ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿರುವ ಆರೋಪ ಬಿಜೆಪಿ ಮುಖಂಡ ಮತ್ತು ವಕೀಲ ದೇವರಾಜೇಗೌಡ ವಿರುದ್ಧ ಕೇಳಿಬಂದಿದ್ದು, ಕೂಡಲೇ ಅವನ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವನನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪುಟ್ಟರಾಜು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೇವರಾಜೇಗೌಡ ವಿರುದ್ಧ ಹೈಗೌಂಡ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ, “ರಾಜ್ಯದ ಜನತೆಗೆ ದೇವರಾಜೇಗೌಡನ ನೈಜ ಚಿತ್ರಣವನ್ನು ಹಾಗೂ ಹಿನ್ನೆಲೆಯನ್ನು ಬಹಿರಂಗಪಡಿಸಬೇಕು” ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಹಾಸನ ಲೈಂಗಿಕ ಪ್ರಕರಣದಲ್ಲಿ ದೇವರಾಜೇಗೌಡ ದೊಡ್ಡ ಬ್ಲ್ಯಾಕ್ ಮೇಲ್ರ. ಮಹಿಳೆಯನ್ನು ಕಾಮಾಂಧನಾ ರೀತಿಯಲ್ಲಿ ಪ್ರಚೋದಿಸಿ ಒತ್ತಾಯಪೂರ್ವಕವಾಗಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಅವನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ತಿಳಿಸಲಾಗಿದೆ.
“ದೇವರಾಜೇಗೌಡ ಪೆನ್ ಡ್ರೈವ್ ಬ್ಲಾಕ್ ಮೇಲರ್ ಎಂದು ಈಗಾಗಲೇ ಕುಖ್ಯಾತಿ ಗಳಿಸಿದ್ದಾನೆ. ಇವನ ವಿರುದ್ಧ ಸಂತ್ರಸ್ತೆಯೊಬ್ಬರು 01/04/2024 ರಂದು ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ದೂರು ನೀಡಿರುವುದು ಬಹಿರಂಗವಾಗಿದೆ. ಆ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಪೆನ್ ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದ ಆರೋಪಿ ಇಂದು ಅವನ ಹೀನಾಯ ತನ ಬಹಿರಂಗವಾಗಿದೆ” ಎಂದು ಉಲ್ಲೇಖಿಸಿಲಾಗಿದೆ.