Homeಕರ್ನಾಟಕಶಾಲಾ ಮಕ್ಕಳಿಗೆ ಗ್ರಾಮ ಸ್ವರಾಜ್ಯದ ಪರಿಚಯ ಕಾರ್ಯಕ್ರಮಕ್ಕೆ ನಾಳೆ ಈಶ್ವರ ಖಂಡ್ರೆ ಚಾಲನೆ

ಶಾಲಾ ಮಕ್ಕಳಿಗೆ ಗ್ರಾಮ ಸ್ವರಾಜ್ಯದ ಪರಿಚಯ ಕಾರ್ಯಕ್ರಮಕ್ಕೆ ನಾಳೆ ಈಶ್ವರ ಖಂಡ್ರೆ ಚಾಲನೆ

ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಜನ್ಮದಿನ -ಮಕ್ಕಳ ದಿನಾಚರಣೆ ಅಂಗವಾಗಿ ನ.13ರಿಂದ 30ರವರೆಗೆ ರಾಜ್ಯದ ವಿವಿಧ ಗ್ರಾ.ಪಂ.ಗಳಲ್ಲಿ ನಡೆಯಲಿರುವ ಮಕ್ಕಳ ಗ್ರಾಮಸಭೆಗೆ ಈಶ್ವರ ಖಂಡ್ರೆ ಶುಕ್ರವಾರ ಬೆಂಗಳೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಜಕ್ಕೂರು ವಿಮಾನ ನಿಲ್ದಾಣದ ಬಳಿ ಇರುವ ಮಹಾತ್ಮಾಗಾಂಧೀ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದ ಮಾದರಿ ಪಾರಂಪರಿಕ ಗ್ರಾಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿರುವ ಈಶ್ವರ ಖಂಡ್ರೆ ಮಕ್ಕಳ ಗ್ರಾಮ ಸಭೆ ಸರಣಿ ಉದ್ಘಾಟಿಸಲಿದ್ದಾರೆ.

ಗ್ರಾ.ಪಂ. ಮಟ್ಟದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಮಕ್ಕಳ ಗ್ರಾಮ ಸಭೆ ಆಯೋಜಿಸಲಾಗುತ್ತಿದ್ದು, ಹಳ್ಳಿಗಳ ಪರಿಚಯವೇ ಇಲ್ಲದ ನಗರದ ವಿದ್ಯಾರ್ಥಿಗಳಿಗೆ ಪಾರಂಪರಿಕ ಗ್ರಾಮದ ದರ್ಶನ ಮಾಡಿಸುವುದರ ಜೊತೆಗೆ ಗ್ರಾಮ ಆಡಳಿತ ಹೇಗೆ ನಡೆಯುತ್ತದೆ ಎಂಬ ಪರಿಚಯ ಮಾಡಿಸಲಾಗುತ್ತಿದೆ.

ಮಿಗಿಲಾಗಿ ಮಕ್ಕಳ ಹಕ್ಕುಗಳು, ಪೌಷ್ಟಿಕಾಂಶ, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆಯೂ ಮಕ್ಕಳಿಗೆ ಜಾಗೃತಿ ಮೂಡಿಸಲು ಈ ಗ್ರಾಮ ಸಭೆ ನೆರವಾಗಲಿದೆ. ಹೀಗಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳ ಗ್ರಾಮಸಭೆ ಆಯೋಜಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments