Homeಕರ್ನಾಟಕಸರ್ಕಾರಿ ನೌಕರರ ವರ್ಗಾವಣೆ | ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಸರ್ಕಾರಿ ನೌಕರರ ವರ್ಗಾವಣೆ | ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಸರ್ಕಾರಿ ನೌಕರರ ವರ್ಗಾವಣೆ ಕುರಿತು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಹಿಂದಿನ ವರ್ಷಗಳ ವರ್ಗಾವಣೆ ಅವಧಿಯಲ್ಲಿ ಗಮನಿಸಿದ ಸನ್ನಿವೇಶಗಳಲ್ಲಿ ಹಿನ್ನೆಲೆಯಲ್ಲಿ ಸ್ಪಷ್ಟ ವರ್ಗಾವಣೆ ಮಾರ್ಗಸೂಚಿ ಹಾಗೂ ಸೂಚನೆಗಳನ್ನು ಹೊರಡಿಸಿದ್ದರೂ ಕೂಡ ವರ್ಗಾವನೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವರ್ಗಾವಣೆ ಆದೇಶಗಳನ್ನು ಹೊರಡಿಸಿದ್ದಲ್ಲಿ ಕರ್ನಾಟಕ ಆಡಳಿತ ಮಂಡಳಿಯಲ್ಲಿ ಬಹಳಷ್ಟು ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಇಲಾಖಾ ಕಾರ್ಯದರ್ಶಿ/ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಆದೇಶ ಹೊರಡಿಸುವ ಮೊದಲು ಈ ಕೆಳಕಂಡ ಆಕ್ಷೇಪಣೆಗಳು ಉದ್ಭವಿಸದಂತೆ ಕಟ್ಟುನಿಟ್ಟಾಗಿ ದಿನಂಕ 12/05/2025ರಂದು ಹೊರಡಿಸಿದ ವರ್ಗಾವಣೆ ಮಾರ್ಗಸೂಚಿಗಳನ್ನು ಅನುಸರಿಸಿ ವರ್ಗಾವಣೆ ಆದೇಶಗಳನ್ನು ಮಾಡಲು ಸೂಚಿಸಿದೆ.
  • ಕನಿಷ್ಠ ಅವಧಿ ಪೂರ್ಣಗೊಳಿಸದೇ ಇರುವವರನ್ನು ವರ್ಗಾಯಿಸುವುದು.
  • ನಿವೃತ್ತರಾಗಲು 2 ವರ್ಷಕ್ಕಿಂತ ಕಡಿಮೆ ಸೇವಾವಧಿ ಇರುವವರ ವರ್ಗಾವಣೆಯನ್ನು ಸಕಾರಣವಿಲ್ಲದೇ ಮಾಡುವುದು.
  • ಅವಧಿಪೂರ್ವ ವರ್ಗಾವಣೆಗಳನ್ನು ಸಕಾರಣವಿಲ್ಲದೇ ಮಾಡುವುದು.
  • ವಿಶೇಷ ಚೇತನ ನೌಕರರಿಗೆ ನೀಡಲಾದ ವಿನಾಯಿತಿಗಳನ್ನು ಅನುಸರಿಸದೇ ವರ್ಗಾಯಿಸುವುದು.
  • ವರ್ಗಾವಣೆ ಆದೇಶದಲ್ಲಿ ಹುದ್ದೆಯನ್ನು ತೋರಿಸುವುದು.
  • ಸಾಮಾನ್ಯ ವರ್ಗಾವಣೆ ಅವಧಿ ಮುಗಿದ ನಂತರ ಮುಖ್ಯಮಂತ್ರಿಗಳ ಅನುಮೋದನೆ ಪಡೆಯದೇ ವರ್ಗಾಯಿಸುವುದು.
  • ಸರ್ಕಾರದ ಆದೇಶದಲ್ಲಿ ಸೂಚಿಸಲಾದ ಇನ್ನಿತರೆ ವರ್ಗಾವಣೆ ಮಾರ್ಗಸೂಚಿಗಳನ್ನು ಅನುಸರಿಸುವುದು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments