Homeಕರ್ನಾಟಕಕಾರ್ಯಕರ್ತರಿಂದ ಅಭಿಮಾನೋತ್ಸವ, ಪಕ್ಷ ಬಲಪಡಿಸಲು ಜಿಲ್ಲಾ ಪ್ರವಾಸ: ಬಿ.ಎಸ್.ಯಡಿಯೂರಪ್ಪ

ಕಾರ್ಯಕರ್ತರಿಂದ ಅಭಿಮಾನೋತ್ಸವ, ಪಕ್ಷ ಬಲಪಡಿಸಲು ಜಿಲ್ಲಾ ಪ್ರವಾಸ: ಬಿ.ಎಸ್.ಯಡಿಯೂರಪ್ಪ

ಪಕ್ಷಾತೀತವಾಗಿ ನೂರಾರು ಸ್ವಾಮೀಜಿಗಳು, ಅನೇಕ ಹಿರಿಯರನ್ನು ಕರೆದು ಮೇ 9ರಂದು ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂದು ಬರುತ್ತಿರುವುದು ವಿಶೇಷ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ಮುಂದಿನ ದಿನಗಳಲ್ಲಿ ವಾರಕ್ಕೆ ಒಂದು ದಿನ ಒಂದೊಂದು ಜಿಲ್ಲೆಗೆ ತೆರಳಿ ಪಕ್ಷವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನುಡಿದರು.

“ಕಾರ್ಯಕರ್ತರು ತಮ್ಮ ಮೇಲೆ ಅಭಿಮಾನದೊಂದಿಗೆ ಶ್ರಮಪಟ್ಟು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದು ಅಭೂತಪೂರ್ವ ಕಾರ್ಯಕ್ರಮವಾಗಲಿದೆ. ಶೃಂಗೇರಿಯ ಜನರಿಗೆ ಅಭಿನಂದನೆ ಸಲ್ಲಿಸುವೆ. ಬರುವಂಥ ದಿನಗಳಲ್ಲಿ ಜೀವರಾಜ್ ಇನ್ನೂ ದೊಡ್ಡ ಶಕ್ತಿಯುತವಾಗಿ ಬೆಳೆಯಲಿ ಎಂದು ಅವರು ಆಶಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments