Homeಕರ್ನಾಟಕಪ್ರಜ್ವಲ್‌ ಪೆನ್​ ಡ್ರೈವ್ ಪ್ರಕರಣ |ಬಂಧಿತರು ನನ್ನ ಪಿಎ ಅಲ್ಲ: ಪ್ರೀತಂ ಗೌಡ

ಪ್ರಜ್ವಲ್‌ ಪೆನ್​ ಡ್ರೈವ್ ಪ್ರಕರಣ |ಬಂಧಿತರು ನನ್ನ ಪಿಎ ಅಲ್ಲ: ಪ್ರೀತಂ ಗೌಡ

ಪೆನ್​ ಡ್ರೈವ್ ಪ್ರಕರಣದಲ್ಲಿ ಬಂಧನ ಆಗಿರುವ ಆರೋಪಿಗಳು ನನ್ನ ಪಿಎ ಅಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿದರು.

ಹಾಸನ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನ್ನ ಕಚೇರಿಯಲ್ಲಿ 40-50ಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಾರೆ. ಒಬ್ಬ ಪೆನ್ ​ಡ್ರೈವ್​ನಲ್ಲಿ ಹಾಕಿ ನೋಡಿದರೆ ಅಪರಾಧ ಅಂದರೆ ಹೇಗೆ” ಎಂದು ಪ್ರಶ್ನಿಸಿದರು.

“ಹಾಸನದಲ್ಲಿ 2 ಲಕ್ಷ ಮೊಬೈಲ್ ಇದ್ದರೆ ಎಲ್ಲ ಮೊಬೈಲ್​ನಲ್ಲೂ ಇರುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಯಾಕೆಂದರೆ ಯಾರು ಬೇಕು ಅಂತಾ ತರಿಸಿಕೊಂಡಿರುವುದಿಲ್ಲ. ಎಸ್​ಐಟಿ ಇದೇ ಮಾನದಂಡದಲ್ಲಿ ತನಿಖೆ ಮಾಡುತ್ತದೆ ಅಂತಾದರೆ ಜಿಲ್ಲೆಯಲ್ಲಿ 15 ಲಕ್ಷ ಮೊಬೈಲ್ ಬಳಕೆದಾರರು ತಪ್ಪಿತಸ್ಥರಾಗುತ್ತಾರೆ” ಎಂದರು.

“ನಮ್ಮ ಕಚೇರಿಯಲ್ಲಿ ಸಂಬಳಕ್ಕೆ ಕೆಲಸ ಮಾಡುವವರು ಇದ್ದಾರೆ. ವಾಲಂಟರಿಯಾಗಿ ಕೆಲಸ ಮಾಡುವವರೂ ಇದ್ದಾರೆ. ಏಪ್ರಿಲ್ 23ರಂದು ಲಾಯರ್ ಪೆನ್ ಡ್ರೈವ್ ತಂದು ಕೊಟ್ಟಿದ್ದಾರೆ. ಹಾಗಂತ ಲಾಯರ್ ಮೇಲೆ ಕೇಸ್ ದಾಖಲಿಸಲು ಆಗುತ್ತಾ? ನಾನು ಯಾರಿಗೂ ವಕ್ತಾರ ಆಗಲು ರೆಡಿ ಇಲ್ಲ. ಸಂತ್ರಸ್ತರ ವಿಡಿಯೋ ಹರಿಬಿಡಬಾರದು ಎಂಬುದು ನನ್ನ ನಿಲುವು” ಎಂದು ತಿಳಿಸಿದರು.

“ತನಿಖೆ ನಡೆಯುತ್ತಿರುವಾಗ ಆರೋಪಿಗಳ ಬಗ್ಗೆ ಮಾತಾಡುವುದು ಸರಿಯಲ್ಲ. ಯಾರು ಏನು ಮಾಡಿದ್ದಾರೆ ಅಂತಾ ತನಿಖೆ ಮೂಲಕ ಗೊತ್ತಾಗುತ್ತದೆ. ಯಾವುದೇ ಕಾರಣಕ್ಕೂ ಅಶ್ಲೀಲ ವೀಡಿಯೋಗಳನ್ನು ಇಟ್ಟುಕೊಳ್ಳಬೇಡಿ. ಫಾರ್ವರ್ಡ್ ಮಾಡಬೇಡಿ ಅಂತಾ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments