Homeಕರ್ನಾಟಕಅಧಿಕಾರಿಗಳ ವರ್ಗಾವಣೆ ಎಲ್ಲ ಸರ್ಕಾರದಲ್ಲೂ ದಂಧೆ ಆಗಿದೆ: ಬಸವರಾಜ ರಾಯರಡ್ಡಿ

ಅಧಿಕಾರಿಗಳ ವರ್ಗಾವಣೆ ಎಲ್ಲ ಸರ್ಕಾರದಲ್ಲೂ ದಂಧೆ ಆಗಿದೆ: ಬಸವರಾಜ ರಾಯರಡ್ಡಿ

ಎಲ್ಲ ಸರ್ಕಾರದಲ್ಲಿಯೂ ಅಧಿಕಾರಿಗಳ ವರ್ಗಾವಣೆ ಎಂಬುದು ಒಂದು ದಂಧೆಯೇ ಆಗಿತ್ತು. ಈಗಲೂ ಅದೇ ಆಗಿದೆ ಎಂದು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಮತ್ತು ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ತಮ್ಮ ಸರ್ಕಾರದ ಬಗ್ಗೆಯೂ ಆರೋಪಿಸಿದರು.

ಕೊಪ್ಪಳ ಕುಕನೂರು ತಾಲ್ಲೂಕಿನ ಕೋಮಲಾಪುರ ಗ್ರಾಮದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, “ಅಧಿಕಾರಿಗಳು ತಮ್ಮ ವರ್ಗಾವಣೆಗೆ ಶಾಸಕರು, ಸಚಿವರ‌‌ ಮೊರೆ ಹೋಗುತ್ತಿದ್ದು, ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಈ ದಂಧೆ ನಡೆಯುತ್ತಿದೆ” ಎಂದು ಹೇಳಿದರು.

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ಕ್ರಮ ವಹಿಸುವುದಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ವರ್ಗಾವಣೆಯೂ ದಂಧೆಯಾಗಿದೆ. ಹಿಂದಿನ ಸರ್ಕಾರದಲ್ಲಿಯೂ ಇದೇ ಸಮಸ್ಯೆ ಇತ್ತು” ಎಂದರು.

ಕೊಪ್ಪಳ ಎಸ್.ಪಿ. ಆಗಿದ್ದ ಯಶೋಧಾ ವಂಟಗೋಡಿ ಅವರನ್ನು ಕರ್ನಾಟಕ ‌ಲೋಕಾಯುಕ್ತದ ಎಸ್.ಪಿ. ಆಗಿ ಇತ್ತೀಚೆಗೆ ವರ್ಗಾವಣೆ ಮಾಡಲಾಗಿದ್ದು ಇದನ್ನು ರದ್ದುಪಡಿಸುವಂತೆ ರಾಯರಡ್ಡಿ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ, “ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕೋರಿಕೆಯಂತೆ ಸಿ.ಎಂ. ಬಳಿ ಮನವಿ ಮಾಡಿದ್ದೆ. ಎಸ್.ಪಿ. ಯಾಗಿ ಯಾರೇ ಬಂದರೂ ನನಗೇನೂ ಸಮಸ್ಯೆಯಿಲ್ಲ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments