Homeಸಿನಿಮಾರಾಜ್ಯ ಚಲನಚಿತ್ರ ಪ್ರಶಸ್ತಿ | ಕಿಚ್ಚ ಸುದೀಪ್‌ ಮತ್ತು ಅನುಪಮಾ ಗೌಡ ಅತ್ಯುತ್ತಮ ನಟ, ನಟಿ...

ರಾಜ್ಯ ಚಲನಚಿತ್ರ ಪ್ರಶಸ್ತಿ | ಕಿಚ್ಚ ಸುದೀಪ್‌ ಮತ್ತು ಅನುಪಮಾ ಗೌಡ ಅತ್ಯುತ್ತಮ ನಟ, ನಟಿ ಪ್ರಶಸ್ತಿಗೆ ಭಾಜನ

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಬುಧವಾರ (ಜ.22ರಂದು) ಘೋಷಣೆಯಾಗಿದೆ. 2019ರ ಅತ್ಯುತ್ತಮ ನಟ ಪ್ರಶಸ್ತಿ ಕಿಚ್ಚ ಸುದೀಪ್ ಅವರಿಗೆ ಲಭಿಸಿದ್ದು, ‘ಪೈಲ್ವಾನ್’ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದಾರೆ.

ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಅವರಿಗೆ 2019ನೇ ಸಾಲಿನ ‘ಅತ್ಯುತ್ತಮ ನಟಿ’ ರಾಜ್ಯ ಪ್ರಶಸ್ತಿ ನೀಡಲಾಗಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೂರ್ಣ ಪಟ್ಟಿ ಇಲ್ಲಿದೆ:

ಅತ್ಯುತ್ತಮ ನಟ: ಸುದೀಪ್ (ಪೈಲ್ವಾನ್)

ಅತ್ಯುತ್ತಮ ನಟಿ: ಅನುಪಮಾ ಗೌಡ (ತ್ರಯಂಬಕಂ)

ಅತ್ಯುತ್ತಮ ಮೊದಲ ಚಿತ್ರ: ಮೋಹನದಾಸ (ನಿರ್ದೇಶಕ -ಪಿ. ಶೇಷಾದ್ರಿ)

ದ್ವಿತೀಯ ಅತ್ಯುತ್ತಮ ಚಿತ್ರ : ‘ಲವ್ ಮಾಕ್ಟೇಲ್’ (ನಿರ್ದೇಶಕ – ಡಾರ್ಲಿಂಗ್ ಕೃಷ್ಣ)

ತೃತೀಯ ಅತ್ಯುತ್ತಮ ಚಿತ್ರ : ‘ಅರ್ಧ್ಯಂ’ (ನಿರ್ದೇಶಕ – ವೈ ಶ್ರೀನಿವಾಸ್)

ಅತ್ಯುತ್ತಮ ಪೋಷಕ ನಟ: ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕರಿಯಪ್ಪ)

ಅತ್ಯುತ್ತಮ ಪೋಷಕ ನಟಿ: ಅನುಷಾ ಕೃಷ್ಣ (ಬ್ರಾಹ್ಮಂ)

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ (ನಿರ್ದೇಶಕ – ಮಂಜುನಾಥ್ ಎಸ್)

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ V/s ಇಂಗ್ಲೆಂಡ್ (ನಿರ್ದೇಶಕ – ನಾಗತಿಹಳ್ಳಿ ಚಂದ್ರಶೇಖರ್)

ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು (ನಿರ್ದೇಶಕ – ಜಿ. ಅರುಣ್ ಕುಮಾರ್)

ಚೊಚ್ಚಲ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲಗಾಂಧಿ (ನಿರ್ದೇಶಕ – ನಾಗೇಶ್ ಎನ್.)

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ತ್ರಿಬಲ್ ತಲಾಖ್ (ಬ್ಯಾರಿ ಭಾಷೆ) (ನಿರ್ದೇಶಕ – ಯೂಕೂಬ್ ಖಾದರ್ ಗುಲ್ವಾಡಿ)

ಅತ್ಯುತ್ತಮ ಕತೆ: ಜಯಂತ್ ಕಾಯ್ಕಿಣಿ

ಅತ್ಯುತ್ತಮ ಚಿತ್ರಕತೆ: ಡಾರ್ಲಿಂಗ್ ಕೃಷ್ಣ ( ಲವ್ ಮಾಕ್ಟೇಲ್)

ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ಅಮೃತಮತಿ ಚಿತ್ರ)

ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್ ಭಾಸ್ಕರ್

ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ (ಯಜಮಾನ)

ಅತ್ಯುತ್ತಮ ಸಂಕಲನ: ಜಿ. ಬಸವರಾಜ್ ಅರಸ್‌

ಅತ್ಯುತ್ತಮ ಬಾಲ ನಟ: ಮಾಸ್ಟರ್ ಪ್ರೀತಂ ( ಮಿಂಚುಹುಳು)

ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿಗ (ಸುಗಂಧಿ)

ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ (ಮೋಹನದಾಸ)

ಅತ್ಯುತ್ತಮ ಗೀತ ರಚನೆ: ರಝಾಕ್ ಪುತ್ತೂರು (ಪೆನ್ಸಿಲ್ ಬಾಕ್ಸ್)

ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್ ( ಲವ್ ಮಾಕ್ಟೇಲ್)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಜಯದೇವಿ ಜಂಗಮ ಶೆಟ್ಟಿ ( ರಾಗಭೈರವಿ ಚಿತ್ರ)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಅಮೃತಮತಿ ಚಿತ್ರ ಹಾಗೂ ತಮಟೆ ನರಸಿಂಹಯ್ಯ ಸಿನಿಮಾ

ಅತ್ಯುತ್ತಮ ನಿರ್ವಾಹಕ: ಆರ್. ಗಂಗಾಧರ್ (ಮಕ್ಕಡ್ ಮನಸ್)

ಒಟ್ಟು 180 ಸಿನಿಮಾಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದವು. ಪ್ರತಿ ವರ್ಷ ರಾಜ್ಯ ಸರ್ಕಾರ ಪ್ರಶಸ್ತಿ ನೀಡುತ್ತಾ ಬರುತ್ತಿತ್ತು. ಆದರೆ ಕೋವಿಡ್ ಬಳಿಕ ಇದಕ್ಕೆ ಹಿನ್ನೆಡೆ ಆಗಿತ್ತು. ಇದೀಗ 6 ವರ್ಷ ಬಳಿಕ ಪ್ರಶಸ್ತಿ ಘೋಷಣೆ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments