Homeಕರ್ನಾಟಕಕಲಬುರಗಿ ಮೆಗಾ ಜವಳಿ ಪಾರ್ಕ್‌ಗೆ ಸಾವಿರ ಎಕರೆ ಜಮೀನು: ಸಚಿವ ಶಿವಾನಂದ ಪಾಟೀಲ್

ಕಲಬುರಗಿ ಮೆಗಾ ಜವಳಿ ಪಾರ್ಕ್‌ಗೆ ಸಾವಿರ ಎಕರೆ ಜಮೀನು: ಸಚಿವ ಶಿವಾನಂದ ಪಾಟೀಲ್

ರಾಜ್ಯ ಸರ್ಕಾರವು ಕಲಬರುಗಿಯಲ್ಲಿ ಪಿಎಂ ಮಿತ್ರ ಪಾರ್ಕ್ ಯೋಜನೆಯಡಿ ಸ್ಥಾಪಿಸಲು ರಚನೆಯಾಗಲಿರುವ ವಿಶೇಷ ಉದ್ದೇಶಿತ ವಾಹಕಗೆ ಸಾಂಕೇತಿಕ ದರದಲ್ಲಿ 1000 ಎಕರೆ ಜಮೀನನ್ನು (99 ವರ್ಷಗಳ ಅವಧಿಗೆ ಪ್ರತಿ ಎಕರೆಗೆ ರೂ.1 ರಂತೆ) ಕ್ಯಾಬಿನೆಟ್ ಅನುಮೋದನೆಯೊಂದಿಗೆ ಹಸ್ತಾಂತರಿಸಲಿದೆ ಎಂದು ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಸದಸ್ಯ ಎಸ್.ತಿಪ್ಪೇಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜ್ಯದಲ್ಲಿ ಕೇಂದ್ರ ಸರ್ಕಾರವು ಅಂತರ ರಾಷ್ಟ್ರೀಯ ಮಟ್ಟದ ಜವಳಿ ಮತ್ತು ಸಿದ್ದ ಉಡುಪಿನ ಪಾರ್ಕ್ ನಿರ್ಮಾಣಕ್ಕೆ ಪಿಎಂ ಮಿತ್ರ ಪಾರ್ಕ್ ಯೋಜನೆಯಡಿ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಕಿರಣಗಿ, ನದಿಸಿನ್ನೂರು ಹಾಗೂ ಫಿರೋಜಾಬಾದ್ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಡಿ 1000 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಅನುಮೋದನೆ ನೀಡಿರುತ್ತದೆ” ಎಂದರು.

“ರಾಜ್ಯದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ನಿರ್ಮಿಸುವ ಪಿಎಂ ಮಿತ್ರ ಪಾರ್ಕ್ ಎಲ್ಲ ಜವಳಿ ಮೌಲ್ಯ ಸರಪಳಿಯನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಿ, ಹೂಡಿಕೆಯನ್ನು ಆಕರ್ಷಿಸಿ, ಉತ್ಪಾದನೆ, ಉದ್ಯೋಗ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವುದು. ಜವಳಿ ಉದ್ಯಮದ ಎಲ್ಲಾ ಮೌಲ್ಯ ಸರಪಳಿಯನ್ನೊಳಗೊಂಡ ಸಮಗ್ರ ದೊಡ್ಡ ಪ್ರಮಾಣದ ಮತ್ತು ಆಧುನಿಕ ಕೈಗಾರಿಕಾ ಮೂಲ ಸೌಕರ್ಯ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು. ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಕರ್ನಾಟಕವನ್ನು ಸ್ಪರ್ಧಾತ್ಮಕ ರಾಜ್ಯವನ್ನಾಗಿಸಲು ಹೂಡಿಕೆಗಳನ್ನು ಆಕರ್ಷಿಸಿ ಹೆಚ್ಚಿನ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಿದೆ. ಸುಸ್ಥಿರ ಕೈಗಾರೀಕರಣದ ಅನ್ವೇಷಣೆ ಹಾಗೂ ಉತ್ತೇಜನೆ, ನಾವಿನ್ಯ ಅನ್ವೇಷಣೆ, ಸ್ಥಿತಿಸ್ಥಾಪಕ ಸೌಕರ್ಯವನ್ನು ನಿರ್ಮಿಸುವವ ಧ್ಯೆಯೋದೇಶಗಳನ್ನು ಒಳಗೊಂಡಿದೆ” ಎಂದು ಮಾಹಿತಿ ನೀಡಿದರು.

“ಈ ಮೆಗಾ ಪಾರ್ಕ್ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ. ಅಲ್ಲದೇ ಸಾರ್ವಜನಿಕ-ಖಾಸಗಿಯವರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ರಾಯಚೂರು ಜಿಲ್ಲೆಯ ರಾಯಚೂರು, ಧಾರವಾಡ ಜಿಲ್ಲೆಯ ನವಲಗುಂದ, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮತ್ತು ಚಿತ್ರದುರ್ಗ ಜಿಲ್ಲೆಯ ಕೊಂಡ್ಲಹಳ್ಳಿ ಈ ಭಾಗಗಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿರುತ್ತದೆ. ಖಾಸಗಿ ಒಡೆತನದಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಮತ್ತು ಉಡುಪುಗಳನ್ನು ಉತ್ತೇಜಿಸಲು ಟೆಕ್ಸಟೈಲ್ ಪಾರ್ಕ್ ಅನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ” ಎಂದರು.

ಪಿಎಂ ಮಿತ್ರ ಪಾರ್ಕ್ ಯೋಜನೆಯಡಿ ನಿರ್ಮಿತವಾಗಲಿರುವ ಪಾರ್ಕ್‌ 2 ಹಂತಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರವು 500 ಕೋಟಿಗಳ ಅನುದಾನ ಒದಗಿಸಲಿದೆ. ವಿವರಗಳನ್ನು ಅನುಬಂಧ-3 ರಲ್ಲಿ ಒದಗಿಸಿದೆ. ರಾಜ್ಯ ಸರ್ಕಾರವು ಸದರಿ ಪಾರ್ಕ್ನಲ್ಲಿ ಸ್ಥಾಪನೆ ಯಾಗಲಿರುವ ಜವಳಿ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಹಾಗೂ ನೀರನ್ನು ಸರಬರಾಜು ಮಾಡಲಿದೆ” ಎಂದು ತಿಳಿಸಿದರು.

ಬಳ್ಳಾರಿ ಜೀನ್ಸ್ ಟೆಕ್ಸ್‌ಟೈಲ್ ಪಾರ್ಕ್‌ಗೆ 50 ಎಕರೆ ಜಮೀನು

ಬಳ್ಳಾರಿ ಜಿಲ್ಲೆಯಲ್ಲಿ ಜೀನ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲು ಗೆ ಕೆಐಎಡಿಬಿ ಅವರಿಂದ ಆಲದಹಳ್ಳಿ ಗ್ರಾಮದ ಸರ್ವೆ ನಂ.122/ಎ ರ 50 ಎಕರೆ ಜಮೀನನ್ನು ಬಳ್ಳಾರಿ ಗಾರ್ಮೆಂಟ್ಸ್ ಎಕ್ಸ್ಪೋರ್ಟ್ ಕ್ಲಸ್ಟರ್ ಪ್ರೈವೆಟ್.ಲಿ. ಬಳ್ಳಾರಿ ಅವರಿಗೆ ಹಂಚಿಕೆ ಮಾಡಲಾಗಿದೆ” ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಸದಸ್ಯ ವ್ಯೆ.ಎಂ.ಸತೀಶ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, “ಸದರಿ ಎಸ್.ಪಿ.ವಿ. ಮುಖಾಂತರ ಜವಳಿ ಪಾರ್ಕ್ ನ್ನು ಸ್ಥಾಪಿಸಲು ಅವಶ್ಯವಿರುವ ಪ್ರಾರಂಭಿಕ ಕ್ರಮಗಳು ಅಂದರೆ, ವಿವಿಧ ಇಲಾಖೆಗಳಿಂದ ಪ್ರಮಾಣ ಪತ್ರಗಳನ್ನು ಹಾಗೂ KIADB ಬೆಂಗಳೂರು ರವರಿಂದ ವಿವರವಾದ ಯೋಜನ ವರದಿಗೆ ಅನುಮೋದನೆಯನ್ನು ಪಡೆದ ನಂತರ ಪಾರ್ಕ್‌ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.

“ಜೀನ್ಸ್ ಪಾರ್ಕ್ ಸ್ಥಾಪನೆಯಿಂದ ಎಲ್ಲಾ ಘಟಕಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸಿ ಉತ್ಪನ್ನಗಳ ಗುಣಮಟ್ಟದ ಹೆಚ್ಚಳ ಹಾಗೂ ಉತ್ಪಾದನಾ ವೆಚ್ಚ ಸಾಗಾಣಿಕೆ ವೆಚ್ಚ, Turnaround time ನ್ನು ಕಡಿಮೆಗೊಳಿಸಿ, ಸ್ಪರ್ಧಾತ್ಮಕ ದರದಲ್ಲಿ ಜೀನ್ಸ್ ಉತ್ಪನ್ನವನ್ನು ಮಾರುಕಟ್ಟೆಗೆ ಒದಗಿಸುವ ಉದ್ದೇಶ ಹೊಂದಲಾಗಿದೆ ಹಾಗೂ ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕಲ್ಪಿಸಲಾಗುವುದು” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments