Homeಕರ್ನಾಟಕಶಿಗ್ಗಾಂವಿ | ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಶಿಗ್ಗಾಂವಿ | ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಮನೆಗಳಿಗೆ ಹಕ್ಕುಪತ್ರವನ್ನೇ ನೀಡಿಲ್ಲ ಎಂದು ಆರೋಪಿಸಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಸವಣೂರಿನ ದಂಡಿನಪೇಟೆಯ 500ಕ್ಕೂ ಹೆಚ್ಚು ಮತದಾರರು, ಮತದಾನ ಬಹಿಷ್ಕಾರ ಮಾಡಿದ್ದಾರೆ.

‘ಚುನಾವಣಾ ಬಹಿಷ್ಕಾರ ಪ್ರದೇಶ’ ಎಂದು ಫಲಕ ಹಾಕಿರುವ ಮತದಾರರು, “ನಮಗೆ ಮನೆಯ ಹಕ್ಕುಪತ್ರ ನೀಡಿಲ್ಲ” ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಉಳುವವನೇ ಭೂಮಿ ಒಡೆಯ ದಲಿತನ ಜಮೀನನ್ನು ಬೇರೊಬ್ಬ ವ್ಯಕ್ತಿಗೆ ಮಾಡಿಕೊಂಡ ಕಂದಾಯ ಇಲಾಖೆ. ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಉಪ ವಿಭಾಗಾಧಿಕಾರಿಗಳ ಸುಳ್ಳು ಭರವಸೆ” ಎಂದು ಫಲಕದಲ್ಲಿ ಬರೆದಿದ್ದಾರೆ.

“80 ವರ್ಷದಿಂದ ನಾವು ಇಲ್ಲಿ ವಾಸವಿದ್ದೇವೆ. ನಮಗೆ ಮನೆ ಪಟ್ಟಾ ನೀಡಿಲ್ಲ. ದಾಖಲೆಗಳನ್ನು ಎಲ್ಲವನ್ನೂ ಅಕ್ರಮವಾಗಿ ತಿದ್ದುಪಡಿ ಮಾಡಿದ್ದಾರೆ. ನಮಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಮತದಾನ ಬಹಿಷ್ಕಾರ ಮಾಡಿದ್ದೇವೆ” ಎಂದು ಗ್ರಾಮಸ್ಥ ಮಾಲತೇಶ ಕುಂದಗೋಳ ಅಳಲು ತೋಡಿಕೊಂಡಿದ್ದಾರೆ.

ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಒಂದೇ ಒಂದು ಮನೆ ಹಂಚಿಕೆ ಮಾಡಿದ್ದಾರೆ ತೋರಿಸಲಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಜಮೀರ್‌ ಚುನಾವಣೆ ಪ್ರಚಾರದ ವೇಳೆ ಸವಾಲು ಹಾಕಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments