ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024ನೇ ಸಾಲಿನ ರಾಜ್ಯೋತ್ಸವ ಮತ್ತು ಸುವರ್ಣ ಮಹೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಕಲೆ, ಸಾಹಿತ್ಯ, ಜಾನಪದ, ಕೃಷಿ-ಪರಿಸರ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಚಲನಚಿತ್ರ ಕ್ಷೇತ್ರದಲ್ಲಿ ಹೇಮಾ ಚೌಧರಿ, ಎಂ.ಎಸ್. ನರಸಿಂಹ ಮೂರ್ತಿ, ಸಂಗೀತ ಕ್ಷೇತ್ರದಲ್ಲಿ ಪಿ.ರಾಜಗೋಪಾಲ, ಎ.ಎನ್. ಸದಾಶಿವಪ್ಪ, ನೃತ್ಯ ಕ್ಷೇತ್ರದಲ್ಲಿ ಲಲಿತಾ ರಾವ್, ಆಡಳಿತ ವಿಭಾಗಲ್ಲಿ ಎಸ್.ವಿ. ರಂಗನಾಥ್ (ಐಎಎಸ್), ನ್ಯಾಯಾಂಗ ಕ್ಷೇತ್ರದಲ್ಲಿ ಬಾಲನ್, ಸಾಹಿತ್ಯ ಕ್ಷೇತ್ರದಲ್ಲಿ ಬಿ.ಟಿ. ಲಲಿತಾ ನಾಯಕ್, ಅಲ್ಲಮ ಪ್ರಭು ಬೆಟ್ಟದೂರ, ವೀರಪ್ಪ ಮೊಯ್ಲಿ, ಹನುಮಂತರಾವ್ ದೊಡ್ಡಮನಿ, ಬೈರಮಂಗಲ ರಾಮೇಗೌಡ, ಡಾ. ಪ್ರಶಾಂತ್ ಮಾಡ್ತಾ ಅವರಿಗೆ ಪ್ರಶಸ್ತಿ ಲಭಿಸಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಬಿಡಿನಹಾಳ. ಡಾ. ಮೈಸೂರು ಸತ್ಯನಾರಾಯಣ. ಡಾ. ಲಕ್ಷ್ಮಣ್ ಬಿದರಿ
ಸಂಕೀರ್ಣ ವಿಭಾಗದಲ್ಲಿ ಹುಲಿಕಲ್ ನಟರಾಜ್, ಡಾ. ಎಚ್. ಆರ್.ಸ್ವಾಮಿ, ಅ ನ ಪ್ರಹ್ಲಾದ ರಾವ್, ವಿರೂಪಾಕ್ಷಪ್ಪ ಹಾವನೂರ, ಕೆ. ಅಜಿತ್ ಕುಮಾರ್ ರೈ, ಇರ್ಷಾನ್ ರಜಾಕ್ ಹಾಗೂ ಮಾಧ್ಯಮ ವಿಭಾಗದಲ್ಲಿ ಎನ್. ಎಸ್ ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ.ಕಾರಟಗಿ, ರಾಮಕೃಷ್ಣ ಬಡಕೇಶಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಸುವರ್ಣ ಮಹೋತ್ಸವ ಪ್ರಶಸ್ತಿ ಪಟ್ಟಿ