Homeಕರ್ನಾಟಕಕೇರಳದ ದೇವಸ್ಥಾನ‌ದಲ್ಲಿ ನನ್ನ ಮೇಲೆ ಶತ್ರು ಭೈರವಿ ಯಾಗ ನಡೆಯುತ್ತಿದೆ: ಡಿ ಕೆ ಶಿವಕುಮಾರ್

ಕೇರಳದ ದೇವಸ್ಥಾನ‌ದಲ್ಲಿ ನನ್ನ ಮೇಲೆ ಶತ್ರು ಭೈರವಿ ಯಾಗ ನಡೆಯುತ್ತಿದೆ: ಡಿ ಕೆ ಶಿವಕುಮಾರ್

ನನ್ನ ವಿರುದ್ಧ ಕೇರಳದ ದೇವಸ್ಥಾನವೊಂದರಲ್ಲಿ ಶತ್ರು ಭೈರವಿ ಎಂಬ ಯಾಗವನ್ನು ಮಾಡಿಸಲಾಗುತ್ತಿದೆ. ಉತ್ತರ ಭಾರತದಿಂದ ಬಂದಿರುವ ಅಘೋರಿಗಳ ತಂಡವೊಂದು ಈ ಯಾಗ ನಡೆಸುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಸ್ಫೋಟಕ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಈ ಯಾಗವನ್ನು ಯಾರು ಮಾಡಿಸುತ್ತಿದ್ದಾರೆ, ಯಾರು ಯಾರು ಆ ಯಾಗದಲ್ಲಿ ಭಾಗವಹಿಸಿದ್ದಾರೆ, ಇನ್ನೂ ಯಾರು ಈ ಯಾಗದ ಹಿಂದಿದ್ದಾರೆ ಎಂಬ ವಿಚಾರ ನನಗೆ ಗೊತ್ತಿದೆ” ಎಂದಿದ್ದಾರೆ.

“ನನ್ನ ವಿರುದ್ಧ, ಸಿಎಂ ಸಿದ್ದರಾಮಯ್ಯ ವಿರುದ್ಧ, ನಮ್ಮ ಸರ್ಕಾರದ ವಿರುದ್ಧವೇ ಯಾಗ ಮಾಡಿಸಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಯಾಗ ನಡೆಯುತ್ತಿದೆ. ಈ ಯಾಗದಲ್ಲಿ ಪಂಚ ಬಲಿಯನ್ನೂ ನೀಡಲಾಗುತ್ತಿದೆ” ಎಂದರು.

ಏನಿದು ಯಾಗ?

ಹೆಸರೇ ಹೇಳುವಂತೆ, ಶತ್ರು ಭೈರವ ಯಾಗ ಎಂದರೆ ಶತ್ರುಗಳನ್ನು ನಾಶಪಡಿಸುವ ಅಥವಾ ಶತ್ರುಗಳ ಬಾಧೆಯಿಂದ ಹೊರಬರಲು ಮಾಡುವಂಥ ಯಾಗ ಎಂದು ಧಾರ್ಮಿಕ ವಲಯದಲ್ಲಿ ಹೇಳಲಾಗುತ್ತದೆ. ನಮ್ಮ ದೇಶದಲ್ಲಿ ಭೈರವ ದೇವರನ್ನು ಅನಾದಿ ಕಾಲದಿಂದಲೂ ಪೂಜಿಸಿಕೊಂಡು ಬರಲಾಗಿದೆ.

ನಾವೆಲ್ಲರೂ ಕಾಲಭೈರವ ದೇವರ ಹೆಸರನ್ನು ಕೇಳಿರುತ್ತೇವೆ. ಕಾಲ ಭೈರವಿ ಎಂಬ ದೇವರಿನ ಹೆಸರು ಕೇಳಿದ ಕೂಡಲೇ ಕೆಲವರು ಬೆಚ್ಚಿ ಬೀಳುವುದುಂಟು. ಆದರೆ, ನಿಜ ಹೇಳಬೇಕೆಂದರೆ ಶುದ್ಧ ಮನಸ್ಸಿನಿಂದ ಕಾಲ ಭೈರವನ ಪೂಜೆ, ಆರಾಧನೆ ಮಾಡಿದರೆ ಮನುಷ್ಯರು ತಾವು ಅನುಭವಿಸುತ್ತಿರುವ ತೊಂದರೆಗಳಿಂದ, ಕಷ್ಟಗಳಿಂದ ಬೇಗನೇ ಮುಕ್ತಿ ಹೊಂದಿ ಸುಖ ಜೀವನವನ್ನು ಪಡೆಯುತ್ತಾರೆಂಬ ಪ್ರತೀತಿಯಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments