Homeಕರ್ನಾಟಕಕ್ಯಾಲೆಂಡರ್‌ನಲ್ಲಿ ಜಲಮಂಡಳಿಯ 60 ವರ್ಷದ ಸೇವೆಯ ಅನಾವರಣ: ಡಿ ಕೆ ಶಿವಕುಮಾರ್

ಕ್ಯಾಲೆಂಡರ್‌ನಲ್ಲಿ ಜಲಮಂಡಳಿಯ 60 ವರ್ಷದ ಸೇವೆಯ ಅನಾವರಣ: ಡಿ ಕೆ ಶಿವಕುಮಾರ್

ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 2025ರ ನೂತನ ವರ್ಷದ ಕ್ಯಾಲೆಂಡರ್‌ಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಬಿಡುಗಡೆಗೊಳಿಸಿದರು.

ವಜ್ರಮಹೋತ್ಸವದ ಸಂಭ್ರಮದಲ್ಲಿರುವ ಬೆಂಗಳೂರು ಜಲಮಂಡಳಿಯು ಸಾರ್ಥಕ 60 ಸಾಧನೆ ಮತ್ತಷ್ಟು ಎಂಬ ಘೋಷವ್ಯಾಕ್ಯದೊಂದಿಗೆ ಕ್ಯಾಲೆಂಡರ್ ಹೊರತಂದಿದೆ.

ಸದರಿ ಕ್ಯಾಲೆಂಡರ್ ನಲ್ಲಿ ಬೆಂಗಳೂರು ಎಂಬ ಮಾಯಾನಗರಿಗೆ 1896ರಿಂದ ಹೆಸರಘಟ್ಟದಿಂದ ಹಾಗೂ 1933ರ ತಿಪ್ಪೆಗೊಂಡನಹಳ್ಳಿಯಿಂದ ನೀರು ಸರಬರಾಜುವಿನ ಅಪರೂಪದ ಚಿತ್ರಗಳು, 1964ರಲ್ಲಿ ಜಲಮಂಡಳಿ ಸ್ಥಾಪನೆ, ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಪೂರೈಸುವ ಮೊದಲ ಹಂತದ ಯೋಜನೆಯಿಂದಿಡಿದು ಐದನೇ ಹಂತದ ಯೋಜನೆಯವರೆಗಿನ, ಮಳೆ ನೀರು ಸುಗ್ಗಿ ಕೇಂದ್ರ,ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಅಪರೂಪದ, ಅತ್ಯಾಕರ್ಷಕ ಚಿತ್ರಗಳನ್ನು ಸದರಿ ಕ್ಯಾಲೆಂಡರ್ ಒಳಗೊಂಡಿದೆ. ಬೆಂಗಳೂರಿಗೆ ಸಮರ್ಪಕ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಇದುವರೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಲಾಗಿದೆ.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಕೆ.ಸುಧಾಕರ್, ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಮಂಡಳಿಯ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಮದನ್ ಮೋಹನ್, ಪ್ರಧಾನ ಮುಖ್ಯ ಎಂಜನಿಯರ್ ‌ಸುರೇಶ,ಮುಖ್ಯ ಎಂಜನಿಯರ್ ಗಳು,ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ.ಮರಿಯಪ್ಪ,ಪ್ರಧಾನ ಕಾರ್ಯದರ್ಶಿ ಗೋವಿಂದರಾಜಲು ಸೇರಿದಂತೆ ಅಧಿಕಾರಿಗಳು ಇದ್ದರು.

ಇದೇ ಸಂದರ್ಭದಲ್ಲಿ ಜಲಮಂಡಳಿ ವತಿಯಿಂದ ‌ಉಪಮುಖ್ಯಮಂತ್ರಿಗಳು ಕ್ರಿಕೆಟ್ ಪಂದ್ಯವೊಂದರಲ್ಲಿ ಬ್ಯಾಟ್ ಮಾಡುತ್ತಿರುವ ಅಪರೂಪದ ಅವರ ಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments