Homeಕರ್ನಾಟಕರಾಜಕೀಯ ಅಸ್ತಿತ್ವಕ್ಕಾಗಿ ಶ್ರೀಕಾಂತ್ ಕೃಷ್ಣಪೂಜಾರಿ ಬಂಧನ ಬಳಸಿಕೊಳ್ಳುತ್ತಿರುವ ಪ್ರಲ್ಹಾದ್‌ ಜೋಶಿ: ರಮೇಶ್‌ ಬಾಬು ಆರೋಪ

ರಾಜಕೀಯ ಅಸ್ತಿತ್ವಕ್ಕಾಗಿ ಶ್ರೀಕಾಂತ್ ಕೃಷ್ಣಪೂಜಾರಿ ಬಂಧನ ಬಳಸಿಕೊಳ್ಳುತ್ತಿರುವ ಪ್ರಲ್ಹಾದ್‌ ಜೋಶಿ: ರಮೇಶ್‌ ಬಾಬು ಆರೋಪ

ಶ್ರೀಕಾಂತ್ ಪೂಜಾರಿ ಬಂಧನವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿರವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳುವ ವ್ಯವಸ್ಥಿತ ಪಿತೂರಿಯನ್ನು ನಡೆಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರೋಪಿಯ ನ್ಯಾಯಾಂಗ ಬಂಧನವನ್ನು ಟೀಕೆ ಮಾಡುತ್ತಿದ್ದು, ಇದನ್ನು ತಮ್ಮ ಭಾರತೀಯ ಜನತಾ ಪಕ್ಷದ ನಾಯಕರು ಆರೋಪಿ ಜಾಮೀನು ಪಡೆದುಕೊಳ್ಳದಂತೆ ತಾಕೀತು ಮಾಡುತ್ತಿದ್ದಾರೆ” ಎಂದರು.

ಆರೋಪಿ ಶ್ರೀಕಾಂತ್ ಪೂಜಾರಿ ಎಂಬ ವ್ಯಕ್ತಿ ಯಾವ ಕರಸೇವಕನು ಅಲ್ಲ. ಪಕ್ಕಾ ಅಪರಾಧಿ ಚಟುವಟಿಕೆ ಹಿನ್ನೆಲೆಯವನು. ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು 29-12-2023 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಈ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ” ಎಂದು ಹೇಳಿದರು.

ಹುಬ್ಬಳ್ಳಿ ಶೆಹರ್ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ-252/1992 ಪ್ರಕರಣ ಐಪಿಸಿ ಸೆಕ್ಸನ್ 143, 147, 427, 436 ರೆಡ್‍ವಿತ್ 149ರ ಅಡಿಯಲ್ಲಿ 13 ಜನ ಆರೋಪಿಗಳ ವಿರುದ್ಧ ದಾಖಲಾಗಿರುತ್ತದೆ (ದೊಂಬಿ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಕ್ಕೆ ಸಂಬಂಧಪಟ್ಟ ಪ್ರಕರಣ). ಇದರಲ್ಲಿ 5 ಜನ ಆರೋಪಿಗಳು ಖುಲಾಸೆಗೊಂಡಿದ್ದು, 5 ಜನ ಆರೋಪಿಗಳು ಮೃತ ಪಟ್ಟಿದ್ದು, 3 ಜನ ತಲೆಮರೆಸಿಕೊಂಡಿದ್ದರು. ಲಾಂಗ್ ಪೆಂಡಿಂಗ್ ರಿಪೊರ್ಟೆಡ್ ಕೇಸಸ್ ಅಡಿಯಲ್ಲಿ ತಲೆಮರೆಸಿಕೊಂಡ 3 ಜನ ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದ್ದು, ಅಶೋಕ್ ಮೋತಿಲಾಲ್ ಧರ್ಮದಾಸ್ ಎಂಬುವ ಆರೋಪಿ 18-12-2023 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿರುತ್ತಾರೆ. ಇನ್ನೊಬ್ಬ ಆರೋಪಿ ರಾಮಚಂದ್ರ ಕಲಬುರ್ಗಿ ಗಂಭೀರ ಆರೋಗ್ಯ ಸಮಸ್ಯೆಯ ಕಾರಣ ನ್ಯಾಯಾಲಯದ ಜಾಮೀನು ಪಡೆದಿಲ್ಲ” ಎಂದು ತಿಳಿಸಿದರು.

“ಲಾಂಗ್ ಪೆಂಡಿಂಗ್ ರಿಪೊರ್ಟೆಡ್ ಪ್ರಕರಣಗಳನ್ನು ಸಾಮಾನ್ಯವಾಗಿ ನ್ಯಾಯಾಲಯವು ಪರಿಶೀಲಿಸುತ್ತದೆ. ನ್ಯಾಯಾಲಯದ ನಿರ್ದೇಶನಕ್ಕೆ ಅನುಗುಣವಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಕಾನೂನು ಕ್ರಮವನ್ನು ಕೈಗೊಳ್ಳುತ್ತಾರೆ. ಆರೋಪಿಗಳು ತಲೆಮರೆಸಿಕೊಂಡಾಗ ಪ್ರಕರಣಗಳು ವಿಚಾರಣೆಗೆ ಬಾಕಿ ಇರುತ್ತವೆ. ಒಂದು ವೇಳೆ ಆರೋಪಿಗಳು ಮೃತಪಟ್ಟಿದ್ದರೆ ವರದಿಗೆ ಅನುಗುಣವಾಗಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗುತ್ತದೆ” ಎಂದು ಪ್ರಕರಣದ ಹಿನ್ನೆಲೆ ಹೇಳಿದರು.

“ಸದರಿ ಪ್ರಕರಣ 24-12-1992 ರಂದು ದಾಖಲಾಗಿದ್ದು, 7-4-1993ರಲ್ಲಿ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. 12-04-2004 ರಲ್ಲಿ ಈ ಪ್ರಕರಣ ಎಲ್‍ಪಿಆರ್ ಆಗಿರುತ್ತದೆ. ಈ ಆರೋಪಿಯ ವಿರುದ್ಧ 08-07-2017 ರಲ್ಲಿ ಹಳೆಯ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪ್ರಕರಣ ತೆಗೆದಿದ್ದು, 08-06-2023 ರಲ್ಲಿ ಇದನ್ನು ಮುಕ್ತಾಯಗೊಳಿಸಲಾಗಿದೆ” ಎಂದರು.

“ಪೂಜಾರಿ ವಿರುದ್ಧ ದೊಂಬಿ ಮತ್ತು ಗಾಯದ ಪ್ರಕರಣಗಳು 4, ಅಬಕಾರಿ ಕಾಯಿದೆಯ ಪ್ರಕರಣಗಳು 5, ಮಹಿಳಾ ಕಾಯಿದೆಯ ಪ್ರಕರಣಗಳು 3, ಮತ್ತು ಇತರ ಪ್ರಕರಣಗಳು 4 ಹುಬ್ಬಳ್ಳಿ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುತ್ತದೆ. ಸದರಿ ಆರೋಪಿಯ ಪ್ರಕರಣವನ್ನು ಭಾರತೀಯ ಜನತಾ ಪಕ್ಷ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ” ಎಂದು ಆರೋಪಿಸಿದರು.

“ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 2023ನೇ ಸಾಲಿನಲ್ಲಿ ಒಟ್ಟು 26 ಎಲ್‍ಪಿಆರ್ ಪ್ರಕರಣಗಳಲ್ಲಿ 36 ಜನ ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟು ರಾಜ್ಯ ಪೊಲೀಸ್ ಇಲಾಖೆ ಪ್ರತೀ ವರ್ಷ ಹಳೆಯ ಪ್ರಕರಣಗಳ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣಗಳ ವಿಚಾರಣೆಯನ್ನು ಮುಕ್ತಾಯಗೊಳಿಸುತ್ತದೆ. ತಲೆಮರೆಸಿಕೊಂಡ ಆರೋಪಿಗಳ ಪ್ರಕರಣದಲ್ಲಿ ವಿಚಾರಣೆ ಇಲ್ಲದೆ ಬಾಕಿ ಪ್ರಕರಣಗಳು ಅಂತಿಮಗೊಳ್ಳುವುದಿಲ್ಲ” ಎಂದು ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments