Homeಕರ್ನಾಟಕವಿಧಾನಸೌಧ ಶುದ್ಧೀಕರಣಕ್ಕೆ ಅರ್ಚಕರೊಂದಿಗೆ ಆಗಮಿಸಿದ ಕಾಂಗ್ರೆಸ್‌ ತಂಡ, ಪೊಲೀಸರಿಂದ ತಡೆ

ವಿಧಾನಸೌಧ ಶುದ್ಧೀಕರಣಕ್ಕೆ ಅರ್ಚಕರೊಂದಿಗೆ ಆಗಮಿಸಿದ ಕಾಂಗ್ರೆಸ್‌ ತಂಡ, ಪೊಲೀಸರಿಂದ ತಡೆ

ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ ಅಪರೂಪದ ವಿದ್ಯಮಾನವೊಂದಕ್ಕೆ ಸಾಕ್ಷಿಯಾಯಿತು. ವಿಧಾನಸೌಧ ಮತ್ತು ವಿಕಾಸಸೌಧ ಅಪವಿತ್ರಗೊಂಡಿದೆ ಎಂದು ಹೇಳಿ ಅರ್ಚಕರೊಂದಿಗೆ ಕಾಂಗ್ರೆಸ್‌ ತಂಡವೊಂದು ಆಗಮಿಸಿ ಪವಿತ್ರಗೊಳಿಸುವ ಕಾರ್ಯಕ್ಕೆ ಮುಂದಾಯಿತು.

ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಆಗಮಿಸಿದ ಅರ್ಚಕರ ತಂಡ ವಿಕಾಸಸೌಧದ ಗೇಟ್ ಬಳಿ ಪೂಜೆ ಆರಂಭಿಸಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಇದಕ್ಕೆ ತಡೆಯೊಡ್ಡಿದರು. ಆಡಳಿತದ ಶಕ್ತಿ ಕೇಂದ್ರದ ಗೇಟುಗಳ ಬಳಿ ಇಂತಹ ಆಚರಣೆಗೆ ಅವಕಾಶವಿಲ್ಲ ಎಂದು ಅಡ್ಡಿಪಡಿಸಿದರು. ಪೊಲೀಸರ ಈ ಕ್ರಮಕ್ಕೆ ಕಾಂಗ್ರೆಸ್ ಮುಖಂಡ ಮನೋಹರ್ ಮತ್ತವರ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

“ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಅವರು ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದರಿಂದ ಆಡಳಿತ ಶಕ್ತಿ ಕೇಂದ್ರದ ಪಾವಿತ್ರಕ್ಕೆ ಧಕ್ಕೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸಂತ್ರಸ್ತೆಯನ್ನು ಇಲ್ಲಿಗೆ ಕರೆತಂದು ಘಟನೆ ನಡೆದ ಸ್ಥಳದ ಮಹಜರು ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಶುದ್ಧೀಕರಣ ಮಾಡುವ ಮೂಲಕ ಶುದ್ಧೀಕರಣ ಮಾಡಲಾಗುತ್ತಿದೆ” ಎಂದು ಮನೋಹರ್ ಹೇಳಿದರು.‌

ಆಡಳಿತ ಶಕ್ತಿ ಕೇಂದ್ರವನ್ನು ಪವಿತ್ರಗೊಳಿಸುವ ಕೆಲಸಕ್ಕೆ ಅವಕಾಶ ನೀಡದೆ ಪೊಲೀಸರು ದರ್ಪ ತೋರುತ್ತಿದ್ದಾರೆ ಎಂದು ಆಪಾದಿಸಿದರು. ಈ ವೇಳೆ ಪೊಲೀಸರು ಮನೋಹರ್ ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments