Homeಕರ್ನಾಟಕಕೆಇಎ ಪರೀಕ್ಷಾ ಅಕ್ರಮ | ಪ್ರಕರಣದ ಕಿಂಗ್ ಪಿನ್​ ಆರ್ ​ಡಿ ಪಾಟೀಲ್ ಸಿಐಡಿ ಕಸ್ಟಡಿಗೆ

ಕೆಇಎ ಪರೀಕ್ಷಾ ಅಕ್ರಮ | ಪ್ರಕರಣದ ಕಿಂಗ್ ಪಿನ್​ ಆರ್ ​ಡಿ ಪಾಟೀಲ್ ಸಿಐಡಿ ಕಸ್ಟಡಿಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಬಂಧನವಾಗಿರುವ ಪ್ರಕರಣದ ಕಿಂಗ್ ಪಿನ್​ ಆರ್ ​ಡಿ ಪಾಟೀಲ್​ನನ್ನು ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿ ಕಲಬುರಗಿ ಎರಡನೇ ಜೆಎಂಎಫ್​ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಆರ್‌ ಡಿ ಪಾಟೀಲ್‌ನ ನ್ಯಾಯಾಂಗ ಬಂಧನ ಅವಧಿ ಬುಧವಾರ ಮುಗಿದಿದ್ದು, ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಕಲಬುರಗಿ ಎರಡನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆರೋಪಿ ಆರ್​ಡಿ ಪಾಟೀಲ್​ನನ್ನು ಎಂಟು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿದೆ.

ಕೆಇಎ ನಡೆಸಿದ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣ ಪೊಲೀಸರಿಂದ ಹಸ್ತಾಂತರವಾಗುತ್ತಿದ್ದಂತೆಯೇ ಸಿಐಡಿ ಬೇಟೆ ಶುರು ಮಾಡಿದೆ. ಸಿಐಡಿ ಡಿವೈಎಸ್ಪಿ ತನ್ವೀರ್ ಹಾಗೂ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಮತ್ತೋರ್ವ ಅಭ್ಯರ್ಥಿ ಸೇರಿ ಮೂವರನ್ನು ಸಿಐಡಿ ವಶಕ್ಕೆ ಪಡೆದಿದೆ.

ಪ್ರಮುಖ ಆರೋಪಿ ಆರ್‌ ಡಿ ಪಾಟೀಲ್​ ಸೂಚನೆಯಂತೆ ಅಭ್ಯರ್ಥಿಗಳಿಗೆ ಬ್ಲೂಟೂತ್ ಸಪ್ಲೈ ಮಾಡಿರುವ ಆರೋಪದಡಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ದಾಖಾಲಾಗಿರುವ ಪರೀಕ್ಷೆ ಅಕ್ರಮದ ಕೇಸ್​ಗಳನ್ನು ಪೊಲೀಸ್ ತನಿಕಾಧಿಕಾರಿಗಳು ಈಗಾಗಲೇ ಪ್ರಕರಣ ಫೈಲ್‌ ಗಳನ್ನು ಸಿಐಡಿ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ‌.

ಕಲಬುರಗಿ ಜಿಲ್ಲೆಯಲ್ಲಿ ಮೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ದಾಖಲಾದ ಐದು ಪ್ರಕರಣ ಸೇರಿ ಒಟ್ಟು ಎಂಟು ಪ್ರಕರಣಗಳ ದಾಖಲೆಗಳು ಸಿಐಡಿ ಕೈಗೆ ತಲುಪಿದ್ದು, ಸಿಐಡಿ ತನಿಕಾಧಿಕಾರಿಗಳು ಕೇಸ್ ಸ್ಟಡಿ ಶುರು ಮಾಡಿದ್ದಾರೆ. ಖುದ್ದು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ತನಿಕಾಧಿಕಾರಿ ಡಿವೈಎಸ್ ಪಿ ತನ್ವೀರ್ ಒಳಗೊಂಡ ಸಿಐಡಿ ತನಿಖಾ ತಂಡ ಪರೀಕ್ಷೆ ಅಕ್ರಮದ ಜಾಡು ಹಿಡಿದು ಭೇದಿಸಲು ಮುಂದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments