ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದುಕಿದೆಯಾ ಅಥವಾ ಸತ್ತಿದೆಯಾ? ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಒಂದು ಆ್ಯಂಬುಲೆನ್ಸ್ ನೀಡಲು “ಕೈ”ಲಾಗದ ದುಸ್ಥಿತಿ ನಿಮ್ಮ ಆರೋಗ್ಯ ಇಲಾಖೆಗೆ ಬಂದಿದೆಯಾ ಎಂದು ಜೆಡಿಎಸ್ ಪ್ರಶ್ನಿಸಿದೆ.
ಆ್ಯಂಬುಲೆನ್ಸ್ ಸಿಗದೆ ತಂದೆಯ ಮೃತದೇಹವನ್ನು ಮಕ್ಕಳು ಬೈಕ್ ನಲ್ಲಿ ಕೊಂಡೊಯ್ದ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ನಡೆದಿರುವ ಘಟನೆ ಉಲ್ಲೇಖಿಸಿ ಸರ್ಕಾರವನ್ನು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
“ರಾಜ್ಯದಲ್ಲಿರುವ ಕಾಂಗ್ರೆಸ್ ರ್ಕಾರಕ್ಕೆ ಮಾನವೀಯತೆ ಇಲ್ಲವಾಗಿರುವುದಕ್ಕೆ ಈ ಮನಕಲಕುವ ಘಟನೆಯೇ ಸಾಕ್ಷಿ. ಪಾವಗಡ ಕಾಂಗ್ರೆಸ್ ಶಾಸಕ ಹೆಚ್ ವಿವೆಂಕಟೇಶ್ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿ, ದ್ವೇಷ ರಾಜಕಾರಣ ಮಾಡುತ್ತಿರುವುದಕ್ಕೆ ಜನರು ನರಳುವಂತಾಗಿದೆ” ಎಂದು ವಾಗ್ದಾಳಿ ನಡೆಸಿದೆ.
“ತಂದೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಆ ಮಕ್ಕಳಿಗೆ ಮೃತದೇಹ ಸಾಗಿಸಲು ಕನಿಷ್ಠ ಆ್ಯಂಬುಲೆನ್ಸ್ ಒದಗಿಸದಿರುವುದು ಅಮಾನವೀಯ ಮತ್ತು ರಾಜ್ಯದ ಜನರು ತಲೆ ತಗ್ಗಿಸುವಂತದ್ದು” ಎಂದು ಜೆಡಿಎಸ್ ಹೇಳಿದೆ.