Homeಕರ್ನಾಟಕಪ್ರೊ.ತರಿಕೇರಿ, ಸಾಹಿತಿ ಚೆನ್ನಿ, ನಟ ಪ್ರಕಾಶ್‌ ರಾಜ್‌ ಸೇರಿ 70 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ

ಪ್ರೊ.ತರಿಕೇರಿ, ಸಾಹಿತಿ ಚೆನ್ನಿ, ನಟ ಪ್ರಕಾಶ್‌ ರಾಜ್‌ ಸೇರಿ 70 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ

2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಕರ್ನಾಟಕ ಸರ್ಕಾರದಿಂದ ಪ್ರಕಟವಾಗಿದೆ. ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಸಾಧಕರನ್ನು ಆಯ್ಕೆ ಮಾಡಲಾಗಿದೆ.‌ ನಟ ಪ್ರಕಾಶ್‌ ರಾಜ್‌, ಸಾಹಿತಿ ಚೆನ್ನಿ, ಪ್ರೊ. ತರಿಕೇರಿ ಸೇರಿದಂತೆ ವಿವಿಧ ವಲಯಗಳ ಅರ್ಹರಿಗೆ ನಾಡಿನ ಅತ್ಯುನ್ನತ ಗೌರವ ನೀಡಲಾಗುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಗುರುವಾರ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹೆಸರುಗಳನ್ನು ಘೋಷಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಬೆಂಗಳೂರು ಪೌರ ಕಾರ್ಮಿಕರಾದ ಫಕೀರಮ್ಮ ಮತ್ತು ಪೆನ್ನ ಓಬಳಯ್ಯಾ ಅವರಿಗೂ ಪ್ರಶಸ್ತಿ ಲಭಿಸಿದೆ.

2,116 ಸಾಧಕರು ಸ್ವಯಂ ಪ್ರೇರಣೆಯಿಂದ ಅರ್ಜಿ ಸಲ್ಲಿಸಿದ್ದರು. ಈ ಬಾರಿ ಅರ್ಜಿ ಕರೆದಿರಲಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ 22 ಕ್ಯಾರೆಟ್‌ನ 25 ಗ್ರಾಂ ಚಿನ್ನ ಮತ್ತು ಐದು ಲಕ್ಷ ನಗದು ಸಿಗಲಿದೆ. ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ ನಡೆಯಲಿದೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಸಾಹಿತ್ಯ ಕ್ಷೇತ್ರ
ಪ್ರೊ. ರಾಜೇಂದ್ರ ಚೆನ್ನಿ, ಶಿವಮೊಗ್ಗ
ರಹಮತ್ ತರೀಕೆರೆ ಚಿಕ್ಕಮಗಳೂರು
ತುಂಬಾಡಿ ರಾಮಯ್ಯ, ತುಮಕೂರು
ಪ್ರೊ. ಅರ್ ಸುನಂದಮ್ಮ, ಚಿಕ್ಕಬಳ್ಳಾಪುರ
ಡಾ.ಎಚ್.ಎಲ್ ಪುಷ್ಪ, ತುಮಕೂರು
ಹ.ಮ. ಪೂಜಾರ, ವಿಜಯಪುರ

ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ, ಕೊಪ್ಪಳ
ಶ್ರೀ ಬಿ. ಟಾಕಪ್ಪ ಕಣ್ಣೂರು, ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ, ಬೆಳಗಾವಿ
ಹನುಮಂತಪ್ಪ ಮಾರಪ್ಪ ಚೀಳಂಗಿ, ಚಿತ್ರದುರ್ಗ
ಎಂ. ತೋಪಣ್ಣ, ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ, ವಿಜಯಪುರ
ಶ್ರೀಮತಿ ಸಿಂಧು ಗುಜರನ್, ದಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ, ಮೈಸೂರು

ಸಂಗೀತ ಕ್ಷೇತ್ರ
ದೇವೆಂದ್ರಕುಮಾರ ಪತ್ತಾರ್, ಕೊಪ್ಪಳ
ಮಡಿವಾಳಯ್ಯ ಸಾಲಿ, ಬೀದರ್

ನೃತ್ಯ ಕ್ಷೇತ್ರ
ಪ್ರೊ. ಕೆ. ರಾಮಮೂರ್ತಿ ರಾವ್
ಮೈಸೂರು

ಚಲನಚಿತ್ರ /ಕಿರುತೆರೆ
ಪ್ರಕಾಶ್ ರಾಜ್, ದಕ್ಷಿಣ ಕನ್ನಡ
ಶ್ರೀಮತಿ ವಿಜಯಲಕ್ಷ್ಮೀ ಸಿಂಗ್, ಕೊಡಗು

ಆಡಳಿತ ವಿಭಾಗ
ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ), ಬೆಂಗಳೂರು ದಕ್ಷಿಣ (ರಾಮನಗರ)

ವೈದ್ಯಕೀಯ
ಡಾ. ಆಲಮ್ಮ ಮಾರಣ್ಣ, ತುಮಕೂರು
ಡಾ.ಜಯರಂಗನಾಥ್, ಬೆಂಗಳೂರು ಗ್ರಾಮಾಂತರ

ಸಮಾಜ ಸೇವೆ
ಸೂಲಗಿತ್ತಿ ಈರಮ್ಮ, ವಿಜಯನಗರ
ಫಕ್ಕೀರಿ, ಬೆಂಗಳೂರು ಗ್ರಾಮಾಂತರ
ಕೋರಿನ್ ಆಂಟೊನಿಯಟ್ ರಸ್ಕೀನಾ, ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ, ಉಡುಪಿ
ಶ್ರೀ ಕೋಣಂದೂರು ಲಿಂಗಪ್ಪ, ಶಿವಮೊಗ್ಗ

ಉಮೇಶ ಪಂಬದ,ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್, ಧಾರವಾಡ
ಕೆ.ದಿನೇಶ್, ಬೆಂಗಳೂರು
ಶಾಂತರಾಜು, ತುಮಕೂರು
ಜಾಫರ್ ಮೊಹಿಯುದ್ದೀನ್, ರಾಯಚೂರು
ಪೆನ್ನ ಓಬಳಯ್ಯ, ಬೆಂಗಳೂರು ಗ್ರಾಮಾಂತರ
ಶಾಂತಿ ಬಾಯಿ, ಬಳ್ಳಾರಿ
ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ

ಹೊರನಾಡು/ ಹೊರದೇಶ
ಜಕರಿಯ ಬಜಪೆ (ಸೌದಿ)
ಪಿ ವಿ ಶೆಟ್ಟಿ (ಮುಂಬೈ)

ಪರಿಸರ
ರಾಮೇಗೌಡ, ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ, ಯಾದಗಿರಿ

ಕೃಷಿ
ಡಾ.ಎಸ್.ವಿ.ಹಿತ್ತಲಮನಿ, ಹಾವೇರಿ
ಎಂ ಸಿ ರಂಗಸ್ವಾಮಿ, ಹಾಸನ

ಮಾಧ್ಯಮ
ಕೆ.ಸುಬ್ರಮಣ್ಯ, ಬೆಂಗಳೂರು
ಅಂಶಿ ಪ್ರಸನ್ನಕುಮಾರ್, ಮೈಸೂರು
ಬಿ.ಎಂ ಹನೀಫ್, ದಕ್ಷಿಣ ಕನ್ನಡ
ಎಂ ಸಿದ್ಧರಾಜು, ಮಂಡ್ಯ
ರಾಮಯ್ಯ, ಚಿಕ್ಕಬಳ್ಳಾಪುರ
ಏರ್ ಮಾರ್ಷಲ್ ಫೀಲಿಪ್ ರಾಜಕುಮಾರ್, ದಾವಣಗೆರೆ
ಡಾ. ಆರ್. ವಿ ನಾಡಗೌಡ, ಗದಗ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments