Homeಕರ್ನಾಟಕಮಹಿಳೆಯರು ಅಬಲೆಯರಲ್ಲ, ಸಾಧಕರು: ಈಶ್ವರ ಖಂಡ್ರೆ

ಮಹಿಳೆಯರು ಅಬಲೆಯರಲ್ಲ, ಸಾಧಕರು: ಈಶ್ವರ ಖಂಡ್ರೆ

ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು ಎಂಬುದನ್ನು ಇಂದಿರಾಗಾಂಧೀ ಅವರು ನಿರೂಪಿಸಿದ್ದು, ಇಂದು ಎಲ್ಲ ಕ್ಷೇತ್ರದಲ್ಲೂ ಪುರುಷನಿಗೆ ಸಮನಾಗಿ ಸಾಧಿಸುತ್ತಿರುವ ಮಹಿಳೆಯರು ಅಬಲೆಯರಲ್ಲ, ಬದಲಾಗಿ ಸಾಧಕರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.

ಅರಣ್ಯ ಇಲಾಖೆಯ ವತಿಯಿಂದ ಇಂದು ಆಯೋಜಿಸಲಾಗಿದ್ದ ಮಹಿಳಾ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪದ್ಮಶ್ರೀ ಪುರಸ್ಕೃತೆ ಡಾ. ಎಸ್.ಜಿ. ಸುಶೀಲಮ್ಮ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಇಂದು ಅರಣ್ಯ ಇಲಾಖೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ಇದ್ದು, ರಾಜ್ಯ ಅರಣ್ಯ ಇಲಾಖೆಯ ಅತ್ಯುನ್ನತ “ಅರಣ್ಯ ಪಡೆ ಮುಖ್ಯಸ್ಥ’’ರ ಹುದ್ದೆಯನ್ನೇ ಮಹಿಳೆ ನಿರ್ವಹಿಸುತ್ತಿದ್ದಾರೆ ಎಂದರು.

ತಾಯಿಯ ಪಾತ್ರ ಹಿರಿದು

ಮನೆಯಲ್ಲಿ ಮಕ್ಕಳಿಗೆ ತಾಯಿಯಾಗಿ, ಸೋದರಿಯಾಗಿ, ಪತಿಗೆ ಮಡದಿಯಾಗಿ ಶ್ರಮಿಸುವ ಮಹಿಳೆ ಕಚೇರಿಯಲ್ಲೂ ಕಾರ್ಯ ನಿರ್ವಹಿಸುವ ಮೂಲಕ, ಸಂಸಾರದ ರಥ ಎಳೆಯುತ್ತಾರೆ, ಮಹಿಳೆಯರಿಗೆ ತಾಳ್ಮೆ ಹೆಚ್ಚು. ಅದಕ್ಕೇ ಕ್ಷಮಯಾ ಧರಿತ್ರೀ ಎನ್ನುವುದು. ತಾಯಿಯಾಗಿ ನೀವೆಲ್ಲರೂ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಿ, ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ರಾಜ್ಯದ ಮತ್ತು ಆ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿ ಎಂದರು.

ಮಹಿಳಾ ದಿನದ ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೀನಾಕ್ಷಿ ನೇಗಿ, ರಾಧಾದೇವಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments