Homeಕರ್ನಾಟಕಎರಡೇ ಸಾಲಿನ ವೈಯಕ್ತಿಕ ಭಾಷಣ ಓದಿ ಹೊರ ನಡೆದ ರಾಜ್ಯಪಾಲರು

ಎರಡೇ ಸಾಲಿನ ವೈಯಕ್ತಿಕ ಭಾಷಣ ಓದಿ ಹೊರ ನಡೆದ ರಾಜ್ಯಪಾಲರು

ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಗುರುವಾರ (ಜ.22) ಭಾರೀ ಹೈಡ್ರಾಮ ನಡೆಯಿತು. ರಾಜ್ಯಪಾಲ ಥಾವರ್‌ ಚಂದ ಗೆಹಲೋಟ್‌ ಅವರು ಸರ್ಕಾರ ಬರೆದುಕೊಟ್ಟ ಭಾಷಣ ಓದದೆ, ತಮ್ಮದೇ ಆದ ಕೇವಲ ಎರಡೇ ಸಾಲಿನ ಭಾಷಣ ಓದಿ ಹೊರ ನಡೆದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಆರಂಭದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕಾನೂನು ಸಚಿವರ ಹೆಚ್‌.ಕೆ ಪಾಟೀಲ್ ಸೇರಿದಂತೆ ಪ್ರಮುಖರು ಮನವೊಲಿಸಿದ ಬಳಿಕ ರಾಜ್ಯಪಾಲರು ಸದನಕ್ಕೆ ಆಗಮಿಸಿದ್ದರು.

ರಾಜ್ಯಪಾಲರು ಸದನಕ್ಕೆ ಬರಲು ಒಪ್ಪಿದರೂ, ಸರ್ಕಾರ ಬರೆದುಕೊಟ್ಟ ಭಾಷಣ ಓದುವುದಿಲ್ಲ. ಅವರೇ ಪ್ರತ್ಯೇಕ ಭಾಷಣ ಬರೆದುಕೊಂಡು ಬಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಾಜ್ಯಪಾಲರು ಸದನಕ್ಕೆ ಆಗಮಿಸಿ ಕೇವಲ ಎರಡು ಸಾಲಿನ ಭಾಷಣ ಮಾಡಿ ತೆರಳಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರು ರಾಜ್ಯಪಾಲರನ್ನು ತಡೆಯುವ ಪ್ರಯತ್ನ ಮಾಡಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments