Homeಕರ್ನಾಟಕಎರಡನೇ ರಾಜ್ಯ ಪ್ರವಾಸ ಅತೀ ಶೀಘ್ರದಲ್ಲೇ ಮಾಡ್ತೀನಿ: ನಿಖಿಲ್ ಕುಮಾರಸ್ವಾಮಿ

ಎರಡನೇ ರಾಜ್ಯ ಪ್ರವಾಸ ಅತೀ ಶೀಘ್ರದಲ್ಲೇ ಮಾಡ್ತೀನಿ: ನಿಖಿಲ್ ಕುಮಾರಸ್ವಾಮಿ

ರಾಜ್ಯದ ಮುಖ್ಯಮಂತ್ರಿ ಸಿದ್ರಾಮಣ್ಣ ಅವರು ತಾವು ನಡೆದು ಬಂದ ದಾರಿಯನ್ನು ಮರೆತಿದ್ದಾರೆ. ಇದು ಅವರಿಗೆ ಮಾಡಿಕೊಳ್ಳುತ್ತಿರುವ ಅನ್ಯಾಯ. ನೀವು ಹಿರಿಯರು, ಅನುಭವಿಗಳು ಗೌರವಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸೂಕ್ಷ್ಮವಾಗಿ ಕುಟುಕಿದರು.

ಜೆಡಿಎಸ್ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ರಾಜ್ಯ ಕಛೇರಿ ಜೆ.ಪಿ. ಭವನದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮಹಾ ಅಧಿವೇಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನತಾಪರಿವಾರದಲ್ಲಿ ಅಂದು ದೊಡ್ಡ ದೊಡ್ಡ ನಾಯಕರಿದ್ದರು. ಅವರೆಲ್ಲರನ್ನ ಬಿಟ್ಟು ಸಿದ್ದರಾಮಯ್ಯ ಅವರನ್ನ ಹಣಕಾಸು ಬಜೆಟ್ ಮಂಡನೆ ಮಾಡಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಸನ್ಮಾನ್ಯ ದೇವೇಗೌಡರು. ಇದು ಪಕ್ಷ ಮಾಡಿದ್ದು. ಅವರನ್ನ ಉಪಮುಖ್ಯಮಂತ್ರಿಯ ಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು ಇದೇ ದೇವೇಗೌಡರು. ಈಗ ನಡೆದು ಬಂದ ದಾರಿ ಮರೆತಿದ್ದಾರೆ ಎಂದು ವಾಗ್ದಾಳಿ
ನಡೆಸಿದರು.

ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಬದ್ಧತೆ ದೃಷ್ಟಿಯಲ್ಲಿ, ಎಲ್ಲರನ್ನು ಸಮಾನತೆ ದೃಷ್ಟಿಯಿಂದ ಬೆಳೆಸುವ ಗುಣ ಕರ್ನಾಟಕದಲ್ಲಿ ಯಾರಿಗಾದ್ರು ಇದ್ರೆ ಅದು ಸನ್ಮಾನ್ಯ ದೇವೇಗೌಡರಿಗೆ. ಈಗ ಸಿದ್ರಾಮಣ್ಣ ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಡ್ತಾರೆ. ಅವರು ಬೆಳೆದು ಬಂದ ದಾರಿ ಮರೆತಿದ್ದಾರೆ. ಅವರಿಗೆ ದೇವರು ಒಳ್ಳೇದು ಮಾಡಲಿ ಎಂದು ಹೇಳಿದರು.

ಸನ್ಮಾನ್ಯ ದೇವೇಗೌಡರು ಈ ವಯಸ್ಸಿನಲ್ಲೂ ಅವರ ಜೀವನ ಸಾರ್ವಜನಿಕ ಸೇವೆಗೆ ಮೂಡುಪಾಗಿಟಿದ್ದಾರೆ. ದೇಶದ ಇತಿಹಾಸದಲ್ಲೆ ಇಂಥ ವ್ಯಕ್ತಿತ್ವವನ್ನ ನಾವು ಹಿಂದೆ ನೋಡಿಲ್ಲ, ಮುಂದೆ ನೋಡಲ್ಲ. ದೇವೇಗೌಡರು ನಮ್ಮಂತ ಯುವಕರಿಗೆ ಸ್ಫೂರ್ತಿ. ಎಲ್ಲರೂ ಪಕ್ಷತೀತವಾಗಿ ಅವರನ್ನ ಆರಾಧಿಸುತ್ತಾರೆ. ಕುಮಾರಣ್ಣ ಮಗನಾಗಿ ಹುಟ್ಟಿರುವುದೇ ನನ್ನ ಸೌಭಾಗ್ಯ ಎಂದು ನಿಖಿಲ್ ಭಾವುಕಾರಾದರು.

ದೇವೇಗೌಡರಿಗೆ ಇರುವುದು ಒಂದೇ ಆಸೆ ಅವರ ಕಣ್ಮುಂದ್ದೆ ಜೆಡಿಎಸ್ ಪಕ್ಷವನ್ನ ಸ್ವತಂತ್ರವಾಗಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಟ ಮಾಡೋಣ. ಜನತಾದಳ ಸದಸ್ಯತ್ವದ ಅಭಿಯಾನ ಶೇ 30% ರಿಂದ 40% ಅಷ್ಟೇ ನಾವು ಗುರಿ ಮುಟ್ಟಿದ್ದೇವೆ. ಮತ್ತಷ್ಟು ಚುರುಕಾಗಿ ಮಾಡ್ಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ರಜತ ಮಹೋತ್ಸವ ಕಾರ್ಯಕ್ರಮವನ್ನು ನಾಡಿನೆಲ್ಲಡೆ ಆಚರಿಸೋಣ

ಈ ರಜತ ಮಹೋತ್ಸವ ಕಾರ್ಯಕ್ರಮವನ್ನು ನಾಡಿನೆಲ್ಲಡೆ ಆಚರಿಸೋಣ, ಈವರೆಗೆ 52 ವಿಧಾನಸಭಾ ಕ್ಷೇತ್ರದಲ್ಲಿ ಜನರೊಂದಿಗೆ ಜನತಾಳ ಕಾರ್ಯಕ್ರಮ ಮಾಡಿದ್ದೇನೆ ಮುಂಬರುವ ದಿನಗಳಲ್ಲಿ ಎರಡನೇ ಹಂತದ ಪ್ರವಾಸದ ಮೂಲಕ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಆಗಮಿಸುತ್ತೇನೆ.

ಮುಂಬರುವ 2028 ರ ಚುನಾವಣೆಯಲ್ಲಿ ನಾವು ಈ ಹಿಂದೆ ಗೆದ್ದ 58 ಸ್ಥಾನಗಳನ್ನು ಮೀರಿ ಗೆಲ್ಲಬೇಕಾಗಿದ್ದು, ಅದಕ್ಕಾಗಿ ನಾವೆಲ್ಲರೂ ಬಲಿಷ್ಠವಾಗಿ ಪಕ್ಷ ಕಟ್ಟೋಣ. ಮತ್ತೊಮ್ಮೆ ಕುಮಾರಣ್ಣನವರನ್ನು ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡೋಣ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ರವರು, ಕೋರ ಕಮೀಟಿ ಅಧ್ಯಕ್ಷರಾದ ಜೆ.ಕೆ. ಕೃಷ್ಣಾರೆಡ್ಡಿ ರವರು, ಸಂಸದರಾದ ಮಲ್ಲೇಶ್ ಬಾಬು ರವರು, ವಿವಿಧ ರಾಜ್ಯಗಳ ಪ್ರತಿನಿಧಿಗಳು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಆಹ್ವಾನಿತ ನಾಯಕರು, ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments