Homeದೇಶಮಧ್ಯಮ ವರ್ಗದ ಜನರಿಗೆ ₹12 ಲಕ್ಷ ವರೆಗೂ ತೆರಿಗೆ ವಿನಾಯಿತಿ, ಕೇಂದ್ರ ಬಜೆಟ್‌ನಲ್ಲಿ ಮತ್ತೇನಿದೆ?

ಮಧ್ಯಮ ವರ್ಗದ ಜನರಿಗೆ ₹12 ಲಕ್ಷ ವರೆಗೂ ತೆರಿಗೆ ವಿನಾಯಿತಿ, ಕೇಂದ್ರ ಬಜೆಟ್‌ನಲ್ಲಿ ಮತ್ತೇನಿದೆ?

ಕೇಂದ್ರ ಬಜೆಟ್ ಮಧ್ಯಮ ವರ್ಗದ ಜನರಿಗೆ ಆದಾಯ ತೆರಿಗೆ ವಿನಾಯಿತಿ ಕೊಡುವ ಮೂಲಕ ಸಿಹಿಸುದ್ದಿ ನೀಡಿದೆ. ಸ್ಟಾಂಡರ್ಡ್‌ ಡಿಡಕ್ಷನ್‌ 75 ಸಾವಿರ ರೂಪಾಯಿ ಸೇರಿ ಒಟ್ಟು 12.75 ಲಕ್ಷ ರೂ.ವರೆಗೂ ಆದಾಯ ತೆರಿಗೆ ವಿನಾಯಿತಿ ನೀಡಿದೆ. ಇದರಿಂದ ತಿಂಗಳಿಗೆ 1 ಲಕ್ಷ ರುಪಾಯಿ ದುಡಿಯುವವರಿಗೂ ತೆರಗೆ ಪಾವತಿ ಮಾಡಬೇಕಾಗಿಲ್ಲ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಸಂಸತ್ತಿನಲ್ಲಿ 2025-26ರ ಕೇಂದ್ರ ಬಜೆಟ್ ಮಂಡನೆ ವೇಳೆ “ಹೊಸ ಆದಾಯ ತೆರಿಗೆ ಮಸೂದೆ”ಯನ್ನು ಮಂಡಿಸಲಾಗುವುದು ಎಂದಿದ್ದಾರೆ. . ಈ ಮಸೂದೆಯು ನೇರ ತೆರಿಗೆ ಕೋಡ್ (DTC) ಅನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದೆ, ಇದು ಅಸ್ತಿತ್ವದಲ್ಲಿರುವ 1961 ರ ಆದಾಯ ತೆರಿಗೆ ಕಾಯಿದೆಯಲ್ಲಿ ಬದಲಾವಣೆ ಆಗಲಿದೆ” ಎಂದಿದ್ದಾರೆ.

ಕೇಂದ್ರ ಬಜೆಟ್‌ ಪ್ರಮುಖಾಂಶಗಳು

ಕ್ಯಾನ್ಸರ್ ಹಾಗೂ ಇನ್ನಿತರ ಮಾರಣಾಂತಿಕ ಅಪರೂಪದ ಖಾಯಿಲೆಗಳಿಂದ ರಕ್ಷಿಸಬಲ್ಲ 36 ಜೀವ ರಕ್ಷಕ ಔಷಧಿಗಳನ್ನು ತೆರಿಗೆ ಮುಕ್ತ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ.

ಬೀದಿ ವ್ಯಾಪಾರಿಗಳು ಮತ್ತು ಆನ್‌ಲೈನ್ ಮತ್ತು ನಗರ ಕೆಲಸಗಾರರಿಗೆ, ಗುರುತಿನ ಕಾರ್ಡ್‌ಗಳು ಮತ್ತು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಗೆ ಅವಕಾಶ.

ನಗರ ಕಾರ್ಮಿಕರ ಸಾಮಾಜಿಕ-ಆರ್ಥಿಕ ಉನ್ನತಿಗಾಗಿ ಯೋಜನೆ ಜಾರಿ,ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಬ್ಯಾಂಕ್‌ಗಳಿಂದ ವರ್ಧಿತ ಸಾಲಗಳೊಂದಿಗೆ ನವೀಕರಿಸಲಾಗುವುದು, UPI ಲಿಂಕ್ ಮಾಡಿದ ಕ್ರೆಡಿಟ್ ಕಾರ್ಡ್‌ಗಳು 30,000 ರೂ ಮಿತಿ, ಮತ್ತು ಸಾಮರ್ಥ್ಯ ನಿರ್ಮಾಣ ಬೆಂಬಲ ನೀಡುವ ಘೋಷಣೆ.

ಗ್ರಾಮೀಣ ಭಾಗದಲ್ಲಿ 1.5 ಲಕ್ಷ ಪೋಸ್ಟ್ ಆಫೀಸ್ ಗಳನ್ನು ಹೆಚ್ಚಳ ಮಾಡುವ ಗುರಿ. ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ನಿರ್ಮಿಸಿ, ಭಾರತವನ್ನು ಆಟಿಕೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಯೋಜನೆ ಘೋಷಣೆ

ದೇಶದಲ್ಲಿ ಪ್ರಮುಖ 50 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ, ಮುದ್ರಾ ಲೋನ್, ಸಾರಿಗೆ ಸಂಪರ್ಕ, ಸ್ವಚ್ಛತೆ ಹಾಗೂ ಇ ವಿಸಾಗಳ ಬಗ್ಗೆ ಘೋಷಣೆ

ಆರೋಗ್ಯ ವೃದ್ಧಿಸುವ ಉದ್ದೇಶದಿಂದ 1 ಕೋಟಿ ಹಾಲುಣಿಸುವ ತಾಯಂದಿರಿಗೆ ನ್ಯೂಟ್ರೀಷನ್ ಭರಿತ ಆಹಾರ ನೀಡುವ ಯೋಜನೆ ಬಜೆಟ್‌ನಲ್ಲಿ ಘೋಷಣೆ

ಮೊಬೈಲ್ ಫೋನ್‌ಗಳಲ್ಲಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿ ತಯಾರಕರಿಗೆ ಹೆಚ್ಚಿನ ಉತ್ತೇಜ. ಸಮುದ್ರ ಉತ್ಪನ್ನಗಳನ್ನು ಉತ್ತೇಜಿಸಲು ಅಬಕಾರಿ ಸುಂಕವನ್ನು ಶೇ 30ರಿಂದ ಶೇ 5ಕ್ಕೆ ಇಳಿಕೆ

₹60 ಸಾವಿರ ಕೋಟಿ ರಫ್ತು ವಹಿವಾಟು ಹೊಂದಿರುವ ಮೀನುಗಾರಿಕೆಯಲ್ಲಿ ಅಂಡಮಾನ್ ನಿಕೋಬಾರ್ ಹಾಗೂ ಲಕ್ಷದ್ವೀಪಗಳನ್ನು ಗುರಿಯಾಗಿಸಿಕೊಂಡು ಒತ್ತು ನೀಡಲಾಗುವುದು. ಇದಕ್ಕಾಗಿ ವಿಶೇಷ ವಲಯ ನಿರ್ಮಿಸಲಾಗುವುದು. ಪೌಷ್ಟಿಕತೆಯಲ್ಲಿ ಹೆಚ್ಚು ಬೇಡಿಕೆ ಇರುವ ತಾವರೆ ಬೀಜ (ಮಕಾನಾ) ಬೆಳೆಗೆ ಒತ್ತು ನೀಡಲಾಗುವುದು.

ಕಿಸಾನ್‌ ಕಾರ್ಡ್‌ ಮಿತಿ 3 ರಿಂದ 5 ಲಕ್ಷಕ್ಕೆ ಏರಿಕೆ, ರೈತರ ಅನುಕೂಲಕ್ಕಾಗಿ 3 ಯೂರಿಯಾ ಪ್ಲಾಂಟ್‌ ನಿರ್ಮಾಣ, ಪೌಷ್ಠಿಕತೆಯಲ್ಲಿ ಮಕಾನ ಬೆಳೆಗೆ ಒತ್ತು

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೂರು ನಾವಿನ್ಯತೆ ಸಂಸ್ಥೆಗಳ ಸ್ಥಾಪನೆ 23 ಐಐಟಿಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿಸಲಾಗಿದೆ. 60 ಸಾವಿರದಿಂದ 1.35 ಲಕ್ಷಕ್ಕೆ ಹೆಚ್ಚಳ. ಪಟ್ನಾ ಐಐಟಿ ವಿಸ್ತರಣೆ, ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು 10 ವರ್ಷಗಳಲ್ಲಿ ಶೇ 100ರಷ್ಟು ಹೆಚ್ಚಳ ಮಾಡಲಾಗುವುದು.

ಮೊಬೈಲ್ ಫೋನ್‌ಗಳಲ್ಲಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿ ತಯಾರಕರಿಗೆ ಹೆಚ್ಚಿನ ಉತ್ತೇಜ. ಸಮುದ್ರ ಉತ್ಪನ್ನಗಳನ್ನು ಉತ್ತೇಜಿಸಲು ಅಬಕಾರಿ ಸುಂಕವನ್ನು ಶೇ 30ರಿಂದ ಶೇ 5ಕ್ಕೆ ಇಳಿಕೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments