Homeದೇಶಯುದ್ಧ ಶುರು - ಟ್ರಂಪ್‌ ಎಚ್ಚರಿಗೆ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಪ್ರತ್ಯುತ್ತರ

ಯುದ್ಧ ಶುರು – ಟ್ರಂಪ್‌ ಎಚ್ಚರಿಗೆ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಪ್ರತ್ಯುತ್ತರ

ಕೆನಡಾದಲ್ಲಿ ಜಿ7 ಶೃಂಗ ನಡೆಯುತ್ತಿರುವಂತೆಯೇ ಅರ್ಧದಿಂದಲೇ ದಿಢೀರನೆ ಎದ್ದುಹೋದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಶೃಂಗವನ್ನು ತೊರೆದು ವಾಪಸಾಗುವ ವೇಳೆ, “ಕದನ ವಿರಾಮವಲ್ಲ, ಮುಕ್ತಾಯ’ ಎಂದು ಅವರು ಹೇಳಿದ್ದು, ಈ ಮೂಲಕ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಮೆರಿಕವೂ ಪ್ರವೇಶ ನೀಡಿದಂತೆ ಕಾಣುತ್ತಿದೆ.

ಜಿ7 ದೇಶಗಳ ಶೃಂಗಸಭೆ ವೇಳೆ ಅರ್ಧಕ್ಕೆ ಹೊರ ಬಂದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ ಮಾಡಿ, ಇರಾನ್‌ನ ಸುಪ್ರೀಂ ನಾಯಕ ಅಲಿ ಖಮೇನಿಗೆ ಶರಣಾಗುವಂತೆ ಸೂಚಿಸಿದ್ದಾರೆ.

“ಇರಾನ್‌ನ ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವ ಅಲಿ ಖಮೇನಿ ವ್ಯಕ್ತಿ ಎಲ್ಲಿ ಅಡಗಿದ್ದಾನೆ ಎನ್ನುವುದು ನಮಗೆ ನಿಖರವಾಗಿ ತಿಳಿದಿದೆ. ಆದರೆ, ಆತನನ್ನು ನಾವು ಹತ್ಯೆ ಮಾಡುವುದಿಲ್ಲ. ನಾಗರಿಕರು ಅಥವಾ ಅಮೇರಿಕನ್ ಸೈನಿಕರ ಮೇಲೆ ಕ್ಷಿಪಣಿಗಳು ಹಾರಿಸುವುದನ್ನು ನಾವು ಬಯಸುವುದಿಲ್ಲ. ನಮ್ಮ ಸಹನೆಯನ್ನು ಪರೀಕ್ಷೆ ಮಾಡುವುದು ಬೇಡ. ಬದಲಾಗಿ ಅಲಿ ಖಮೇನಿ ಶರಣಾಗಬೇಕು” ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

“ಇರಾನ್‌ ಶರಣಾಗತಿ ಘೋಷಿಸಿ ಪರಮಾಣು ಒಪ್ಪಂದ ಮಾತುಕತೆಗೆ ಮುಂದಾಗಬೇಕು ಎಂಬುದು ನಮ್ಮ ಬಯಕೆ. ಈ ಗುರಿಯನ್ನು ಸಾಧಿಸಲು ನಾವು ಜಂಟಿ ಪ್ರಯತ್ನಗಳನ್ನು ಮುಂದುವರೆಸುತ್ತೇವೆ. ಇರಾನ್‌ ಇಷ್ಟೊತ್ತಿಗೆ ಪರಮಾಣು ಒಪ್ಪಂದ ಮಾತುಕತೆಗೆ ಸಿದ್ಧವಾಗಬೇಕಿತ್ತು. ನಾನು ಹಲವಾರು ಬಾರಿ ಈ ಕುರಿತು ಇರಾನ್‌ ಉನ್ನತ ರಾಜಕೀಯ ನಾಯಕತ್ವಕ್ಕೆ ಮನವಿ ಮಾಡಿದ್ದೇನೆ. ಆದರೆ, ಆಗೆಲ್ಲಾ ಏರು ಧ್ವನಿಯಲ್ಲಿ ಗುಡುಗುತ್ತಿದ್ದ ಇರಾನ್‌ ನಾಯಕರು, ಈಗ ಆತ್ಮರಕ್ಷಣೆಗಾಗಿ ಬಂಕರ್‌ನಲ್ಲಿ ಅಡಗಿ ಕುಳಿತಿದ್ದಾರೆ. ನಮ್ಮ ತಾಳ್ಮೆ ಕ್ಷೀಣಿಸುತ್ತಿದೆ” ಎಂದು ಎಚ್ಚರಿಸಿದ್ದಾರೆ.

ಆದರೆ ಅಮೆರಿಕ ಬೆದರಿಕೆಗೂ ಜಗ್ಗದ ಇರಾನ್‌ನ ಸರ್ವೋಚ್ಛ ನಾಯಕ ಅಲಿ ಖಮೇನಿ, ʻಯುದ್ಧ ಶುರುವಾಗಿದೆʼ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ʻನಮಿ ಹೆಸರಿನಲ್ಲಿ, ಯುದ್ಧ ಪ್ರಾರಂಭವಾಗುತ್ತದೆ. ಅಲಿ ತನ್ನ ಜುಲ್ಫಿಕರ್‌ನೊಂದಿಗೆ ಖಮೇನಿಗೆ ಹಿಂತಿರುಗುತ್ತಾನೆʼ ಎಂದು ಅಯತೊಲ್ಲಾ ಅಲಿ ಖಮೇನಿ ಅವರ ಅನುವಾದ ಪೋಸ್ಟ್‌ ಸೂಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments