Homeದೇಶಆನ್ ಲೈನ್ ಗೇಮ್ ಶಂಕೆ | ಬಾಲ್ಕನಿಯಿಂದ ಬಿದ್ದು ಮೂವರು ಸಹೋದರಿಯರ ದಾರುಣ ಸಾವು

ಆನ್ ಲೈನ್ ಗೇಮ್ ಶಂಕೆ | ಬಾಲ್ಕನಿಯಿಂದ ಬಿದ್ದು ಮೂವರು ಸಹೋದರಿಯರ ದಾರುಣ ಸಾವು

12 ರಿಂದ 16 ವರ್ಷ ವಯಸ್ಸಿನ ಮೂವರು ಸಹೋದರಿಯರು ಬುಧವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಲ್ಟಿಪ್ಲೇಯರ್ ಕೋರಿಯನ್ ಆಟದ ಭಾಗವಾಗಿ ಇವರು ಈ ಮಾರ್ಗವನ್ನು ತುಳಿದಿರಬಹುದು ಎಂದು ಪ್ರಾಥಮಿಕ ತನಿಖೆಯೆ ಮಾಹಿತಿಗಳು ಹೇಳುತ್ತಿವೆ.

ಬುಧವಾರ ಬೆಳಗಿನ ಜಾವ ಸುಮಾರು 2:15 ಕ್ಕೆ ತಿಲಮೋಡ್ ಪೊಲೀಸ್ ಠಾಣಾ ಪ್ರದೇಶದ ತಮ್ಮ ಮನೆಯ ಒಂಬತ್ತನೇ ಮಹಡಿಯ ಬಾಲ್ಕನಿಯಿಂದ ಜಿಗಿದು ಮೂವರು ಹುಡುಗಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಪ್ರತಿಕ್ರಿಯೆ ವಾಹನ ಪಿಆರ್‌ವಿಗೆ ಮಾಹಿತಿ ಬಂದಿತ್ತು ಎಂದು ಸಹಾಯಕ ಪೊಲೀಸ್ ಆಯುಕ್ತ ಶಾಲಿಮಾರ್ ಗಾರ್ಡನ್ ನ ಅತುಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತಲುಪಿದ ತಕ್ಷಣ ತನಿಖೆ ಆರಂಭಿಸಲಾಯಿತು. ಆಗ ಸಿಕ್ಕ ಮಾಹಿತಿ ಪ್ರಕಾರ ಅವರೆಲ್ಲ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಯಿತು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

9ನೇ ಮಹಡಿಯ ಬಾಲ್ಕನಿಯಿಂದ ಬಿದ್ದ ಮೂವರನ್ನು ಲೋನಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಮೂವರು ಹುಡುಗಿಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments