ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಕೇವಲ 24 ಗಂಟೆಯಲ್ಲಿ ದಾಖಲೆಯ ವೀಕ್ಷಣೆ ಪಡೆದಿದೆ.
ಶುಕ್ರವಾರ (ಫೆ.20ರಂದು ಬೆಳಿಗ್ಗೆ 9 ಗಂಟೆಗೆ ಕೆವಿಎನ್ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆಯಾಗಿತ್ತು. ಬೆಳಗು ಹರಿಯುವುದರಲ್ಲಿ ಕೋಟಿ ಕೋಟಿ ವೀಕ್ಷಣೆ ಪಡೆದು, ಹೈಪ್ ಕ್ರಿಯೆಟ್ ಮಾಡಿದೆ.
ಕನ್ನಡ ಸೇರಿಂದತೆ ಮಲೆಯಾಳಂ, ತೆಲಗು, ತಮಿಳು, ಹಾಗೂ ಹಿಂದಿ ಭಾಷೆಯಲ್ಲಿ ಟಾಕ್ಸಿಕ್ ಟೀಸರ್ ಬಿಡುಗಡೆಯಾಗಿದ್ದು, ಈ ಸ್ಟೋರಿ ಬರೆಯುತ್ತಿರುವ ಹೊತ್ತಿನಲ್ಲಿ ಹಿಂದಿ ಭಾಷೆಯಲ್ಲೇ 2 ಕೋಟಿ,8 ಲಕ್ಷ ದಾಖಲೆ ವೀಕ್ಷಣೆ ಪಡೆದಿದೆ. 74 ಲಕ್ಷ ಕನ್ನಡಿಗರು ಟಾಕ್ಸಿಕ್ ಟೀಸರ್ ವೀಕ್ಸಿಸಿದ್ದಾರೆ. ತೆಲಗು ಭಾಷೆಯಲ್ಲಿ 1 ಕೋಟಿ 10 ಲಕ್ಷ ಜನರು ನೋಡಿದ್ದಾರೆ. ಮಲೆಯಾಳಂನಲ್ಲಿ 78 ಲಕ್ಷ ವೀಕ್ಷಣೆ ದಾಟಿದೆ. ತಮಿಳಿನಲ್ಲಿ 54 ಲಕ್ಷ ಜನರಿಂದ ಟೀಸರ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.
ಇದು ಕೇವಲ ಕೆವಿಎನ್ ಯೂಟ್ಯೂಬ್ ಚಾನೆಲ್‌ನ ವೀಕ್ಷಣೆ ಮಾತ್ರ. ಇನ್ನು ಟಿವಿ ಚಾನೆಲ್ ಮತ್ತು ಬೇರೆ ಬೇರೆ ಯೂಟ್ಯೂಬ್ ಚಾನೆಲ್ ಹಾಗೂ ರೀಲ್ಸ್ ಸೇರಿದಂತೆ ಸೋಸಿಯಲ್ ಮೀಡಿಯಾದಲ್ಲಿ ಟಾಕ್ಸಿಕ್ ಟೀಸರ್ ನದ್ದೇ ಸದ್ದು. ಎಲ್ಲ ವಿಭಾಗದಲ್ಲೂ ಟೀಸರ್ ವೀಕ್ಷಣೆ ಕೌಂಟ್ ಮಾಡಿದ್ರೆ ಕೋಟಿ ಕೋಟಿನೇ ದಾಟುತ್ತೆ.
ಕನ್ನಡ ಮಣ್ಣಿನ ಸುಹಾಸಣೆ ಹೊತ್ತ ರಾಕಿಂಗ್ ಸ್ಟಾರ್ ಯಶ್, ಈ ಪರಿಪ್ರಮಾಣದಲ್ಲಿ ಟಾಕ್ಸಿಕ್ ಮೂಲಕ ಸದ್ದು ಮಾಡಿ, ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಒಬ್ಬ ಕನ್ನಡ ನಟಿನಿಗೆ ಈ ಪ್ರಮಾಣದಲ್ಲಿ ಮಣ್ಣನೆ ಸಿಕ್ಕಿದ್ದು ಈ ಕಾಲಗಟ್ಟದಲ್ಲಿ ಬಹುಶಃ ಯಶ್ ಒಬ್ಬರಿಗೆ ಮಾತ್ರ ಅನಿಸುತ್ತೆ.
ಸಿನಿಮಾ ಬಿಡುಗಡೆಗೆ ತಿಂಗಳು ಬಾಕಿ ಇರುವಾಗಲೇ ಆ್ಯಕ್ಷನ್ ಟೀಸರ್ ಧೂಳೆಬ್ಬಿಸೋಕೆ ಸಜ್ಜಾಗಿದೆ. ಕೇರಳದ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಟಾಕ್ಸಿಕ್ ಸಿನಿಮಾದಲ್ಲಿ ಸ್ಟಾರ್ ನಟಿಯರ ದೊಡ್ಡ ಸಮೂಹವೇ ಇದೆ.
ನಯನತಾರಾ, ರುಕ್ಕಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಹಾಗೂ ತಾರಾ ಅವರ ಪಾತ್ರಗಳನ್ನು ಈಗಾಗಲೇ ಪರಿಚಯಿಸಲಾಗಿದೆ. ಆದ್ರೆ ಯಶ್ ಅವರನ್ನೇ ಟೀಸರ್ನಲ್ಲಿ ಹೆಚ್ಚು ತೋರಿಸಲಾಗಿದೆ. ಭಿನ್ನ ಭಿನ್ನ ಲೂಕ್ ಗಳಲ್ಲಿ ಕಾಣಿಸಿಕೊಂಡಿರುವ ಸ್ಟಾರ್ ನಟಿಯರ ಪಾತ್ರದ ಬಗ್ಗೆಯೂ ನಿರೀಕ್ಷೆ ಮೂಡಿದೆ.


