Homeಕರ್ನಾಟಕಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ್ದು ನಾನು: ಹೆಚ್‌ ಡಿ ದೇವೇಗೌಡ

ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ್ದು ನಾನು: ಹೆಚ್‌ ಡಿ ದೇವೇಗೌಡ

ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡ, ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಸತತ 4ನೇ ದಿನವೂ ಬಿರುಸಿನ ಪ್ರಚಾರ ನಡೆಸಿದರು.

ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಿಪುರ, ಬೂಹಳ್ಳಿ ಮತ್ತು ಚನ್ನಪಟ್ಟಣ ಪಟ್ಟಣಗಳಲ್ಲಿ ಪ್ರಚಾರ ನಡೆಸಿದರು. ಚನ್ನಪಟ್ಟಣ ತಾಲ್ಲೂಕಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ದೇವೇಗೌಡರು ತಮ್ಮ ಭದ್ರಾವತಿ ಮತ್ತು ತಾಲ್ಲೂಕು ಪಂಚಾಯತ್‌ಗಳಲ್ಲಿನ ಮಹಿಳಾ ಮೀಸಲಾತಿ ಜಾರಿಗೊಳಿಸಲು ಮಾಡಿದ ಹೋರಾಟವನ್ನು ಮೆಲುಕುಹಾಕಿದರು.

“ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ್ದೇನೆ. ಮೋದಿ ಅವರು ಸಹ ಆ ಬಿಲ್‌ಗೆ ಒಪ್ಪಿಗೆ ನೀಡಿದ್ದಾರೆ, ನಾನು ನಿಮ್ಮ ಮುಂದೆ ನಿಂತು ಆ ಬಿಲ್ ಅನ್ನು ಒಪ್ಪಿಗೆಯಾಯಿತು” ಎಂದು ದೇವೇಗೌಡ ಹೇಳಿದರು.

“ಈ ಸರ್ಕಾರವನ್ನು ಸರ್ಕಾರ ಎಂದು ಕರೆಯಲು ಆಗುವುದಿಲ್ಲ. ನೀವು ನಿಮ್ಮ ಆತ್ಮವನ್ನು ಪ್ರಶ್ನಿಸಿ, ಇದನ್ನು ಸರ್ಕಾರ ಎಂದು ಕರೆಯುತ್ತೀರಾ?” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

“1957ರಲ್ಲಿ ನಾನು ಕಾಂಗ್ರೆಸ್ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದ್ದೆ. ನಿಮ್ಮ ಬೆಂಬಲದಿಂದ ನಾನು ವರದೇಗೌಡರನ್ನು ವಿಧಾನಸೌಧಕ್ಕೆ ಕರೆದೊಯ್ದೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಬಡವರಿಗೆ ಐದು ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದೆ. ನಾವು ಶಾಂತಿಯಾಗಿ ಬದುಕಬೇಕು ನಾನು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಆಗಿದ್ದೆ. ನಾವು ಎಲ್ಲರೂ ಮಾನವರು, ಹಿಂದೂ ಮತ್ತು ಮುಸ್ಲಿಂ ನಾವೆಲ್ಲರೂ ಒಂದೇ” ಎಂದರು.

“ಇಂಥ ನಿರ್ಲಕ್ಷ್ಯತೆ ಇರುವ ಸರ್ಕಾರವನ್ನು ಎಂದೂ ನೋಡಿಲ್ಲ. ಸರ್ಕಾರದ ನೀತಿಗಳನ್ನು ಜನರು ಪ್ರಶ್ನಿಸಬೇಕಾಗಿದೆ. ನಮ್ಮ ಭವಿಷ್ಯ ಅಪಾಯಕಾರಿ ಸ್ಥಿತಿಯಲ್ಲಿದೆ. ನಾವು ಜನರಿಗೆ ಸೇವೆ ಮಾಡುವ ಸರ್ಕಾರವನ್ನು ಆಯ್ಕೆ ಮಾಡಬೇಕು. ಕೊರತೆ ಇರುವ ಸರ್ಕಾರವನ್ನು ಅಲ್ಲ” ಎಂದು ಹೇಳಿದರು.

“ಚುನಾವಣೆ 13 ರಂದು ನಡೆಯುತ್ತದೆ, ಫಲಿತಾಂಶ 23 ರಂದು ಪ್ರಕಟವಾಗುತ್ತದೆ. ನಾನು ನಿಮ್ಮ ಜೊತೆಯಾಗಿ ಕೆಲಸಕ್ಕೆ ಮಾಡುತೇನೆ. ನಾನು ಮುಸ್ಲಿಂ ಮೊಹಲ್ಲಾದಲ್ಲಿ ನಿಮ್ಮೊಂದಿಗೆ ಕುಳಿತುಕೊಳ್ಳುತ್ತೇನೆ” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಜೆಡಿಎಸ್ ಶಾಸಕರು ಬಂಡಪ್ಪ ಕಾಶೆಂಪುರ ಮತ್ತು ಮಾಗಡಿ ಮಂಜುನಾಥ್, ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು, ಮಾಜಿ ಕಾರ್ಪೋರೇಟರ್ ಇಮ್ರಾನ್ ಪಾಷಾ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments