ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧದ ತನಿಖೆಯಲ್ಲಿ ಆರೋಪಿಗಳು ಹಲ್ಲೆ ಬಳಿಕ ಐಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವುದು ಪತ್ತೆಯಾಗಿದೆ.
ಹಲ್ಲೆ ಬಳಿಕ ಹೊಡೆದ ಜಾಗದಲ್ಲಿ ರೇಣುಕಸ್ವಾಮಿ ಕುಸಿದು ಬಿದ್ದಿದ್ದರಂತೆ. ಸ್ಯಾಕ್ಷಿ ನಾಶ ಮಾಡಬೇಕು ಎಂದು ಸಂಚು ಮಾಡಲಾಗಿತ್ತು. ಅದರಲ್ಲಿಯೇ ಒಬ್ಬ ಆರೋಪಿ ಹಲ್ಲೆ ನಡೆದ ಬಳಿಕ ಐಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ.
ರೇಣುಕಸ್ವಾಮಿ ಕೊಲೆ ಸಂಬಂಧ ಐವರು ಆರೋಪಿಗಳಿಗೆ ಸಿಮ್ ಕಾರ್ಡ್ ಕೊಟ್ಟಿದ್ದವರ ವಿಚಾರಣೆಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಮಾಡುತ್ತಿದ್ದಾರೆ. ಸಿಮ್ ಕಾರ್ಡ್ ಕೊಟ್ಟ ಬಗ್ಗೆ ಐವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಎರಡನೇ ಆರೋಪಿ ನಟ ದರ್ಶನ್‌ಗೆ ಹೇಮಂತ್ ಸಿಮ್ ಕೊಟ್ಟಿದ್ದು,ಪ್ರಕಾಶ್ ನಗರ ನಿವಾಸಿ ಹೇಮಂತ್ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿದ್ದರು.
ದರ್ಶನ್‌ಗೆ ಸಿಮ್ ಕೊಟ್ಟಿದ್ದ ಬಗ್ಗೆ ಹೇಮಂತ್ ವಿಚಾರಣೆ ಆಗಿದೆ. ಅದೇ ರೀತಿ ಎ1 ಆರೋಪಿ ಪವಿತ್ರಾಗೌಡಗೆ ಸಿಮ್ ಕಾರ್ಡ್ ಕೊಟ್ಟಿದ್ದ ವ್ಯಕ್ತಿ ವಿಚಾರಣೆ ಆಗಿದೆ. ಮನೋಜ್ ಎಂಬಾತನ ವಿಚಾರಣೆ ನಡೆಸಿ ಪೊಲೀಸರು ಮಾಹಿತಿ ಪಡೆದಿದ್ದಾರೆ.
ಮನೋಜ್ ಬಸವೇಶ್ವರನಗರ ನಿವಾಸಿಯಾದ್ದರು. ಹಾಗೂ ಉಳಿದ ಮೂವರು ಆರೋಪಿಗಳಿಗೆ ಸಿಮ್ ಕೊಟ್ಟವರ ವಿಚಾರಣೆ ಆಗಿದೆ. ಕಾರ್ತಿಕ್, ಕೇಶವಮೂರ್ತಿ, ನಿಖಲಿ ನಾಯಕ್ ಗೆ ಸಿಮ್ ಕಾರ್ಡ್ ಕೊಟ್ಟವರ ವಿಚಾರಣೆ ನಡೆಸಲಾಗಿದೆ.