Homeಕರ್ನಾಟಕಮುಸ್ಲಿಂ ಮೀಸಲಾತಿ ರದ್ದು ನಿರ್ಧಾರಕ್ಕೆ ನಾವು ಬದ್ದ: ಮಾಜಿ ಸಿಎಂ ಬೊಮ್ಮಾಯಿ

ಮುಸ್ಲಿಂ ಮೀಸಲಾತಿ ರದ್ದು ನಿರ್ಧಾರಕ್ಕೆ ನಾವು ಬದ್ದ: ಮಾಜಿ ಸಿಎಂ ಬೊಮ್ಮಾಯಿ

ಮುಸ್ಲಿಮರಿಗೆ ನೀಡಿರುವ ಮೀಸಲಾತಿ ರದ್ದು ಮಾಡಿರುವ ವಿಚಾರದಲ್ಲಿ ನಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ದರಾಗಿದ್ದೇವೆ. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಏನು ಮಾಡುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದು ಮಾಜಿ ಸಿಎಂ, ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳತೀದ್ದಾರೆ. ಅದರಲ್ಲೂ ಕೋರ್ಟ್ ಕಾರ್ಯಕಲಾಪದ ಬಗ್ಗೆ ಸುಳ್ಳು ಹೇಳುವುದು ಬಹಳ ತಪ್ಪು” ಎಂದರು.

“ನಾವು ಕೋರ್ಟ್ ನಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡುತ್ತೇವೆ. ಮುಂದುವರೆಸುತ್ತೇವೆ ಅಂತಾ ಹೇಳಿಲ್ಲ. ನಾವೇನು ಆಜ್ಞೆ ಮಾಡಿದ್ದೇವೆ ಅದನ್ನು ಸಿದ್ದರಾಮಯ್ಯ ಅವರ ಶಿಷ್ಯ ರವಿವರ್ಮ ಕುಮಾರ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದರು. ಇದರ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಅದಾದ ಮೇಲೆ ಕೋರ್ಟ್ ಪ್ರೊಸೆಡಿಂಗ್ ನಲ್ಲಿ ಸಮಯ ಬೇಕು ಅಂತ ಸಮಯ ಕೇಳಿತು. ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನಾವು ನಮ್ಮ ಕೇಸ್ ವಾದ ಮಾಡುತ್ತೇವೆ ಅಂತಾ ಹೇಳಿದ್ದೇವು” ಎಂದು ಹೇಳಿದರು.

“ನಾವು ಕೇಸ್ ಹಿಂಪಡೆದಿಲ್ಲ. ಮುಂದಿನ ವಿಚಾರಣೆ ಆಗುವವರೆಗೂ ನಾವು ಜಾರಿ ಮಾಡುವುದಿಲ್ಲ ಅಂತಾ ಹೇಳಿದ್ದೇವು. ನಮ್ಮ ನಿಲುವು ಅದೆ ಇದೆ. ಇವತ್ತಿನ ಸರ್ಕಾರ ಅದನ್ನು ಮುಂದುವರೆಸತ್ತಾ ಅನ್ನುವ ಯಕ್ಷ ಪ್ರಶ್ನೆ ಇದೆ. ಅವತ್ತೆ ಕಾಂಗ್ರೆಸ್ ಅದನ್ನು ವಿರೋಧ ಮಾಡಿತ್ತು ಎಂದರು.
ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ‌. ಅದಾಗ್ಯೂ ಕೂಡಾ ಸುಮಾರು 23, 24 ಮುಸ್ಲಿಂ ಸಮುದಾಯಗಳು 2ಎ ಮೀಸಲಾತಿ ಪಟ್ಟಿಯಲ್ಲಿವೆ” ಎಂದರು.

“ಆಂಧ್ರಪ್ರದೇಶದಲ್ಲಿ ಇದೇ ರೀತಿ ಆದಾಗ ಸುಪ್ರೀಂ ಕೋರ್ಟ್ ನಲ್ಲಿ ಪುರಸ್ಕಾರ ಸಿಕ್ಕಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಮೈ ಮೇಲೆ ಬಂದಾಗ ಈ ತರಹ ವ್ಯಾಖ್ಯಾನ ಮಾಡುತ್ತಿದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments