Homeಕರ್ನಾಟಕಶೋಭಾ ಕರಂದ್ಲಾಜೆಗೆ ಯಾಕೆ ಇ.ಡಿ ನೋಟಿಸ್ ಕೊಟ್ಟಿಲ್ಲ: ರಮೇಶ್‌ ಬಾಬು ಪ್ರಶ್ನೆ

ಶೋಭಾ ಕರಂದ್ಲಾಜೆಗೆ ಯಾಕೆ ಇ.ಡಿ ನೋಟಿಸ್ ಕೊಟ್ಟಿಲ್ಲ: ರಮೇಶ್‌ ಬಾಬು ಪ್ರಶ್ನೆ

ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಯಾಕೆ ಇ.ಡಿ ನೋಟಿಸ್ ಕೊಟ್ಟಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಮೇಶ್‌ ಬಾಬು ಪ್ರಶ್ನಿಸಿದರು

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷಕ್ಕೆ ಯಾಕೆ ನೋಟಿಸ್ ಕೊಡಲಾಗಿದೆ. ಕೇಜ್ರಿವಾಲ್ ಮೇಲೆ ಯಾವ ಆರೋಪವಿಲ್ಲ. ಕೆಲವು ವಿಟ್ನೆಸ್ ಬಳಸಿಕೊಂಡು ಅರೆಸ್ಟ್ ಮಾಡಲಾಗಿದೆ” ಎಂದು ಕಿಡಿಕಾರಿದರು.

“350 ಎಕರೆ ಭೂಮಿಯನ್ನು ಡಿನೋಟಿಪಿಕೇಶನ್ ಮಾಡಿದ್ದಾರೆ. ಶೋಭಾ ಕರಂದ್ಲಾಜೆ ಮೇಲೆ 48 ಕೋಟಿ ಹಣ ವರ್ಗಾವಣೆ ಆರೋಪ ಇದೆ. ಇದು 2010 ರಲ್ಲಿ ನಡೆದಿರುವ ಹಗರಣ. ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಪ್ರಕರಣ ಇದೆ. ಶೋಭಾ ಮೇಲೆ 24 ಗಂಭೀರ ಆರೋಪಗಳು ಇವೆ. ಇಷ್ಟಿದ್ದರೂ ಅವರನ್ನು ಕೇಂದ್ರದಲ್ಲಿ ಮಂತ್ರಿ‌ಮಾಡಿದ್ದಾರೆ. ಹೇಗೆ ಅವರನ್ನು ಮಂತ್ರಿ ಮಾಡಲಾಗಿದೆ?” ಎಂದು ಕುಟುಕಿದರು.

“ಕಳಂಕಿತರನ್ನ ಸಂಪುಟದಲ್ಲಿ ಮುಂದುವರೆಸಬಾರದು. ಪ್ರತಿಪಕ್ಷಗಳಲ್ಲಿದ್ದರೆ ತಕ್ಷಣ ಬಂಧಿಸ್ತೀರಾ? ಬಿಜೆಪಿ ನಾಯಕರಿಗೆ ಮಾತ್ರ ಯಾವುದೂ ಇಲ್ಲ. ಶೋಭಾ ಕರಂದ್ಲಾಜೆ ಮೇಲೆ 10 ವರ್ಷ ಕೇಸ್ ಇದೆ. ಅವರಿಂದ 70 ಲಕ್ಷ ಹಣ ಸೀಜ್ ಮಾಡಿದ್ದಾರೆ. ಇಷ್ಟಾದ್ರೂ ಯಾಕೆ ಬಂಧಿಸಿಲ್ಲ. ನಮಗೆ ಇ.ಡಿಯವರ ಮೇಲೆ ಅನುಮಾನವಿದೆ” ಎಂದರು.

“ಈ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕು. ಕೂಡಲೇ ಸಂಪುಟದಿಂದ ಅವರನ್ನ ಕೈಬಿಡಬೇಕು. ಸುಪ್ರೀಂ ಜಡ್ಜ್ ಮೆಂಟ್ ನಲ್ಲಿ ಹಲವು ದಾಖಲೆ ಇವೆ. ಗುರುತರ ಆರೋಪ ಮುಚ್ಚಿಡುವಂತಿಲ್ಲ. ಆದರೆ ಇವರು ಆರೋಪ‌ ಮುಚ್ಚಿಟ್ಟಿದ್ದಾರೆ. ಈಗ ಮತ್ತೆ ಶೋಭಾ ಅವರನ್ನು ಬೆಂಗಳೂರು ಉತ್ತರಕ್ಕೆ ನಿಲ್ಲಿಸಲಾಗಿದೆ” ಎಂದು ವಾಗ್ದಾಳಿ ನಡೆಸಿದರು.

ಪ್ರೊ.ರಾಜೀವ್ ಗೌಡ ಮಾತನಾಡಿ, “ಉಡುಪಿ ಚಿಕ್ಕಮಗಳೂರು ಸಂಸದೆಯಾಗಿದ್ದರು ಈಗ ಬೆಂಗಳೂರು ಉತ್ತರಕ್ಕೆ ಬಂದಿದ್ದಾರೆ. ಇ.ಡಿ ಪ್ರಕರಣದಲ್ಲಿ 24ನೇ ಆರೋಪಿ ಅವರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಇವರ ಮೇಲೆ ಕ್ರಮ‌ಜರುಗಿಸಬೇಕು. ದೇಶದ ಕಾನೂನು ಎಲ್ಲಿಗೆ ಹೋಗಿದೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಪ್ರಧಾನಿ ನಾ ಕಾವೂಂಗಾ ಕಾನೇದೂಂಗಾ ಅಂತಾರೆ. ಅಕ್ರಮ ಹಣ ವರ್ಗಾವಣೆ ಆರೋಪ ಇದ್ರೂ ಯಾಕೆ ಕ್ರಮವಿಲ್ಲ? ಡಿಕೆಶಿಗೆ ಪದೇ ಪದೇ ನೋಟಿಸ್ ಕೊಟ್ಟಿದ್ದರು. ತಿಹಾರ್ ಜೈಲಿಗೂ ಕಳಿಸಲಾಗಿತ್ತು. ಜಾರ್ಖಂಡ್ ಸಿಎಂ,ದೆಹಲಿ ಸಿಎಂ ಜೈಲಿಗೆ ಹಾಕಿದ್ದಾರೆ. ಬಿಜೆಪಿ ನಾಯಕರಿಗೆ ಒಂದು ಕಾನೂನು. ಇತರರಿಗೆ ಬೇರೆ ಕಾನೂನಾ?” ಎಂದು ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments