Homeಕರ್ನಾಟಕಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಎಸ್‌. ರಘುನಾಥ್‌ ಆಯ್ಕೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಎಸ್‌. ರಘುನಾಥ್‌ ಆಯ್ಕೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಉದ್ಯಮಿ ಎಸ್‌.ರಘುನಾಥ್‌ ಆಯ್ಕೆಯಾಗಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ಶ್ರೀರಂಗಪಟ್ಟಣದ ವೈದಿಕ ವಿದ್ವಾಂಸ ಭಾನುಪ್ರಕಾಶ್‌ ಶರ್ಮಾ ಅವರನ್ನು 2,611 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ರಾಜ್ಯದಲ್ಲಿ 66 ಸಾವಿರ ಮತದಾರರಿದ್ದು, ಈ ಪೈಕಿ ಬೆಂಗಳೂರು ನಗರ ಪ್ರದೇಶದಲ್ಲಿ 34 ಸಾವಿರ ಮತದಾರರಿದ್ದಾರೆ. ಇದರಲ್ಲಿ 24,574 ಮಂದಿ ಭಾನುವಾರ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದರು. ಆನಂತರ ನಡೆದ ಮತ ಎಣಿಕೆಯಲ್ಲಿ ಶರ್ಮಾ ಅವರು 11,235 ಮತ, ಎಸ್‌.ರಘುನಾಥ್‌ ಅವರು 13,339 ಮತ ಪಡೆದರು.

ಕಳೆದ ಬಾರಿ ಚುನಾವಣೆಯಲ್ಲಿ ಎಸ್‌.ರಘುನಾಥ್‌ ಅವರು ಅಶೋಕ ಹಾರನಹಳ್ಳಿ ಅವರ ವಿರುದ್ಧ 447 ಮತಗಳಿಂದ ಪರಾಭವಗೊಂಡಿದ್ದರು. ಈ ಬಾರಿ ಅಶೋಕ ಹಾರನಹಳ್ಳಿ ಅವರ ಬೆಂಬಲದೊಂದಿಗೆ ಭಾನುಪ್ರಕಾಶ್‌ ಶರ್ಮಾ ಸ್ಪರ್ಧಿಸಿದ್ದರು. ಕಳೆದ ಬಾರಿ ಸೋತಿದ್ದ ಆರ್‌.ಲಕ್ಷ್ಮಿಕಾಂತ್‌ ಅವರು ತಮ್ಮ ತಂಡದೊಂದಿಗೆ ರಘುನಾಥ್‌ ಅವರನ್ನು ಬೆಂಬಲಿಸಿದ್ದರು.

ಇದೇ ಮೊದಲಿಗೆ ರಾಜ್ಯದ ಪ್ರತಿ ಜಿಲ್ಲೆಗೊಬ್ಬರು ಪ್ರತಿನಿಧಿಯನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ 21 ಜಿಲ್ಲೆಗಳಲ್ಲಿ (1000ಕ್ಕೂ ಮತ ಇರುವ ಜಿಲ್ಲೆಗಳಲ್ಲಿ) ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು. ಆಯಾ ಜಿಲ್ಲೆಯವರು ಅಲ್ಲಿಯೇ ಮತ ಚಲಾಯಿಸುವ ವ್ಯವಸ್ಥೆ ಮಾಡಲಾಗಿತ್ತು.

ಬೀದರ್‌ ಜಿಲ್ಲಾಧ್ಯಕ್ಷರಾಗಿ ವೆಂಕಟೇಶ ಕುಲಕರ್ಣಿ ಹುಮನಾಬಾದ್‌ ಗೆಲುವು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೀದರ್‌ ಜಿಲ್ಲಾಧ್ಯಕ್ಷರಾಗಿ ಸಮಾಜದ ಹಿರಿಯ ಮುಖಂಡ ವೆಂಕಟೇಶ ಕುಲಕರ್ಣಿ ಹುಮನಾಬಾದ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಲಬುರಗಿಯ ನೂತನ ವಿದ್ಯಾಲಯ(ಎನ್‌ವಿ) ಕಾಲೇಜಿನಲ್ಲಿ ಭಾನುವಾರ ಮತ ಎಣಿಕೆ ನಡೆಯಿತು. ಒಟ್ಟು 117 ಮತದಾರರಲ್ಲಿ 94 ಮತದಾರರು ಮತ ಚಲಾಯಿಸಿದರು. ಈ ಪೈಕಿ ವೆಂಕಟೇಶ ಕುಲಕರ್ಣಿ 79 ಮತ ಗಳಿಸಿ ತಮ್ಮ ಎದುರಾಳಿ ವೆಂಕಟೇಶ ಮೋರಖಿಂಡಿಕರ್‌ ಅವರಿಗೆ 65 ಮತಗಳ ಅಂತರದಿಂದ ಹೀನಾಯ ಸೋಲುಣಿಸಿದ್ದಾರೆ. ಮೋರಖಿಂಡಿಕರ್‌ ಕೇವಲ 14 ಮತ ಪಡೆದರೆ, ಒಂದು ಮತ ತಿರಸ್ಕೃತವಾಗಿದೆ. ಆಯ್ಕೆ ಘೋಷಣೆ ಬಳಿಕ ವಿಜಯೋತ್ಸವ ಆಚರಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments