Homeಕರ್ನಾಟಕಬಹಿರಂಗ ಹೇಳಿಕೆಯಿಂದ ಯತ್ನಾಳ್‌ಗೆ ಒಳ್ಳೆಯದಾಗುವುದಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಬಹಿರಂಗ ಹೇಳಿಕೆಯಿಂದ ಯತ್ನಾಳ್‌ಗೆ ಒಳ್ಳೆಯದಾಗುವುದಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಪಕ್ಷದೊಳಗೆ ಯಾರಿಗಾದರೂ ದೂರುದುಮ್ಮಾನಗಳು ಇದ್ದರೆ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರ ಜತೆ ಮಾತುಕತೆ ನಡೆಸಬೇಕು. ಅದನ್ನು ಬಿಟ್ಟು ಪಕ್ಷದ ವಿರುದ್ಧ ಮಾತನಾಡಿದರೆ, ಬಹಿರಂಗ ಹೇಳಿಕೆ ಕೊಡುವುದು ಮಾಡಿದರೆ ಒಳ್ಳೆಯದಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಪದಾಧಿಕಾರಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಪರ ಇರುವವರಿಗೆ ಮಾತ್ರ ಸ್ಥಾನ ನೀಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

“ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡುವುದು ಸರಿ ಅಲ್ಲ, ರಾಜ್ಯಾಧ್ಯಕ್ಷರ ಆಯ್ಕೆ ತಪ್ಪಾಗಿದೆ ಎಂದು ಅನಿಸಿದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಲಿ. ಈ ರೀತಿ ಬಹಿರಂಗ ಹೇಳಿಕೆ ಕೊಡುವುದು ಸರಿ ಅಲ್ಲ” ಎಂದರು.

ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ರಾಷ್ಟ್ರೀಯ ಅಧ್ಯಕ್ಷರು, ವರಿಷ್ಠರು, ಪ್ರಧಾನಿಯವರು ಕೂತೇ ಆಯ್ಕೆ ಮಾಡಿರುತ್ತಾರೆ. ಇದು ರಾಷ್ಟ್ರೀಯ ಘಟಕದ ನಿರ್ಣಯ. ಇದಕ್ಕೆ ಬಹಿರಂಗವಾಗಿ ಹೇಳಿಕೆ ಕೊಡುವವರಿಗೆ ನಾನು ಹೇಳುವುದೇನೆಂದರೆ, ಬಿಜೆಪಿ ಹಿತಕಾಯುವವರು ತಮ್ಮ ಬಹಿರಂಗ ಹೇಳಿಕೆಗಳನ್ನು ಕೊಡುವುದು ತಕ್ಷಣ ನಿಲ್ಲಿಸಬೇಕು. ಇದು ಸರಿ ಅಲ್ಲ” ಎಂದು ಹೇಳಿದರು.

“ಯತ್ನಾಳ್ ಅವರು ಶಾಸಕರಿದ್ದಾರೆ. ಅವರನ್ನು ಕರೆದು ಮಾತನಾಡುವ ಕೆಲಸವನ್ನು ರಾಷ್ಟ್ರೀಯ ಅಧ್ಯಕ್ಷರು ಮಾಡುತ್ತಾರೆ” ಎಂದು ಇದೇ ವೇಳೆ ತಿಳಿಸಿದರು.

ಬಿಜೆಪಿ ಸರ್ಕಾರ ಬುರುಡೆ ಸರ್ಕಾರ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯಿಸಿ, “ಬುರುಡೆ ಯಾರು ಎಂಬ ಬಗ್ಗೆ ಹಿಂದೆ ಮಾತನಾಡಿದ್ದಾರೆ. 1971 ರಿಂದ ಗರಿಬಿ ಹಟಾವೋ ಎಂದು ಹೇಳಿದವರು ನೀವು, 1971 ರಿಂದ 1977 ರವರೆಗೆ, 1980 ರಿಂದ 1984 ರವರೆಗೆ, 1984 ರಿಂದ 1989 ರವರೆಗೆ 1991 ರಿಂದ 1996 ರವರೆಗೆ, 2004 ರಿಂದ 2010 ರವರೆಗೆ ಹೀಗೆ ಈ ಎಲ್ಲಾ ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಇಷ್ಟು ವರ್ಷಗಳ ಕಾಲ ನೀವು ಆಡಳಿತ ನಡೆಸಿದ್ದೀರಿ. ನಿಮಗೆ ಒಂದು ಗ್ಯಾಸ್ ಕೊಡಲು ಆಗಲಿಲ್ಲ” ಎಂದು ಟೀಕಿಸಿದರು.

ಕನ್ನಡ ಪರ ಹೋರಾಟಗಾರರ ಪರವಾಗಿ ಮಾತನಾಡಿದ ಅವರು, “ಕನ್ನಡ ಪರ ಹೋರಾಟಗಾರರ ಮೇಲೆ ಇದ್ದ ಬದ್ದ ಸೆಕ್ಷನ್​​ಗಳನ್ನು ಹಾಕಿ ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಸರಿಯಲ್ಲ. ಕನ್ನಡ ಬಳಕೆ ಮಾಡಬೇಕು ಎಂಬುದು ಕನ್ನಡಪರ ಹೋರಾಟಗಾರರ ಬೇಡಿಕೆ ನ್ಯಾಯಯುತವಾಗಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments