ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಸವರಾಜ ಹೊರಟ್ಟಿ ಅವರು ಇಂದು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
10 ನಿಮಿಷಗಳ ಕಾಲ ಸಿಎಂ ಜೊತೆ ಮಾತುಕತೆ ನಡೆಸಿ, ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರ ಬಂದರು. ಹೊರಟ್ಟಿ ಅವರನ್ನ ಬೀಳ್ಕೊಡಲು ಗೇಟ್ ವರೆಗೂ ಮುಖ್ಯಮಂತ್ರಿಗಳು ಹೊರಬಂದಿದ್ದರು. ಈ ವೇಳೆ ಸಿಟ್ಟಲ್ಲಿದ್ದ ಹೊರಟ್ಟಿ ತಮ್ಮ ಸಿಬ್ಬಂದಿಗೆ, ‘ಏ.. ಕಾರು ಎಲ್ಲಿದೆ’ ಎಂದು ಕೇಳಿದರು. ಸಿಎಂ ಶಿವಕುಮಾರ್ ಅವರನ್ನು ಹಿಂದೆ ತಿರುಗಿಯೂ ನೋಡದೆ ಕಾರಲ್ಲಿ ಹೊರಟರು.
ಖಾಸಗಿ ಸುದ್ದಿ ಚಾನೆಲ್ ಜೊತೆ ಮಾತನಾಡಿದ ಹೊರಟ್ಟಿ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಮೇಯವೇ ಬರುವುದಿಲ್ಲ, ನಾನು ಆಗಸ್ಟ್ 14 ರಂದು ರಾದಿನಾನೆ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದ್ದರು. ಆದರೆ ಇಂದೇ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿರುವುದಾಗಿ ಉಪ ಸಭಾಪತಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.


