HomeSportಟಿ-20 ವಿಶ್ವಕಪ್ ಕ್ರಿಕೆಟ್ | ಭಾರತ ವಿರುದ್ಧ ಆಡಲು ಮೂರು ಬೇಡಿಕೆ ಮುಂದಿಟ್ಟ ಪಾಕ್

ಟಿ-20 ವಿಶ್ವಕಪ್ ಕ್ರಿಕೆಟ್ | ಭಾರತ ವಿರುದ್ಧ ಆಡಲು ಮೂರು ಬೇಡಿಕೆ ಮುಂದಿಟ್ಟ ಪಾಕ್

ಫೆ.15ರಂದು ನಿಗದಿಯಾಗಿರುವ ಭಾರತ ವಿರುದ್ಧದ ಟಿ-20 ವಿಶ್ವಕಪ್ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸದಿರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ವರದಿಯಾಗಿದೆ.

ಲಾಹೋರ್‌ನಲ್ಲಿ ನಡೆದ ಐಸಿಸಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಬಾಂಗ್ಲಾದೇಶಕ್ಕೆ ಪರಿಹಾರವನ್ನು ಹೆಚ್ಚಿಸಬೇಕು. ಟಿ-20 ವಿಶ್ವಕಪ್ ನಿಂದ ಹೊರಹಾಕಿದರೂ ಭಾಗವಹಿಸುವ ಶುಲ್ಕವನ್ನು ಹೆಚ್ಚಿಸಬೇಕು. ಭವಿಷ್ಯದ ಐಸಿಸಿ ಟೂರ್ನಿಗಳ ಅತಿಥ್ಯದ ಹಕ್ಕುಗಳನ್ನು ನೀಡಬೇಕು ಎಂಬ ಬೇಡಿಕೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಟ್ಟಿದೆ ಎಂದು ತಿಳಿದುಬಂದಿದೆ.

ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯವನ್ನು ನಾವು ಆಡುವುದಿಲ್ಲ ಎಂದು ಪಿಸಿಬಿ ಇತ್ತೀಚೆಗೆ ಹೆಳಿಕೊಂಡಿತ್ತು.  ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ  ಇಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಲಿದ್ದು, ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ವೇಳೆ ಪಾಕಿಸ್ತಾನ, ಭಾರತದ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡರೆ ಭಾರಿ ದಂಡ, ಪಾಯಿಂಟ್ ಕಡಿತ, ಸಂಭಾವ್ಯ ಸದಸ್ಯತ್ಯ ಅಮಾನತು, ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳ ಅತಿಥ್ಯದ ಹಕ್ಕು ಕಡಿತ ಸೇರಿದಂತೆ ಅನೇಕ ನಿರ್ಬಂಧಗಳನ್ನು ಎದುರಿಸಬೇಕಾದ ಎಚ್ಚರಿಕೆಯನ್ನು ಐಸಿಸಿ ಈಗಾಗಲೇ ಪತ್ರದ ಮೂಲಕ ನೀಡಿದೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments