Homeಕರ್ನಾಟಕಪೊಲೀಸ್‌ ನೌಕರರು ತಮ್ಮ ಸ್ವಂತ ವಾಹನಗಳ ಮೇಲೆ 'ಪೊಲೀಸ್‌' ಎಂದು ಬರೆಸುವಂತಿಲ್ಲ!

ಪೊಲೀಸ್‌ ನೌಕರರು ತಮ್ಮ ಸ್ವಂತ ವಾಹನಗಳ ಮೇಲೆ ‘ಪೊಲೀಸ್‌’ ಎಂದು ಬರೆಸುವಂತಿಲ್ಲ!

ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್‌ ಎಂದು ಬರೆಸುವಂತಿಲ್ಲ. ಒಂದು ವೇಳೆ ಬರೆಸಿದ್ದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.‌

“ರಾಜ್ಯದ ಪೊಲೀಸ್‌ ಇಲಾಖೆಯ ಅಧಿಕಾರಿಗಳು ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ”ಎಂದು ಶ್ರವಣಬೆಳಗೊಳದ ಶಾಸಕ ಬಾಲಕೃಷ್ಣ ಸಿಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಕೇಳಿದ್ದರು. ಇದಕ್ಕೆ ಸಚಿವರು ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

“ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಕೆಲ ಪೊಲೀಸ್ ನೌಕರರು ಮತ್ತು ಅಧಿಕಾರಿಗಳು ಕಾನೂನಿನ ಉಲ್ಲಂಘನೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ, ಇವರ ವಿರುದ್ಧ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳೇನು? ಎಂದು ಶಾಸಕ ಬಾಲಕೃಷ್ಣ ಪ್ರಶ್ನಿಸಿದರು.

ಇದಕ್ಕೂ ಉತ್ತರ ನೀಡಿದ ಪರಮೇಶ್ವರ್, “ತಮ್ಮ ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಯಿಸಿಕೊಂಡಿರುವುದು ಗೃಹ ಇಲಾಖೆಯ ಗಮನಕ್ಕೆ ಬಂದಿದೆ. ಸ್ವಂತ ವಾಹನದ ಮೇಲೆ ಪೊಲೀಸ್ ಅಧಿಕಾರಿಗಳು ಹಾಗೂ ನೌಕರರು ಪೊಲೀಸ್ ಎಂದು ಬರೆಸಿದ್ದರೆ ಅವರ ವಿರುದ್ಧ 2022ರ ಸರ್ಕಾರದ ಸುತ್ತೋಲೆ ಪ್ರಕಾರ ಕಾನೂನು ಕ್ರಮ ಆಗುತ್ತದೆ” ಎಂದಷ್ಟೇ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments