಾಜಿ ಶಾಸಕರಾದ ಮಂಜುನಾಥ್, ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಗರೀಕ ಸ್ವಯಂ ಘೋಷಣೆ ಆಧಾರಿತ ತಾತ್ಕಾಲಿಕ ಆಸ್ತಿ ತೆರಿಗೆ ಸಂಖ್ಯೆ ನಿಯೋಜನೆ ಮತ್ತು “ಬಿಬಿಎಂಪಿ ಖಾತಾ” ವಿತರಣೆ ಯೋಜನೆಯ ಮಾಹಿತಿ
ಕ್ರಮಬದ್ಧವಲ್ಲದ ಮತ್ತು ಅನಧಿಕೃತ ಸ್ವತ್ತುಗಳಿಗೆ ಆಸ್ತಿತೆರಿಗೆ ಸಂಗ್ರಹಿಸಲು ಬಿಬಿಎಂಪಿ ಕಾಯ್ದೆ 2020 ರ ಪ್ರಕರಣ 144 ಉಪ ಪ್ರಕರಣ 6 ಅವಕಾಶ ಕಲ್ಪಿಸುತ್ತದೆ. ಆದರೆ ಸ್ವತ್ತುಗಳು ಸರ್ಕಾರದ ಅಥವಾ ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಜಮೀನುಗಳಲ್ಲಿ ಇರಬಾರದು.
ಬಿಬಿಎಂಪಿಯ ಸುರಕ್ಷಿತ ಅನೈನ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದು, ಇದರಲ್ಲಿ ನಾಗರೀಕರು ಬಿಬಿಎಂಪಿಯ ಆಸ್ತಿ ತೆರಿಗೆ ನೋಂದಣಿ” ಯಲ್ಲಿ ತಮ್ಮ ಆಸ್ತಿಗಳನ್ನು ನಮೂದಿಸಲು ಆನೈನ್ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ತದನಂತರ ನಾಗರೀಕರು ತಮ್ಮ ಆಸ್ತಿ ತೆರಿಗೆಯನ್ನು ತಕ್ಷಣವೇ ಪಾವತಿಸಲು ಮತ್ತು ತಾತ್ಕಾಲಿಕ ಆಸ್ತಿತೆರಿಗೆ ಸಂಖ್ಯೆಯನ್ನು ಪಡೆಯಬಹುದಾಗಿರುತ್ತದೆ.
ಲಕ್ಷಗಟ್ಟಲೆ ಆಸ್ತಿ ಮಾಲೀಕರಿಗೆ ಇದು ವಿಶೇಷ ಅವಕಾಶವಾಗಿದ್ದು, 31/7/2024 ರವರೆಗೆ ನೀಡಲಾಗುತ್ತಿರುವ ಒಂದು ಬಾರಿ ಪರಿಹಾರ (OTS) ಯೋಜನೆ ಅಡಿಯಲ್ಲಿ ಬಡ್ಡಿ ಮತ್ತು ಇತರೆ ವಿನಾಯಿತಿಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ನಾಗರೀಕರಿಗೆ ಅನುವು ಮಾಡಿಕೊಡುತ್ತದೆ.
ನಾಗರೀಕರು ತಮ್ಮ ಮೊಬೈಲ್ ಮತ್ತು ಔಖಿಕ ಬಳಸಿ ಲಾಗಿನ್ ಮಾಡಬೇಕು ಮತ್ತು ಆಧಾರ್ ಮೂಲಕ ಅವರ ಗುರುತನ್ನು ದೃಢೀಕರಿಸಬೇಕು ಮತ್ತು ಅಸ್ತಿಯ ಮಾಲಿಕರ & ಅಸ್ತಿಯ ಛಾಯಾಚಿತ್ರ ಮತ್ತು GPS ಅನ್ನು ಅಪ್ಲೋಡ್ ಮಾಡಬೇಕು. ನಾಗರೀಕರು ಮಾಲೀಕರ ಮತ್ತು ಆಸ್ತಿ ವಿವರಗಳನ್ನು ನಮೂದಿಸುತ್ತಾರೆ. ನೋಂದಾಯಿತ ಪತ್ರ ಮತ್ತು ಇತರ ದಾಖಲೆಗಳನ್ನು ಸಹ ಅಪ್ಲೋಡ್ ಮಾಡಬೇಕು. ಇದನ್ನು ಬಿಬಿಎಂಪಿ “ಖಾತಾ” ಗಾಗಿ ಸಲ್ಲಿಸುವ ಅರ್ಜಿ ಎಂದು ಪರಿಗಣಿಸಲಾಗುತ್ತದೆ.
ಬಿಬಿಎಂಪಿಯು ಸ್ವಯಂಚಾಲಿತವಾಗಿ ತಾತ್ಕಾಲಿಕ ಆಸ್ತಿತೆರಿಗೆ ಸಂಖ್ಯೆಯನ್ನು ನೀಡುತ್ತದೆ ಮತ್ತು ನಾಗರೀಕರು ನೀಡಿದ ಸ್ವತ್ತಿನ ಉಪಯೋಗದ ವಿವರಗಳ ಪ್ರಕಾರ ಆಸ್ತಿತೆರಿಗೆಯನ್ನು ತಕ್ಷಣವೇ ಪಾವತಿಸಲು ಅನುವು ಮಾಡಿಕೊಡುತ್ತದೆ. ಬಿಬಿಎಂಪಿಯು ಖಾತೆಗಾಗಿ ಸಲ್ಲಿಸಿರುವ ಅರ್ಜಿಗೆ ತಾತ್ಕಾಲಿಕ ಆಸ್ತಿತೆರಿಗೆ ಸಂಖ್ಯೆಯೊಂದಿಗೆ ಸರಿಯಾದ ಸ್ವೀಕೃತಿಯನ್ನು ನೀಡಲಾಗುವುದು.
ಬಿಬಿಎಂಪಿಯು ಸ್ವೀಕರಿಸಿದ ಅರ್ಜಿಯನ್ನು ಕಾಲಮಿತಿಯಲ್ಲಿ ಪ್ರಕ್ರಿಯೆಗೊಳಿಸುತ್ತದೆ ಹಾಗೂ ಕಾನೂನು ಮತ್ತು ನಿಯಮಗಳ ಪ್ರಕಾರ ಬಿಬಿಎಂಪಿಯ ಸೂಕ್ತ ಆಸ್ತಿತೆರಿಗೆ ವಹಿಯಲ್ಲಿ ಆಸ್ತಿಯನ್ನು ನಮೂದಿಸುತ್ತದೆ. ಬಿಬಿಎಂಪಿಯು ಸ್ವತ್ತನ್ನು ಆಸ್ತಿತೆರಿಗೆ ವಹಿಯಲ್ಲಿ ನಮೂದಿಸಿದ ತಕ್ಷಣವೇ, “ಖಾತಾ” ಮತ್ತು ಅಂತಿಮ ಹಾಗೂ ಶಾಶ್ವತ ಆಸ್ತಿತೆರಿಗೆ ಸಂಖ್ಯೆಯನ್ನು ನೀಡಲಾಗುವುದು.
ಯೋಜನೆಯ ಆನೈನ್ ಅರ್ಜಿಗಳನ್ನು 20ನೇ ಮಾರ್ಚ್ 2024ರ ನಂತರ https://bbmptax.karnataka.gov.inಗೆ ಸಂಪರ್ಕಿಸಬಹುದು.
ನಾಗರಿಕರು ತಮ್ಮ ಸ್ಥಳೀಯ ಸಹಾಯಕ ಕಂದಾಯ ಅಧಿಕಾರಿಯವರನ್ನು ಸಂಪರ್ಕಿಸಬಹುದು ಅವರು ಅನೈನ್ ವ್ಯವಸ್ಥೆಯಲ್ಲಿ ಅರ್ಜಿಯನ್ನು ನಮೂದಿಸುತ್ತಾರೆ ಹಾಗೂ ತಾತ್ಕಾಲಿಕ ಆಸ್ತಿತೆರಿಗೆ ಸಂಖ್ಯೆಯನ್ನು ಮತ್ತು ಸ್ವೀಕೃತಿಯನ್ನು ರಚಿಸುತ್ತಾರೆ. ಹಾಗೂ ನಾಗರಿಕರು ತಮ್ಮ ಆಸ್ತಿತೆರಿಗೆಯನ್ನು ಪಾವತಿಸಲು ಮತ್ತು ” ಬಿಬಿಎಂಪಿ ಖಾತಾ’ಗಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತಾರೆ. ಈ ಸೌಲಭ್ಯವು ಶೀಘ್ರದಲ್ಲೇ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಲಭ್ಯವಾಗಲಿದೆ.