ಪಿಎಸ್‌ಐ ಕಿಂಗ್ ಪಿನ್ ಆರ್ ಡಿ ಪಾಟೀಲ್ ನಿವಾಸಕ್ಕೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಭೇಟಿ ನೀಡಿದ್ದು ಚರ್ಚೆಯಾಗುತ್ತಿರುವ ನಡುವೆ ಗುರುವಾರ ಉಮೇಶ್ ಜಾಧವ್ ಅವರು ಪಿಎಸ್‌ಐ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ದಿವ್ಯಾ ಹಾಗರಗಿ ಜೊತೆ ಫೋಟೋಗೆ ಪೋಸ್ ನೀಡಿರುವುದು ವೈರಲ್ ಆಗಿದೆ.
ರಾಮನವಮಿ ಮೆರವಣಿಗೆ ವೇಳೆ ತೆಗೆಸಿಕೊಂಡ ಫೋಟೋವನ್ನು ಉಮೇಶ್ ಜಾದವ್ ಫೇಸ್ ಬುಕ್ನಲ್ಲಿ ಹಾಕಿಕೊಂಡಿದ್ದಾರೆ.
ಪಿಎಸ್‌ಐ ಪ್ರಕರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಬೆಂಬಲಯಾಚಿಸಿದ್ದ ಬಿಜೆಪಿ ಸಂಸದರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲಕ್ಷಾಂತರ ಯುವಕರ ಭವಿಷ್ಯಕ್ಕೆ ಕೊಳ್ಳಿಯಿಟ್ಟ ಆರೋಪಿಗಳ ಜೊತೆ ಉಮೇಶ ಜಾದವ್ ಪೋಸ್ ಕೊಡುತ್ತಿರುವುದು ಕ್ಷೇತ್ರದಲ್ಲಿ ಅವರ ವಿರುದ್ಧ ಅಸಮಾಧಾನ ಮಾತುಗಳು ಕೇಳಿಬರುತ್ತಿವೆ.
ಆರ್ ಡಿ ಪಾಟೀಲ್ ಈಗ ಜೈಲುಪಾಲಾಗಿದ್ದಾನೆ. ಪಿಎಎಸ್ ಪರೀಕ್ಷೆ ಮಾತ್ರವಲ್ಲ ವಿವಿಧ ಬೋರ್ಡ್ ಪರೀಕ್ಷೆಗಳಲ್ಲೂ ಈ ಆರ್ಡಿ ಪಾಟೀಲ್ ಕಿಂಗ್ ಪಿನ್ ಆಗಿದ್ದಾನೆ. ಆದರೆ ಆರ್ ಟಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತೆರಳಿ ಮತಯಾಚಿಸಿ, ಬೆಂಬಲ ಕೇಳಿರುವುದು ಅವರಿಗೆ ತಿರುಗುಬಾಣವಾಗುವ ಸಾಧ್ಯತೆ ಕಾಣುತ್ತಿದೆ.
ಸ್ಥಳೀಯ ಕಾಂಗ್ರೆಸ್ ನಾಯಕರು ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡು ಜಾದವ್ ವಿರುದ್ಧ ಪ್ರಚಾರ ಸಭೆಗಳಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ.