ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸುವರ್ಣಸೌಧದ ಸಮಿತಿ ಸಭಾಂಗಣದಲ್ಲಿ ಸೋಮವಾರ ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ ಸಂಬಂಧ ಭೂಸ್ವಾಧೀನ, ಪುನರ್ವಸತಿ, ಪುನರ್ ನಿರ್ಮಾಣ ವಿಷಯಗಳ ಕುರಿತಂತೆ ಮಹತ್ವದ ಸಭೆ ನಡೆಸಿದರು.
ವಿಜಯಪುರ, ಬಾಗಲಕೋಟೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಹೋರಾಟಗಾರರು, ರೈತ ಮುಖಂಡರು ಸೇರಿ ಹಲವರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಹವಾಲು ಮಂಡಿಸಿದರು.
ಆಲಮಟ್ಟಿ ಜಲಾಶಯದ ನೀರಿನ ಸoಗ್ರಹ ಮಟ್ಟವನ್ನು ಆರ್.ಎಲ್. 519.60 ಮೀ. ನಿoದ 524.26 ಮೀ. ರವರೆಗೆ ಎತ್ತರಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಯೋಜನೆಗಾಗಿ ಮುಳುಗಡೆ ಹೊಂದಲಿರುವ ಜಮೀನು, ಪುನರ್ವಸತಿ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಅಂದಾಜು ಒಟ್ಟಾರೆ 1,33,867 ಎಕರೆ ಜಮೀನು ಸ್ವಾಧೀನಪಡಿಸಬೇಕಾಗಿದೆ. ಇದುವರೆಗೆ 28,967 ಎಕರೆ ಸ್ವಾಧೀನಪಡಿಸಲಾಗಿದ್ದು, 1,04,963 ಎಕರೆ ಸ್ವಾಧೀನಪಡಿಸಲು ಬಾಕಿಯಿದೆ” ಎಂದು ಸಿಎಂ ತಿಳಿಸಿದರು.
“ಜಲಾಶಯದ ಹಿನ್ನೀರಿನಿoದ ಮುಳುಗಡೆಯಾಗಲಿರುವ 188ಗ್ರಾಮಗಳಿಗೆ ಸoಬoಧಿಸಿದoತೆ ಮುಳುಗಡೆಯಾಗುವ 73,020 ಎಕರೆ ಜಮೀನು ಭೂಸ್ವಾಧೀನಕ್ಕೆ ಬಾಕಿಯಿದೆ. 2022ರಲ್ಲಿ ಅಂದಿನ ಸರ್ಕಾರ ಮುಳುಗಡೆಯಾಗುವ ಜಮೀನನ್ನು ಎರಡು ಹoತದಲ್ಲಿ ಭೂಸ್ವಾಧೀನಪಡಿಸುವ ನಿರ್ಧಾರ ಕೈಗೊoಡಿತ್ತು. ಇದನ್ನು ಬದಲಾಯಿಸಿ ಈಗ ಪ್ರಥಮ ಪ್ರಾಶಸ್ತ್ಯದಲ್ಲಿ ಒಂದೇ ಹಂತದಲ್ಲಿ ಈ ಜಮೀನು ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ಜಮೀನು ಕಳೆದುಕೊಳ್ಳುವ ರೈತರಿಗೆ ಜಮೀನಿನ ಮಾರುಕಟ್ಟೆ ದರ, ಆಸ್ತಿಯ ಮಾರ್ಗದರ್ಶಿ ಮೌಲ್ಯ, ಭೂಸ್ವಾಧೀನ ಕಾಯ್ದೆಯನ್ನು ಗಮನದಲ್ಲಿರಿಸಿ ನ್ಯಾಯಯುತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ. ರೈತರಿಗಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಜಮೀನಿಗೆ ಪರಿಹಾರ ನೀಡುವ ಕುರಿತು ಸಹಮತದ ದರ ನಿಗದಿಪಡಿಸಲು ಎಲ್ಲರೂ ಮುಂದೆ ಬರಬೇಕು. ರೈತರಿಗೂ ಅನ್ಯಾಯವಾಗಬಾರದು, ಸರ್ಕಾರಕ್ಕೂ ಹೊರೆಯಾಗದoತೆ ನಿರ್ಣಯಕ್ಕೆ ಬರಲಾಗುವುದು. ಭೂಸ್ವಾಧೀನಕ್ಕೆ ಸoಬoಧಿಸಿದoತೆ 20ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಈ ಪ್ರಕರಣಗಳನ್ನು ಹಿಂಪಡೆದುಕೊoಡು ಸಹಮತದ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು” ಎಂದು ವಿವರಿಸಿದರು.