ನೀವು ಗೌಪ್ಯತೆಯ ಜೊತೆ ಆಟವಾಡಲು ಸಾಧ್ಯವಿಲ್ಲ. ನಮ್ಮ ಡೇಟಾದ ಒಂದೇ ಒಂದು ಅಂಕಿಯನ್ನು ಹಂಚಿಕೊಳ್ಳಲು ನಾವು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಅಮೆರಿಕ ಮೂಲದ ಮೆಟಾ ಕಂಪನಿಗೆ ತಿಳಿಸಿ ಗೋಪ್ಯತಾ ನೀತಿ ಉಲ್ಲಂಘಟನೆಗೆ ₹213.14 ಕೋಟಿ ದಂಡ ವಿಧಿಸಿದೆ.
ನಾಗರಿಕರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಾಟ್ಸಾಪ್ ಮತ್ತು ಅದರ ಮೂಲ ಕಂಪನಿ ಮೆಟಾವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಡೇಟಾ ಹಂಚಿಕೆಯ ಹೆಸರಿನಲ್ಲಿ ಬಳಕೆದಾರರ ಖಾಸಗಿ ಡೇಟಾ ದುರ್ಬಳಕೆಯಾಗಬಾರದು ಎಂದು ತಾಕೀತು ಮಾಡಿದೆ.
ಡೇಟಾ ಹಂಚಿಕೆ ಮತ್ತು ಮಾರುಕಟ್ಟೆ ಪ್ರಾಬಲ್ಯಕ್ಕೆ ಸಂಬಂಧಿಸಿದಂತೆ ಜನವರಿ 2025 ರ NCLAT ಆದೇಶವನ್ನು ಪ್ರಶ್ನಿಸಿ WhatsApp, Meta ಮತ್ತು ಭಾರತೀಯ ಸ್ಪರ್ಧಾ ಆಯೋಗ (CCI) ಸಲ್ಲಿಸಿದ ಮೇಲ್ಮನವಿಗಳು ಸೇರಿದಂತೆ ಹಲವಾರು ಮೇಲ್ಮನವಿಗಳ ವಿಚಾರಣೆ ನಡೆಯಿತು.
2021 ರ ಗೌಪ್ಯತೆ ನೀತಿಯ ಮೂಲಕ ತಮ್ಮ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ CCI ವಿಧಿಸಿದ ₹213.14 ಕೋಟಿ ದಂಡವನ್ನು ಎತ್ತಿಹಿಡಿದ NCLAT ತೀರ್ಪನ್ನು ಪ್ರಶ್ನಿಸಲು ಮೆಟಾ ಮತ್ತು WhatsApp ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.
ಈ ಪ್ರಕರಣವು Facebook/Meta ಕಂಪನಿಗಳೊಂದಿಗೆ ನೀತಿಯ ಕಡ್ಡಾಯ ಡೇಟಾ-ಹಂಚಿಕೆಯ ಮೇಲೆ ಕೇಂದ್ರೀಕೃತವಾಗಿದೆ, ಇದನ್ನು CCI ಬಳಕೆದಾರರಿಗೆ “ಅನ್ಯಾಯ” “ತೆಗೆದುಕೊಳ್ಳಿ ಅಥವಾ ಬಿಡಿ” ಸ್ಥಿತಿ ಎಂದು ಪರಿಗಣಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ ಮಲ್ಯ ಬಾಗ್ನಿ ಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು ಫೆ. 9ರಂದು ಮಧ್ಯಂತರ ಆದೇಶ ಪ್ರಕಟಿಸುವುದಾಗಿ ತಿಳಿಸಿತು. ಅಲ್ಲದೆ ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಪಕ್ಷಗಾರರನ್ನಾಗಿ ಮಾಡಬೇಕು ಎಂದು ಇದೇ ವೇಳೆ ಆದೇಶಿಸಿತು.


