Homeಕರ್ನಾಟಕಸರ್ವೋದಯ ಅಭಿವೃದ್ದಿ ಮಾದರಿಯೇ 'ಸಿದ್ ಎಕನಾಮಿಕ್ಸ್': ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

ಸರ್ವೋದಯ ಅಭಿವೃದ್ದಿ ಮಾದರಿಯೇ ‘ಸಿದ್ ಎಕನಾಮಿಕ್ಸ್’: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

ಸದನದಲ್ಲಿ ‘ಸಿದ್ದನಾಮಿಕ್ಸ್’ ಎಂದ ಟೀಕೆ ಮಾಡಿರುವ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, “ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು – ಸಮಬಾಳು ನೀಡುವುದನ್ನೇ ಗುರಿಯಾಗಿಟ್ಟುಕೊಂಡ ಸರ್ವೋದಯ ಅಭಿವೃದ್ದಿ ಮಾದರಿಯೇ ಸಿದ್ ಎಕನಾಮಿಕ್ಸ್” ಎಂದಿದ್ದಾರೆ.

“ಬಹುಧರ್ಮ, ಬಹುಸಂಸ್ಕೃತಿ ಮತ್ತು ಬಹುಭಾಷೆಗಳನ್ನೊಳಗೊಂಡ ಬಹುತ್ವವನ್ನು ಗೌರವಿಸುವ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್” ಎಂದು ಸಿಎಂ ಹೇಳಿದ್ದಾರೆ

“ಕಾಯಕದ ಮಹತ್ವವನ್ನು ವಿಶ್ವಕ್ಕೆ ಸಾರಿದ ಬಸವಣ್ಣ, ಗ್ರಾಮಸ್ವರಾಜ್ಯದ ಹರಿಕಾರ ಮಹಾತ್ಮ ಗಾಂಧೀಜಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯ ಎಚ್ಚರಿಕೆಯ ಸಂದೇಶ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳ ಮೂಸೆಯಿಂದ ರೂಪುಗೊಂಡ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್” ಎಂದು ಕುಮಾರಸ್ವಾಮಿಗೆ ಕುಟುಕಿದ್ದಾರೆ.

“ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಎಲ್ಲ ಜಾತಿ-ಧರ್ಮಗಳ ಬಡವರ ಜೊತೆಗಿನ ಒಡನಾಟದ ಅನುಭವದ ಮೂಲಕ ರೂಪುಗೊಂಡ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

“ಜನರ ಬೆವರಗಳಿಕೆಯ ತೆರಿಗೆ ಹಣದ ಪೈಸೆ ಪೈಸೆ ಕೂಡಾ ಆ ಜನರ ಕಲ್ಯಾಣಕ್ಕಾಗಿಯೇ ವಿನಿಯೋಗವಾಗಬೇಕು ಎನ್ನುವ ಎಚ್ಚರ ಮತ್ತು ನುಡಿದಂತೆ ನಡೆಯುವ ಬದ್ಧತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಒಳಗೊಂಡ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments