ದಾವಣಗೆರೆಯ ಎಸ್.ಎಸ್. ಆಸ್ಪತ್ರೆ ಸಮೀಪದ ಲಘು ವಾಹನ ಅಂಡರ್ ಪಾಸ್ (LVUP) ಹಾಗೂ ಬಾಡಾ ಕ್ರಾಸ್‌ನ ವಾಹನ ಅಂಡರ್ ಪಾಸ್ (VUP) ಗಾತ್ರವನ್ನು ರಾಷ್ಟ್ರೀಯ ಹೆದ್ದಾರಿ ಮಾರ್ಗಸೂಚಿಗಳ ಪ್ರಕಾರ ವಿಸ್ತರಿಸುವಂತೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಬುಧವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಪ್ರಸ್ತುತ ಈ ಅಂಡರ್ ಪಾಸ್‌ಗಳು ಸಣ್ಣ ಗಾತ್ರದಲ್ಲಿದ್ದು, ಹೆಚ್ಚುತ್ತಿರುವ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಭವಿಷ್ಯದ ಸಂಚಾರ ದಟ್ಟಣೆ ಹಾಗೂ ಅಗತ್ಯಗಳನ್ನು ಮನಗಂಡು ಅವುಗಳನ್ನು ವಿಶಾಲಗೊಳಿಸುವುದು ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರಭಾಗದಲ್ಲಿ ಸಂಪರ್ಕ ಕಲ್ಪಿಸಲು ಬಾಡಾ ಕ್ರಾಸ್ ಪ್ರಮುಖ ಪ್ರದೇಶವಾಗಿದ್ದು, ಪ್ರತಿನಿತ್ಯ ಭಾರಿ ವಾಹನ ಸಂಚಾರವಿರುತ್ತದೆ ಹಾಗೂ ಎಸ್‌ಎಸ್ ಆಸ್ಪತ್ರೆ ಪ್ರದೇಶವು ಪ್ರಮುಖ ಆರೋಗ್ಯ ಸೇವಾ ಕೇಂದ್ರವಾಗಿದೆ ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ಸಹ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ ಅಂಡರ್‌ಪಾಸ್‌ಗಳ ಸೀಮಿತ ಅಗಲ ಮತ್ತು ಸಂಚಾರ ಪರಿಸ್ಥಿತಿಯಿಂದಾಗಿ ಸಂಚಾರ ದಟ್ಟಣೆ, ಸುರಕ್ಷತಾ ಸಮಸ್ಯೆಗಳು ಹಾಗೂ ಆಂಬ್ಯುಲೆನ್ಸ್‌ಗಳು ಮತ್ತು ಸಾರ್ವಜನಿಕ ಸಾರಿಗೆ ವಾಹನಗಳ ತುರ್ತು ಸಂಚಾರದಲ್ಲಿ ವಿಳಂಬ ಉಂಟಾಗುತ್ತಿದೆ.
ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗಸೂಚಿಗಳ ಪ್ರಕಾರ ವಿಸ್ತರಿಸುವಂತೆ ಸಂಸದರು ಮನವಿ ಮಾಡಿದ್ದಾರೆ.
ಮನವಿಯಲ್ಲಿ ಸೂಚಿಸಿರುವ ಪ್ರಮುಖ ಅಂಶಗಳು
1.ದೊಡ್ಡ ಗಾತ್ರದ ಅಂಡರ್ ಪಾಸ್‌ಗಳ ನಿರ್ಮಾಣ
2. ಪಾದಚಾರಿಗಳು ಹಾಗೂ ಮೋಟಾರು ರಹಿತ 3.ವಾಹನಗಳಿಗೆ ಪ್ರತ್ಯೇಕ ದಾರಿಗಳ ವ್ಯವಸ್ಥೆ
4.ಸುರಕ್ಷಿತ ಇಳಿಜಾರು (ರ್ಯಾಂಪ್) ವ್ಯವಸ್ಥೆ
5.ಉತ್ತಮ ಗುಣಮಟ್ಟದ ಸ್ಲಿಪ್ ರಸ್ತೆಗಳ ಅಭಿವೃದ್ಧಿ


