Homeರಾಜಕೀಯಕೇರಳದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಜಾರಿ: ಜಮೀರ್ ಅಹಮದ್ ಖಾನ್

ಕೇರಳದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಜಾರಿ: ಜಮೀರ್ ಅಹಮದ್ ಖಾನ್

ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ ಅನುಷ್ಠಾನ ಗೊಳಿಸಲಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಕೇರಳ ಚುನಾವಣೆ ಪ್ರಚಾರದಲ್ಲಿರುವ ಸಚಿವರು ಕ್ಯಾಲಿ ಕಟ್ ನ ಬೇಪೂರ್ ವಿಧಾನ ಸಭೆ ಕ್ಷೇತ್ರದ ಯು ಡಿ ಎಫ್ ಅಭ್ಯರ್ಥಿ ಪಿ. ವಿ. ಅನ್ವರ್ ಪರ ಪ್ರಚಾರಸಭೆಯಲ್ಲಿ ಪಾಲ್ಗೊಂಡು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಹೆಣ್ಣು ಮಕ್ಕಳಿಗೆ ಮಾಸಿಕ ಒಂದು ಸಾವಿರ ರೂ., ಪ್ರತಿ ಕುಟುಂಬಕ್ಕೆ 25 ಲಕ್ಷ ವಿಮೆ, ಹಿರಿಯ ನಾಗರಿಕರಿಗೆ 2 ಸಾವಿರ ಮಾಸಿಕ ಪಿಂಚಣಿ, ಐದು ಲಕ್ಷ ರೂ. ಬಡ್ಡಿ ರಹಿತ ವೃತ್ತಿ ಪ್ರೋತ್ಸಾಹ ಸಾಲ ಯೋಜನೆ ಗಳನ್ನು ರಾಹುಲ್ ಗಾಂಧಿ ಅವರು ಇಲ್ಲಿಯೂ ಘೋಷಣೆ ಮಾಡಿದ್ದು ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಎಲ್ ಡಿ ಎಫ್ ನವರು ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಕರ್ನಾಟಕ ದಲ್ಲೂ ಪ್ರತಿಪಕ್ಷ ದವರು ಹಾಗೆಯೇ ಹೇಳಿದ್ದರು. ನಾವು ಜಾರಿ ಮಾಡಲಿಲ್ಲವೇ. ಇಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ ಅವರ ಸಾಧನೆ ಶೂನ್ಯ ಎಂದು ಟೀಕಿಸಿದರು.
ಕಾರ್ಯಕ್ರಮ ದ ನಂತರ ಜಮೀರ್ ಅಹಮದ್ ಖಾನ್ ಅವರು ಯಳ ತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಬಾಲಕೃಷನ್ ಪರ ರೋಡ್ ಶೋ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments