HomeSportಆರ್‌ಸಿಬಿ ದಂತಕಥೆ ವಿರಾಟ್ ಕೊಹ್ಲಿ ಕೈಗೆ ಐಪಿಎಲ್‌ ಟ್ರೋಫಿ, 18 ವರ್ಷದ ಕನಸು ನನಸು

ಆರ್‌ಸಿಬಿ ದಂತಕಥೆ ವಿರಾಟ್ ಕೊಹ್ಲಿ ಕೈಗೆ ಐಪಿಎಲ್‌ ಟ್ರೋಫಿ, 18 ವರ್ಷದ ಕನಸು ನನಸು

ಕ್ರೀಡಾ ಜಗತ್ತಿಗೆ ನಿಷ್ಠೆ, ತಾಳ್ಮೆ ಹಾಗೂ ಬದ್ಧತೆ ಏನು ಎಂಬುದನ್ನು ತೋರಿಸಿಕೊಟ್ಟು, ಕನ್ನಡಿಗರ ಮನ ಗೆದ್ದಿರುವ ಆರ್‌ಸಿಬಿ ದಂತಕಥೆ ವಿರಾಟ್‌ ಕೊಹ್ಲಿ, ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ಈ ಸುದೀರ್ಘ ಪಯಣದಲ್ಲಿ ಕೊಹ್ಲಿ ಎದುರಿಸಿದ ಟೀಕೆಗಳು, ಅಭಿಮಾನಿಗಳಿಂದ ಸ್ವೀಕರಿಸಿದ ಪ್ರೀತಿ ಯಾವುದಕ್ಕೂ ಲೆಕ್ಕವಿಲ್ಲ. ಹಾಗೆಯೇ ವಿರಾಟ್‌ ಕೊಹ್ಲಿ ಕೂಡ ಆರ್‌ಸಿಬಿ ಮೇಲಿಟ್ಟಿರುವ ಪ್ರೀತಿಗೆ ಸರಿಸಾಟಿಯೇ ಇಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಂಗಳವಾರ ರಾತ್ರಿ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಕಿರೀಟ ಧರಿಸುತ್ತಿದ್ದಂತೆಯೇ ದೇಶದೆಲ್ಲೆಡೆ ಅಭಿಮಾನಿಗಳ ಸಂಭ್ರಮ ಉಕ್ಕಿ ಹರಿಯಿತು. ಹದಿನೆಂಟು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾದಿದ್ದ ಲಕ್ಷಾಂತರ ಜನರು ಬೀದಿಗಿಳಿದು ಸಂಭ್ರಮಿಸಿದರು. ಕುಣಿದರು, ಸಿಹಿ ಹಂಚಿದರು. ಬೆಳಗಿನ ಜಾವದವರೆಗೂ ‘ಆರ್‌ಸಿಬಿ..ಆರ್‌ಸಿಬಿ..’ ಎಂಬ ಕೂಗುಗಳು ಪ್ರತಿಧ್ವನಿಸಿದವು.

18ನೇ ನಂಬರ್ ಜೆರ್ಸಿ ಧರಿಸಿದ್ದ ವಿರಾಟ್ ಕೊಹ್ಲಿ ಕನಸು ಕೊನೆಗೂ ನನಸಾಗಿದೆ. ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ.

ಕೊನೆಯ ಓವರ್‌ನಲ್ಲಿ ಆರ್​ಸಿಬಿ ಗೆಲುವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಗೊತ್ತಾದಾಗ, ವಿರಾಟ್ ಕೊಹ್ಲಿ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಅವರು ಮಗುವಿನಂತೆ ಅಳುತ್ತಿರುವುದು ಕಂಡುಬಂತು. ಅದರಲ್ಲೂ ಆರ್​ಸಿಬಿ ಗೆದ್ದಾಗ ಮೈದಾನದಲ್ಲಿ ಮಂಡಿಯೂರಿ ಕಣ್ಣೀರಿಟ್ಟರು.

ಪಂದ್ಯ ನೋಡಲು ಬಂದಿದ್ದ ಆರ್​ಸಿಬಿ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಮೈದಾನದಕ್ಕೆ ಓಡೋಡಿ ಬಂದು. ಇವರನ್ನು ತಬ್ಬಿಕೊಂಡು ವಿರಾಟ್ ಖುಷಿ ಹಂಚಿಕೊಂಡರು. ಬಳಿಕ ಪತ್ನಿ ಅನುಷ್ಕಾ ಶರ್ಮಾ ಜೊತೆಗೂ ವಿರಾಟ್ ಮೈದಾನದಲ್ಲಿ ಸಂಭ್ರಮದ ಕ್ಷಣವನ್ನು ಕಳೆದರು.

ವಿರಾಟ್_ ಕೊಹ್ಲಿ

ಮೂರು ಸಲ ಫೈನಲ್‌, ಆದ್ರೆ ಕಪ್‌ ಒಲಿದಿರಲಿಲ್ಲ

ಐಪಿಎಲ್ ಶುರುವಾದಾಗಿನಿಂದಲೂ ಮೂರು ಸಲ ಫೈನಲ್ ತಲುಪಿದ್ದ ಆರ್‌ಸಿಬಿಗೆ ಪ್ರಶಸ್ತಿ ಒಲಿದಿರಲಿಲ್ಲ. ಆದರೆ ಈ ಸಲ ಕೈತಪ್ಪಲಿಲ್ಲ. ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿದ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಿತು.

ಈ ಹಿಂದೆ ಆರ್‌ಸಿಬಿಯಲ್ಲಿ ಆಡಿದ್ದ ದಿಗ್ಗಜರಾದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅವರೂ ಕ್ರೀಡಾಂಗಣದಲ್ಲಿ ಹಾಜರಿದ್ದರು. ತಮ್ಮ ಪ್ರಿಯ ಗೆಳೆಯ ವಿರಾಟ್ ಕೊಹ್ಲಿ ಅವರನ್ನು ಅಪ್ಪಿ ಬಿಗಿದು ಅಭಿನಂದಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಿಗ್ಗಜ ಆಟಗಾರರು ನಾಯಕತ್ವ ವಹಿಸಿದ ಪರಂಪರೆಯೇ ಇದೆ. 2008 ರಿಂದ ಇಲ್ಲಿಯವರೆಗೂ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕೆವಿನ್ ಪೀಟರ್ಸನ್, ಡೇನಿಯಲ್ ವೆಟೋರಿ, ಶೇನ್ ವಾಟ್ಸನ್, ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿ ಅವರಂತಹ ಖ್ಯಾತನಾಮರು ತಂಡವನ್ನು ಮುನ್ನಡೆಸಿದ್ದರು. ಅವರೆಲ್ಲರ ನಾಯಕತ್ವ ಮತ್ತು ಆಟದ ಬಲದಿಂದ ಆರ್‌ಸಿಬಿಯ ಬ್ರಾಂಡ್ ಮುಗಿಲುಮುಟ್ಟಿತು. ಆದರೆ ಪ್ರಶಸ್ತಿ ಕನಸು ಮಾತ್ರ ಕೈಗೂಡಿರಲಿಲ್ಲ.

ಆದರೆ ಇದೇ ವರ್ಷ ನಾಯಕರಾಗಿ ನೇಮಕವಾದ ರಜತ್ ಪಾಟೀದಾರ್ ಅವರಿಗೆ ಅದೃಷ್ಟ ಒಲಿಯಿತು. ವಿರಾಟ್ ಕೊಹ್ಲಿಯಂತಹ ದಿಗ್ಗಜ ಮತ್ತು ಯುವ ಆಟಗಾರರ ದಂಡಿನೊಂದಿಗೆ ಪ್ರಶಸ್ತಿ ಕನಸು ನನಸು ಮಾಡಿದರು. ಅಹಮದಾಬಾದ್​ನಲ್ಲಿ ಮಂಗಳವಾರ (ಜೂ.3) ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದ ರಜತ್ ಪಾಟೀದಾರ್ ನಾಯಕತ್ವದ ಆರ್​ಸಿಬಿ ಪಡೆ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿಯಿತು.

ಗೆಲುವಿನ ಕಡೆ ಆರ್​ಸಿಬಿ ಮುಖಮಾಡಿತು. ಇನ್ನು ಆರ್​ಸಿಬಿ ಗೆಲುವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಗೊತ್ತಾದಾಗ, ಕ್ರಿಕೆಟ್‌ ಲೋಕದ ಆರ್‌ಸಿಬಿ ದಂತಕತೆ ಕಿಂಗ್ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಕಣ್ಣೀರು ಇಟ್ಟು, ಭಾವುಕರಾದ ಕೊಹ್ಲಿ, ತಮ್ಮ ಮುಖವನ್ನು ಮುಚ್ಚಿಕೊಂಡು ಮೈದಾನದಲ್ಲೇ ನಿಂತರು.

ಆರ್​ಸಿಬಿ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಮಂಡಿಯೂರಿ ಕೊಹ್ಲಿ ಕಣ್ಣೀರಿಟ್ಟರು. ಪಂದ್ಯ ನೋಡಲು ಬಂದಿದ್ದ ಆರ್​ಸಿಬಿ ಮಾಜಿ ಸ್ಟಾರ್‌ ಆಟಗಾರ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಮೈದಾನದಕ್ಕೆ ಓಡೋಡಿ ಬಂದು, ಇವರನ್ನು ತಬ್ಬಿಕೊಂಡು ಖುಷಿ ಹಂಚಿಕೊಂಡರು. ಬಳಿಕ ಪತ್ನಿ ಅನುಷ್ಕಾ ಶರ್ಮಾ ಜೊತೆಗೂ ವಿರಾಟ್ ಮೈದಾನದಲ್ಲಿ ಸಂಭ್ರಮದ ಕ್ಷಣವನ್ನು ಕಳೆದರು.

ಕೊಹ್ಲಿ 18ರ ನಂಟು

18.. ಇದು ಕಿಂಗ್ ಕೊಹ್ಲಿಯ ಜೆರ್ಸಿ ನಂಬರ್. ಈ ನಂಬರ್​ ಜೊತೆಗಿನ ಫ್ಯಾನ್ಸ್​ ಸಂಬಂಧ ಬಿಡಸಲಾಸಾಧ್ಯ. ಈ ಕಾರಣಕ್ಕೆ ಫ್ಯಾನ್ಸ್​, ಸೀಸನ್-18ರ ಐಪಿಎಲ್​​ ಆರ್​ಸಿಬಿ ಇಯರ್ ಅಂತಾನೇ ವಿಶ್ಲೇಷಣೆ ಮಾಡಿದ್ದರು. ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಸೀಸನ್​-18ರ ಐಪಿಎಲ್, ಮೋಸ್ಟ್​ ಎಮೋಷನಲ್ ಸೀಸನ್​​ ಆಗಿದೆ. 18 ವರ್ಷಗಳಿಂದ ಒಂದೇ ತಂಡದ ಪರ ಆಡಿದ್ದು ಅವರ ದಾಖಲೆ ಮತ್ತು ಹೆಗ್ಗಳಿಕೆ. ಇವರೆಗೂ IPL ಕಪ್ ಗೆದ್ದಿರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಸಹಜವಾಗಿಯೇ ಭಾವುಕರಾದರು.

ಆರ್‌ಸಿಬಿ ತಂಡಕ್ಕೆ ಕೊಡುಗೆ ನೀಡಿದ ಮಾಜಿ ಆಟಗಾರರನ್ನು ಸ್ಮರಿಸಿದ ವಿರಾಟ್‌ ಕೊಹ್ಲಿ, “ಎಬಿಡಿ, ಕ್ರಿಸ್‌ ಗೇಲ್‌ ಅವರಂತಹ ಆಟಗಾರರು ಈ ತಂಡವನ್ನು ಕಟ್ಟಿ ಬೆಳೆಸಿದ್ದಾರೆ. ಈ ಗೆಲುವು ಮಾಜಿ ಆಟಗಾರರದ್ದೂ ಹೌದು. ನಾನು ಅವರೊಂದಿಗೂ ಈ ಅವಿಸ್ಮರಣೀಯ ಗೆಲುವನ್ನು ಸಂಭ್ರಮಿಸಲು ಬಯಸುತ್ತೇನೆ” ಎಂದು ಗೆಲುವಿನ ಬಳಿಕ ನುಡಿದರು.

ಕೊಹ್ಲಿಗೆ 771 ಬೌಂಡರಿ ಗರಿ

ಐಪಿಎಲ್‌ ಕ್ರಿಕೆಟ್ ಟೂರ್ನಿಯಲ್ಲಿ ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ, ಫೈನಲ್‌ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ವಿರಾಟ್ ಭಾಜನರಾಗಿದ್ದಾರೆ. 259 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಈವರೆಗೆ 771 ಬೌಂಡರಿಗಳನ್ನು ಗಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments