Homeಕರ್ನಾಟಕವಕ್ಫ್‌ ಅವ್ಯವಹಾರ | ಸಿಬಿಐ ತನಿಖೆಗೆ ಸಿದ್ದರಾಮಯ್ಯ ಅವರೇ ಆದೇಶಿಸಲಿ: ವಿಜಯೇಂದ್ರ

ವಕ್ಫ್‌ ಅವ್ಯವಹಾರ | ಸಿಬಿಐ ತನಿಖೆಗೆ ಸಿದ್ದರಾಮಯ್ಯ ಅವರೇ ಆದೇಶಿಸಲಿ: ವಿಜಯೇಂದ್ರ

ಮೈಸೂರಿನ ಮುಡಾ ಹಗರಣ, ವಕ್ಫ್ ಅವ್ಯವಹಾರ ಸಂಬಂಧಿಸಿದ ಅನ್ವರ್ ಮಾಣಿಪ್ಪಾಡಿ ಅವರ ವರದಿ ಹಾಗೂ ನನ್ನ ಮೇಲಿನ 150 ಕೋಟಿಯ ಆರೋಪ- ಇವೆಲ್ಲವುಗಳ ಸಮಗ್ರ ಸಿಬಿಐ ತನಿಖೆಗೆ ಸಿಎಂ ಸಿದ್ದರಾಮಯ್ಯ ಅವರೇ ಆದೇಶ ಮಾಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ ವೈ ವಿಜಯೇಂದ್ರ ಒತ್ತಾಯಿಸಿದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು (ಡಿ.16) ಮಾತನಾಡಿದ ಅವರು, “ನನ್ನ ಮೇಲಿನ 150 ಕೋಟಿಯ ಆರೋಪವನ್ನೂ ಸಿಬಿಐ ತನಿಖೆಗೆ ಕೊಡಿ, ಅನ್ವರ್ ಮಾಣಿಪ್ಪಾಡಿಯವರ ವರದಿ ಸ್ವೀಕರಿಸಿ ಅದರ ಬಗ್ಗೆಯೂ ಸಿಬಿಐ ತನಿಖೆ ಮಾಡಿಸಿ. ವಕ್ಫ್ ಜಾಗದ ವಿಚಾರದಲ್ಲಿ ಲಕ್ಷ ಲಕ್ಷ ಕೋಟಿಯ ಅವ್ಯವಹಾರ ಆಗಿದೆ ಎಂಬ ವರದಿ ಇದ್ದು ಅದರ ಸಮಗ್ರ ತನಿಖೆಯೂ ಆಗಲಿ” ಎಂದು ಆಗ್ರಹಿಸಿದರು.

“ಆಡಳಿತ ಪಕ್ಷದವರು ಕೆಲಸಕ್ಕೆ ಬಾರದ ಸಂಗತಿಗಳನ್ನು ಇವತ್ತು ಸದನದಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಬಾಣಂತಿಯರ ಸಾವು, ಹಸುಗೂಸುಗಳ ಮರಣ, ಉತ್ತರ ಕರ್ನಾಟಕದ ವಿಚಾರಗಳು ಸದನದಲ್ಲಿ ಚರ್ಚೆ ಆಗಬಾರದೆಂಬ ಉದ್ದೇಶ ಇದರ ಹಿಂದಿದೆ. ಯಡಿಯೂರಪ್ಪ ಅವರು ಕೋವಿಡ್ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆದರೆ, ಅವರನ್ನೇ ಗುರಿಯಾಗಿ ಇಟ್ಟುಕೊಂಡು ರಾಜಕೀಯವಾಗಿ ಮುಗಿಸುವ ದುರುದ್ದೇಶದಿಂದ ಅರೆಬರೆ ಬೆಂದ ಜಸ್ಟಿಸ್ ಕುನ್ಹ ಮಧ್ಯಂತರ ವರದಿಯನ್ನು ಇಟ್ಟುಕೊಂಡು ಎಫ್‍ಐಆರ್ ದಾಖಲಿಸಿದ್ದಾರೆ. ಇದರ ಜೊತೆಗೆ ಮುನಿರತ್ನ ವಿಚಾರವನ್ನೂ ಚರ್ಚಿಸಲು ಮುಂದಾಗಿದ್ದಾರೆ” ಎಂದು ಟೀಕಿಸಿದರು.

“ಸಿದ್ದರಾಮಯ್ಯನವರೇ ಈ ರೀತಿ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಇದ್ಯಾವುದೂ ಹೊಸದಲ್ಲ. ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಸಿಎಜಿ ವರದಿ ಸಂಬಂಧ 25 ಪ್ರಕರಣಗಳನ್ನು ಸಿದ್ದರಾಮಯ್ಯರ ಸರಕಾರವು ದಾಖಲಿಸಿ ಯಡಿಯೂರಪ್ಪ, ಬಿಜೆಪಿಯನ್ನು ಮುಗಿಸಲು ಪಿತೂರಿ ಮಾಡಲಾಗಿತ್ತು. ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾದರೆ ತಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗದೆಂದು ಯೋಚಿಸಿ ಈ ಕೆಲಸ ಮಾಡಿದ್ದರು” ಎಂದು ಆರೋಪಿಸಿದರು.

“ಸಿದ್ದರಾಮಯ್ಯನವರು ಮುಡಾ, ವಾಲ್ಮೀಕಿ ನಿಗಮದ ಹಗರಣಗಳು, ಅಬಕಾರಿ ಇಲಾಖೆ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿದ್ದು, ವಿಲವಿಲ ಒದ್ದಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರು ನನ್ನ ಮೇಲೆ ಆರೋಪ ಮಾಡಿದ್ದು, ಇತ್ತೀಚೆಗೆ ಅವರ ಬಂಡವಾಳವೂ ಬಯಲಾಗಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನೂರಾರು ಕೋಟಿÉ ಬೆಲೆಬಾಳುವ 5 ಎಕರೆ ನಿವೇಶನವನ್ನು ರಾಹುಲ್ ಖರ್ಗೆಯವರಿಗೆ ಅಕ್ರಮವಾಗಿ ಮಂಜೂರು ಮಾಡಿದ್ದರು. ಪ್ರಿಯಾಂಕ್ ಖರ್ಗೆಯವರೇ ನೀವು ಅದನ್ನು ಹಿಂತಿರುಗಿಸಿಲ್ಲವೇ” ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments