Homeಕರ್ನಾಟಕ'WELCOME TO MR. BOND' ಎಂದು ಸಂಬೋಧಿಸಿ, ಮೋದಿ ಕಾಲೆಳೆದ ಸಚಿವ ಪ್ರಿಯಾಂಕ್‌ ಖರ್ಗೆ

‘WELCOME TO MR. BOND’ ಎಂದು ಸಂಬೋಧಿಸಿ, ಮೋದಿ ಕಾಲೆಳೆದ ಸಚಿವ ಪ್ರಿಯಾಂಕ್‌ ಖರ್ಗೆ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟದ ಬಿಜೆಪಿ ಪ್ರಚಾರಕ್ಕೆ ಅಬ್ಬರದ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗೆ ಆಗಮಿಸುತ್ತಿದ್ದು, ಸಚಿವ ಪ್ರಿಯಾಂಕ್‌ ಖರ್ಗೆ ಅವರು WELCOME TO MR. BOND ಎಂದು ಸಂಬೋಧಿಸಿ ಪ್ರಶ್ನೆಗಳ ಮೂಲಕ ಸ್ವಾಗತ ಕೋರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಿ. ಬಾಂಡ್‌ಗೆ ಆತ್ಮೀಯ ಸ್ವಾಗತ ಎಂದು ಬರೆದಿರುವ ಖರ್ಗೆ, ಹಲವು ಪ್ರಶ್ನೆ ಮುಂದಿಟ್ಟಿದ್ದಾರೆ. #ModiMosa ಎಂಬ ಹ್ಯಾಷ್‌ ಟ್ಯಾಗ್‌ನಡಿ ಕಲಬುರಗಿಯ ಜನರು ನಾಳೆ ನಿಮ್ಮಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಬಯಸುತ್ತಿದ್ದಾರೆ, ಉತ್ತರಿಸಿ ಎಂದು ಆಗ್ರಹಿಸಿದ್ದಾರೆ.

ಖರ್ಗೆ ಪ್ರಶ್ನೆಗಳು

1.ಕೇಂದ್ರ ಸರ್ಕಾರ ನರೇಗಾ ಕಾರ್ಮಿಕರ ವೇತನ ಯಾಕೆ ಬಿಡುಗಡೆ ಮಾಡುತ್ತಿಲ್ಲ? ಏನು ಮೋದಿ ಸರ್ಕಾರ ದಿವಾಳಿಯಾಗಿದೆಯೇ?

  1. ಬರದಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಮೋದಿ ಸರ್ಕಾರ ಯಾಕೆ ಎನ್‌ಡಿಆರ್‌ಎಫ್‌ ಫಂಡ್‌ ಬಿಡುಗಡೆ ಮಾಡುತ್ತಿಲ್ಲ?
  2. ನೀವು ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೋಲಿ ಮತ್ತು ಗೊಂಡ ಕುರುಬ ಸಮುದಾಯಗಳನ್ನು ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಸೇರಿಸುವುದಾಗಿ ಭರವಸೆ ನೀಡಿದ್ದಿರಿ. ಯಾವಾಗ ಸೇರಿಸುತ್ತೀರಿ?
  3. ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಲ್ಲಿ ಅನುಮೋದಿತವಾಗಿದ್ದ ಕಲಬುರಗಿ ರೈಲ್ವೆ ವಿಭಾಗವನ್ನು ನಿಮ್ಮ ಸರ್ಕಾರ ಯಾಕೆ ಕೈಬಿಟ್ಟಿದೆ?
  4. ಕಲಬುರಗಿಯಲ್ಲಿ ಸ್ಥಾಪನೆಯಾಗಬೇಕಾಗಿದ್ದ ರಾಷ್ಟ್ರೀಯ ಹೂಡಿಕೆ‌ ಉತ್ಪಾದನಾ ವಲಯವನ್ನು ನಿಮ್ಮ ಸರ್ಕಾರ ರದ್ದು ಮಾಡಿದ್ದು ಯಾಕೆ?
  5. ಕಲಬುರಗಿಯ ಔಟರ್‌ ರಿಂಗ್‌ ರೋಡ್‌ ಯೋಜನೆಗೆ ಯಾಕೆ ನಿಮ್ಮ ಸರ್ಕಾರ ಹಣ ನೀಡಿಲ್ಲ?

ಮಧ್ಯಾಹ್ನ 1 ಗಂಟೆಗೆ ಕಲಬುರಗಿಗೆ ಆಗಮಿಸುವ ಮೋದಿ ಅವರು ಮೊದಲು 10-15 ನಿಮಿಷಗಳ ರೋಡ್‌ ಶೋನಲ್ಲಿ ಭಾಗವಹಿಸಿ ಬಳಿಕ ಎನ್‌.ವಿ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇದು ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಮೋದಿ ಅವರ ಮೊದಲ ಸಮಾವೇಶವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments