Homeಅಭಿಮನ್ಯುಲೋಕೋಪಯೋಗಿಯಲ್ಲಿ ಪ್ರಗತಿಯ ಪರ್ವಕಾಲ

ಲೋಕೋಪಯೋಗಿಯಲ್ಲಿ ಪ್ರಗತಿಯ ಪರ್ವಕಾಲ

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇ 2008ರ ಅಂತ್ಯದ ವೇಳೆಗೆ ಅಪೆಂಡಿಕ್ಸ್-ಇ ಕಾಮಗಾರಿಗಳಡಿ 8,684 ಕೋಟಿ ರೂಗಳ ಮೊತ್ತದ ಕಾರ್ಯಭಾರ ಹಾಗೂ 1,381 ಕೋಟಿ ರೂಗಳ ಮೊತ್ತದ ಬಿಲ್ಲುಗಳನ್ನು ಪಾವತಿಗೆ ಬಾಕಿ ಉಳಿಸಿತ್ತು. ಆದರೆ ನಿಕಟ ಪೂರ್ವ ಸರ್ಕಾರದ ಅವಧಿಯಲ್ಲಿ ೧೩,೪೧೮ ಕೋಟಿ ರೂಗಳ ಮೊತ್ತದ ಕಾರ್ಯಭಾರ ಹಾಗೂ ೪,೪೩೭ ಕೋಟಿ ರೂಗಳ ಮೊತ್ತದ ಬಿಲ್ಲುಗಳು ಪಾವತಿಗೆ ಬಾಕಿ ಉಳಿಸಲಾಗಿದೆ. ಅನುದಾನದ ಲಭ್ಯತೆಯನ್ನು ಪರಿಗಣಿಸದೆ ಕಳೆದ ಆರ್ಥಿಕ ವರ್ಷದಲ್ಲಿ ೬,೩೫೩ ಕೋಟಿ ರೂಗಳ ಮೊತ್ತದ ಕಾಮಗಾರಿಗಳನ್ನು ಅನುಮೋದಿಸಿರುವುದು ಇಷ್ಟು ಮೊತ್ತದ ಕಾರ್ಯಭಾರ ಹಾಗೂ ಬಿಲ್ಲುಗಳ ಬಾಕಿಗೆ ಕಾರಣವಾಗಿದೆ. ಆ ಮೂಲಕ ಗುತ್ತಿಗೆದಾರರ ಬಿಲ್ಲುಗಳ ಬಾಕಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂಬುದನ್ನು ಈ ಆಯವ್ಯಯದ ಅಂಕಅಂಶಗಳು ಸ್ಪಷ್ಟಪಡಿಸಿವೆ.


ಇನ್ನು ಹೊಸದಾಗಿ ಕಲ್ಯಾಣ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಪೂರಕವಾಗುವ ನಿಟ್ಟಿನಲ್ಲಿ ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್‌ನಿಂದ ಸಿಂಧನೂರು ಬಳಿಯ ಬಳ್ಳಾರಿ-ಲಿಂಗಸುಗೂರು ರಸ್ತೆ ವೃತ್ತದವರಿಗೆ ಒಟ್ಟು ೭೮ ಕಿಮೀ ಉದ್ದದ ರಸ್ತೆಯನ್ನು ೧,೬೯೬ ಕೋಟಿ ರೂಗಳ ಮೊತ್ತದಲ್ಲಿ ಹೈಬ್ರಿಡ್ ಆನ್ಯೂಟಿ ಮಾದರಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಅಭಿವೃದ್ಧಿಪಡಿಸುವುದಾಗಿ ಸರ್ಕಾರ ಘೋಷಿಸಿದೆ.


ದೇವನಹಳ್ಳಿ- ವಿಜಯಪುರ- ಹೆಚ್. ಕ್ರಾಸ್- ವೇಮಗಲ್- ಮಾಲೂರು -ತಮಿಳುನಾಡು ಗಡಿಯವರಿಗೆ ಕೈಗಾರಿಕಾ ಸಂಪರ್ಕವನ್ನು ಕಲ್ಪಿಸಲು ನಾಲ್ಕು ಮತ್ತು ಆರು ಪಥದ ೧೨೩ ಕಿಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಯನ್ನು ೧,೮೨೬ ಕೋಟಿ ರೂಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಕೈಗೊಳ್ಳಲಾಗುವುದು ಎಂದು ಸರ್ಕಾರ ಘೋಷಿಸಿದೆ.


೨೦೨೩-೨೪ನೇ ಸಾಲಿನಲ್ಲಿ ಸಾರ್ವಜನಿಕರ ಸಂಚಾರ ಮತ್ತು ವಾಣಿಜ್ಯ ಚಟುವಟಿಕೆಗಳ ಉತ್ತೇಜನಕ್ಕೆ ಈಗಾಗಲೇ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳಲ್ಲಿ ಒಟ್ಟು ೨,೦೦೦ ಕಿಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ಮತ್ತು ರಾಜ್ಯದಲ್ಲಿನ ಅಂತರ್ ಜಿಲ್ಲಾ ಸಂಪರ್ಕಕ್ಕಾಗಿ ಒಟ್ಟಾರೆಯಾಗಿ ೨,೪೦೦ ಕಿಮೀ ಉದ್ದದ ಜಿಲ್ಲಾ ರಸ್ತೆಗಳನ್ನು ೪,೦೮೩ ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರ ತನ್ನ ಅಯವ್ಯಯದಲ್ಲಿ ತಿಳಿಸಿದ್ದು ಇದೊಂದು ಲೋಕೋಪಯೋಗಿ ಇಲಾಖೆಗೆ ಪ್ರಗತಿಯ ಪರ್ವ ಕಾಲವಾಗಲಿದೆ.


ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಖಾಲಿ ನಿವೇಶನಗಳು ಮತ್ತು ಕಟ್ಟಡಗಳನ್ನು ಗುರುತಿಸಿ ಅಸೆಟ್ ಮಾನಿಟೈಜೇಶನ್ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ಸೃಜಿಸಲು ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಘೋಷಿಸಿದೆ.


ಒಟ್ಟಾರೆ, ಲೋಕೋಪಯೋಗಿ ಇಲಾಖೆಗೆ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಪೂರಕವಾಗಿದ್ದು ಎಲ್ಲಾ ಘೋಷಣೆಗಳ ಜಾರಿಯಾದರೆ ರಾಜ್ಯದ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments