Homeಕರ್ನಾಟಕಮತದಾರರು ನಿಲ್ಲಬೇಕು ಅಂದ್ರೆ ಚನ್ನಪಟ್ಟಣದಿಂದಲೇ ಸ್ಪರ್ಧೆ: ಡಿ ಕೆ ಶಿವಕುಮಾರ್

ಮತದಾರರು ನಿಲ್ಲಬೇಕು ಅಂದ್ರೆ ಚನ್ನಪಟ್ಟಣದಿಂದಲೇ ಸ್ಪರ್ಧೆ: ಡಿ ಕೆ ಶಿವಕುಮಾರ್

‌ಅನಿವಾರ್ಯವಾದರೆ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತೇನೆ. ಈ ಬಗ್ಗೆ ಕ್ಷೇತ್ರದ ಮತದಾರರು ಹೇಳಿದಂತೆ ಕೇಳುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನನಗೆ ರಾಜಕೀಯವಾಗಿ ಜೀವಕೊಟ್ಟ ತಾಲ್ಲೂಕು ಚನ್ನಪಟ್ಟಣ. ನಾಲ್ಕು ಬಾರಿ ಹೋಬಳಿ ಮಟ್ಟದಲ್ಲಿ ಆಶೀರ್ವಾದ ಮಾಡಿದ್ರು. ಚನ್ನಪಟ್ಟಣ ಜನರ ಋಣ ತೀರಿಸಬೇಕು. ಆದರೆ, ಚನ್ನಪಟ್ಟಣದಿಂದ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ” ಎಂದು ಹೇಳಿದ್ದಾರೆ.

“ಚನ್ನಪಟ್ಣಣ ನನ್ನ ಹೃದಯಲ್ಲಿದೆ. ಸಾತನೂರು ಚನ್ನಪಟ್ಟಣದ ಒಂದು ಭಾಗ. ನಾನು ಚನ್ನಪಟ್ಟಣವನ್ನು ಪ್ರೀತಿಸುತ್ತೇನೆ. ಚನ್ನಪಟ್ಟಣದ ಅಭಿವೃದ್ದಿ ಮಾಡಬೇಕಿದೆ. ಇವತ್ತು ಕ್ಷೇತ್ರದ ಎಲ್ಲಾ ದೇವಸ್ಥಾನಗಳಿಗೆ ಹೋಗುವೆ. ಆ ಮೇಲೆ ಮತದಾರರು, ನಾಯಕರ ಜೊತೆ ಮಾತನಾಡುವೆ. ಮತದಾರರು ನಾನೇ ನಿಲ್ಲಬೇಕು ಅಂದ್ರೆ ವಿಧಿನೇ ಇಲ್ಲ” ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಸೋಲನ್ನು ಅನುಭವಿಸಿದ್ದ ಡಿಕೆ ಸುರೇಶ್ ಅವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಇದೀಗ ದಿಢೀರ್ ಎಂಬಂತೆ ಡಿಕೆ ಶಿವಕುಮಾರ್‌ ಅವರೇ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಗೆ ಡಿಕೆ ಶಿವಕುಮಾರ್‌ ಜೀವಕೊಟ್ಟಿದ್ದಾರೆ.

ಚನ್ನಪಟ್ಟಣದಿಂದ ಗೆದ್ದು ಶಾಸಕರಾದರೆ ಸಿಎಂ ಆಗುವ ಯೋಗ ಇದೆ ಎನ್ನಲಾಗಿದೆ. ಹೀಗಾಗಿ ಈ ಕ್ಷೇತ್ರದಿಂದ ಸ್ಪರ್ಧಿಸುವ ಉತ್ಸುಕತೆ ಡಿ ಕೆ ಶಿವಕುಮಾರ್ ತೋರಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments