Homeಕರ್ನಾಟಕವಯನಾಡಿನಲ್ಲಿ ವ್ಯಕ್ತಿಯ ಹತ್ಯೆ ಮಾಡಿದ್ದ ಕಾಡಾನೆ ಸೆರೆಗೆ ನಾಗರಹೊಳೆ ಅಭಯಾರಣ್ಯದಲ್ಲಿ ಕಾರ್ಯಾಚರಣೆ!

ವಯನಾಡಿನಲ್ಲಿ ವ್ಯಕ್ತಿಯ ಹತ್ಯೆ ಮಾಡಿದ್ದ ಕಾಡಾನೆ ಸೆರೆಗೆ ನಾಗರಹೊಳೆ ಅಭಯಾರಣ್ಯದಲ್ಲಿ ಕಾರ್ಯಾಚರಣೆ!

ಕೇರಳದ ವಯನಾಡಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದ ಕಾಡಾನೆಯ ಸೆರೆಗೆ ನಾಗರಹೊಳೆ ಅಭಯಾರಣ್ಯದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಮಖಾನ್ ಹೆಸರಿನ ಕಾಡಾನೆ ಸದ್ಯ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಓಡಾಡುತ್ತಿದೆ ಎನ್ನುವುದು ರೇಡಿಯೋ ಕಾಲರ್ ನಿಂದ ತಿಳಿದು ಬಂದ ತಕ್ಷಣವೇ ನಾಗರಹೊಳೆಯ ನಾಣಚ್ಚಿ, ಹುಲಿಕಲ್ಲು, ಆಲಂದೋಡು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಾಡಾನೆಯು ಮದವೇರಿ ನಾಗರಹೊಳೆ ಪ್ರದೇಶದಲ್ಲಿ ಅಡ್ಡಾಡುತ್ತಿದೆ. ಕ್ಷಣಕ್ಷಣಕ್ಕೂ ಸ್ಥಳ ಬದಲಾಯಿಸುತ್ತಿರುವುದರಿಂದ ಅದಕ್ಕೆ ಅರಿವಳಿಕೆ ನೀಡಲು ಪಶು ವೈದ್ಯರು ಹರಸಾಹಸಪಡುತ್ತಿದ್ದಾರೆ.

ಈ ಆನೆಗೆ ಹಾಸನದ ಬೇಲೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿದ್ದರು. ನಂತರ ಅದನ್ನು ಚಾಮರಾಜನಗರ ವ್ಯಾಪ್ತಿಯ ಕಾಡಿನಲ್ಲಿ ಬಿಡಲಾಗಿತ್ತು. ಅದು ಅಲ್ಲಿಂದ ಕೇರಳದ ವಯನಾಡಿಗೆ ತೆರಳಿ ಫೆಬ್ರವರಿ 10 ರಂದು ಪ್ರಜೀಶ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರ ವಾಗಿರುವ ವಯನಾಡಿನಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಿದ್ದರಿಂದ ಮತ್ತು ಅದು ಕರ್ನಾಟಕದಲ್ಲಿ ರೇಡಿಯೋ ಕಾಲರ್ ಅಳವಡಿಸಿರುವ ಹಾನಿಯಾಗಿರುವ ಕಾರಣ ಇಲ್ಲಿನ ಸರ್ಕಾರ ಮೃತ ವ್ಯಕ್ತಿಯ ಕುಟುಂಬದವರಿಗೆ 15 ಲಕ್ಷ ರೂ ಪರಿಹಾರ ಘೋಷಣೆ ಮಾಡಿತ್ತು. ಇದು ರಾಜ್ಯದಲ್ಲಿ ತೀವ್ರ ರಾಜಕೀಯ ಕೋಲಾರಕ್ಕೆ ಕಾರಣವಾಗಿತ್ತು.

ಈ ಎಲ್ಲ ವಿದ್ಯಮಾನಗಳ ಬಳಿಕ ಕಾಡಾನೆಯ ತೆರಿಗೆ ಅರಣ್ಯ ಇಲಾಖೆ ಮತ್ತೆ ಕ್ರಮ ಕೈಗೊಳ್ಳಲು ಮುಂದಾಗಿತ್ತು.. ಅದರಂತೆ ಇದೀಗ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಆನೆ ಇರುವ ಸುಳಿವು ಸಿಕ್ಕ ಕಾರಣ ಕಾರ್ಯಾಚರಣೆ ನಡೆಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments