ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತಮಿಳುನಾಡಿನ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
‘ಧರ್ಮಸ್ಥಳಕ್ಕೆ ಕಳಂಕ ತರುವ ಪಿತೂರಿಯ ಹಿಂದಿನ ರೂವಾರಿ ಶಶಿಕಾಂತ ಸೆಂಥಿಲ್’ ಎಂದು ಆರೋಪಿಸಿದ್ದ ಜನಾರ್ದನ ರೆಡ್ಡಿ ವಿರುದ್ಧ ಶಶಿಕಾಂತ ಸೆಂಥಿಲ್ ಅವರು ಬೆಂಗಳೂರಿನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ಬೆಳಿಗ್ಗೆ ಖುದ್ದು ಹಾಜರಾಗಿದ್ದರು. ಶಶಿಕಾಂತ ಸೆಂಥಿಲ್ ಪರ ಹಾಜರಾಗಿದ್ದ ಹೈಕೋರ್ಟ್ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಸಂಜಯ ಯಾದವ್, ದೂರನ್ನು ದಾಖಲು ಮಾಡಿಕೊಳ್ಳುವಂತೆ ಮ್ಯಾಜಿಸ್ಟ್ರೇಟ್ ಕೆ.ಎನ್.ಶಿವಕುಮಾರ್ ಅವರಿಗೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಇದೇ ಸೆ.11ಕ್ಕೆ ದೂರಿನ ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಧಾರ್ಮಿಕ ವಿಚಾರ ಪೊಲಿಟಿಕಲಿ ತಗೊಳ್ತಿದ್ದಾರೆ. ಯಾರೋ ಒಬ್ಬರು ಸೆಂಥಿಲ್ ಕ್ರಿಶ್ಚಿಯನ್ ಅಂತಾ ಹೇಳಿದ್ದಾರೆ. ನಾನು ಇವರನ್ನು ಲಾಸ್ಟ್ ನೋಡಿದ್ದು, ಬಳ್ಳಾರಿಯಲ್ಲಿ. ನನ್ನ ಮೊದಲ ದಿನವೇ ಇವರು ಅರೆಸ್ಟ್ ಆಗಿದ್ದರು. ಅನಂತರ ಇವರ ರಾಯಾಲ್ಟಿಯನ್ನ ತಡೆದಿದ್ದೆ. ಕರ್ನಾಟಕ ಪ್ರಾಪರ್ಟಿ ಲೂಟಿ ಮಾಡಿದ ವ್ಯಕ್ತಿ. ಜಡ್ಜ್‌ಗಳನ್ನೂ ಬಿಟ್ಟಿಲ್ಲ. ಅವರಿಗೆ ಬೇರೆ ಯಾರೋ ಹೇಳಿರಬಹುದು. ತಮಿಳುನಾಡಿನ ಪಾಲಿಟಿಕ್ಸ್‌ಗೆ ಇವರನ್ನ ಸೇರಿಸಲೂ ಇರಬಹುದು. ಆದ್ರೆ ಕರ್ನಾಟಕ ಜನ ಬುದ್ದಿವಂತರು ಇದ್ದಾರೆ. ಅವರಿಗೆ ಎಲ್ಲಾ ಗೊತ್ತಿದೆ ಎಂದಿದ್ದಾರೆ ಸೆಂಥಿಲ್.
ಕರ್ನಾಟಕದ ಸಂಪತ್ತು ಲೂಟಿ ಮಾಡಿ ಜೈಲು ಶಿಕ್ಷೆ ಅನುಭವಿಸಿರೊ ವ್ಯಕ್ತಿ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ರೈಟ್ ವಿಂಗ್ ಪಾಲಿಟಿಕ್ಸ್ ವಿರೋಧ ಮಾಡಿಕೊಂಡು ಬಂದವನು ಆ ವ್ಯಕ್ತಿ. ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡಿ ಆರೋಪ ಮಾಡಲಾಗಿದೆ. ಆರಂಭದಲ್ಲಿ ಸಿಂಪಲ್ ವಿಚಾರ ಮಾತನಾಡಬಾರದು ಅಂದುಕೊಂಡಿದ್ದೆ, ಆದ್ರೆ ದಿನೇ ದಿನೇ ನನ್ನ ಹೆಸರು ಕೆಡಿಸುವ ಕೆಲಸ ಆಗ್ತಿದೆ. ಆದ್ದರಿಂದ ಕೇಸ್ ದಾಖಲಿಸಿದ್ದೇನೆ. ದೆಹಲಿಯಲ್ಲಿ ನನಗೆ ಇನ್ನೂ ಮನೆ ಕೊಟ್ಟಿಲ್ಲ ಈ ಸರ್ಕಾರ. ಆ ಬರುಡೆ ಎಲ್ಲಿಂದ ಬಂತು, ಎಲ್ಲಿ ಸಿಗ್ತು ಅಂತಾನೂ ನನಗೆ ಗೊತ್ತಿಲ್ಲ ಎಂದಿದ್ದಾರೆ.
ನನ್ನ ವಿರುದ್ಧ ಯಾರೇ ಆಗಲಿ ಯಾವುದೇ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಅಂಥವರ ವಿರುದ್ಧ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಇದೇ ವೇಳೆ ಎಚ್ಚರಿಸಿದ್ದಾರೆ.


