HomeSportಟಿ-20 ಏಷ್ಯಾ ಕಪ್‌: ಭಾರತ-ಪಾಕಿಸ್ತಾನ ಇಂದು ಮುಖಾಮುಖಿ, ಪಂದ್ಯ ಬಹಿಷ್ಕರಿಸುವಂತೆ ಕರೆ

ಟಿ-20 ಏಷ್ಯಾ ಕಪ್‌: ಭಾರತ-ಪಾಕಿಸ್ತಾನ ಇಂದು ಮುಖಾಮುಖಿ, ಪಂದ್ಯ ಬಹಿಷ್ಕರಿಸುವಂತೆ ಕರೆ

ಟಿ-20 ಏಷ್ಯಾ ಕಪ್‌ 2025 ಪಂದ್ಯಾವಳಿಯ ಅತ್ಯಂತ ರೋಚಕ ಕದನವಾದ ಭಾರತ-ಪಾಕಿಸ್ತಾನ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ ಸಜ್ಜಾಗಿದೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಏಷ್ಯಾಕಪ್ 2025 ರಲ್ಲಿ ಭಾನುವಾರ ಪಾಕಿಸ್ತಾನವನ್ನು ಎದುರಿಸಲು ಸಿದ್ಧವಾಗಿದೆ.

ಭಾರತ ತಂಡವು ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಯುಎಇಯನ್ನು ಸೋಲಿಸಿತು. ಮತ್ತೊಂದೆಡೆ, ಪಾಕಿಸ್ತಾನವು ಓಮನ್ ಅನ್ನು ಸೋಲಿಸುವ ಮೂಲಕ ಉತ್ತಮ ಆರಂಭವನ್ನು ಮಾಡಿದೆ. ಉಭಯ ತಂಡಗಳು ಮೊದಲ ಗೆಲುವು ಕಂಡಿರುವ ಕಾರಣ ಇಂದಿನ ಪಂದ್ಯದ ಗೆಲುವಿನತ್ತ ಕ್ರೀಡಾ ಪ್ರೇಮಿಗಳ ಕಣ್ಣು ನೆಟ್ಟಿದೆ.

ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ಒಟ್ಟು 19 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 10 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 6 ಪಂದ್ಯಗಳನ್ನು ಗೆದ್ದಿದೆ. ಆದರೆ 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಟಿ20 ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು 3 ಬಾರಿ ಮುಖಾಮುಖಿಯಾಗಿವೆ, ಇದರಲ್ಲಿ ಭಾರತ 2 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೇವಲ 1 ಪಂದ್ಯವನ್ನು ಗೆದ್ದಿದೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಇದಕ್ಕೂ ಮುನ್ನವೇ ಪಹಲ್ಗಾಮ್​ ದಾಳಿ ಸಂತ್ರಸ್ತರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಪಹಲ್ಗಾಮ್ ದಾಳಿಯಲ್ಲಿ ಮೃತಟ್ಟವರಿಗೆ ಮಾಡುತ್ತಿರುವ ಅವಮಾನ ಎಂದು ಕಣ್ಣೀರಾಕಿದ್ದಾರೆ. 22ರಂದು ಜಮ್ಮು ಕಾಶ್ಮೀರದ ಫಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಬಲಿಯಾದರು. ಇದರಲ್ಲಿ ಬಹುತೇಕ ಮಂದಿ ಭಾರತದ ಪ್ರಾವಸಿಗರೇ ಆಗಿದ್ದರು.ಇದರಲ್ಲಿ ಕಾನ್ಪುರದ ಉದ್ಯಮಿ ಶುಭಂ ದ್ವಿವೇದಿ ಕೂಡ ಒಬ್ಬರಾಗಿದ್ದು, ಇದೀಗ ಅವರ ಪತ್ನಿ ಪಂದ್ಯದ ವಿರುದ್ಧ ಕಿಡಿ ಕಾರಿದ್ದಾರೆ.

ಪಂದ್ಯ ಬಹಿಷ್ಕರಿಸುವಂತೆ ಕರೆ

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ ಭಾನುವಾರ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಟಿ-20 ಏಷ್ಯಾ ಕಪ್‌ ಪಂದ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ಪಹಲ್ಗಾಮ್‌ ದಾಳಿ ಸಂತ್ರಸ್ತರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಪಹಲ್ಗಾಮ್​ದಾಳಿಯಲ್ಲಿ ಮೃತಪಪಟ್ಟವರಿಗೆ ಮಾಡುತ್ತಿರುವ ಅವಮಾನ ಎಂದು ಕಣ್ಣೀರಾಕಿದ್ದಾರೆ. ಪಹಲ್ಲಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಕರಿಛಾಯೆ ಈ ಪಂದ್ಯದ ಮೇಲೆ ಬಿದ್ದಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಬಲಿಯಾದರು. ಇದರಲ್ಲಿ ಬಹುತೇಕ ಮಂದಿ ಭಾರತದ ಪ್ರಾವಸಿಗರೇ ಆಗಿದ್ದರು. ಇದರಲ್ಲಿ ಕಾನ್ಪುರದ ಉದ್ಯಮಿ ಶುಭಂ ದ್ವಿವೇದಿ ಕೂಡ ಒಬ್ಬರಾಗಿದ್ದು, ಇದೀಗ ಅವರ ಪತ್ನಿ ಪಂದ್ಯದ ವಿರುದ್ಧ ಕಿಡಿ ಕಾರಿದ್ದಾರೆ.

ಪಹಲ್ಗಾಮ್ ದಾಳಿಯ ಸಂತ್ರಸ್ತರಿಗಾಗಿ ಪಾಕ್ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆಯೂ ಕರೆ ನೀಡಲಾಗಿದೆ. ಒಂದು ವೇಳೆ ಪಂದ್ಯ ಆಯೋಜನೆಯಾದರೆ ಯಾರೂ ಕೂಡಾ ವೀಕ್ಷಿಸಬಾರದು ಎಂದು ಮನವಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments