Homeಕರ್ನಾಟಕಡಿ.1ರಂದು ಮಂಡಲ್‌ ವರದಿ ಕುರಿತು ವಿಚಾರ ಸಂಕಿರಣ, 'ಗವಿಮಾರ್ಗ' ಪುಸ್ತಕ ಬಿಡುಗಡೆ ಹಾಗೂ ವಿ ಪಿ...

ಡಿ.1ರಂದು ಮಂಡಲ್‌ ವರದಿ ಕುರಿತು ವಿಚಾರ ಸಂಕಿರಣ, ‘ಗವಿಮಾರ್ಗ’ ಪುಸ್ತಕ ಬಿಡುಗಡೆ ಹಾಗೂ ವಿ ಪಿ ಸಿಂಗ್‌ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ಐಎಚ್‌ಎಸ್‌ ಪ್ರಕಾಶನ ಸಹಯೋಗದಲ್ಲಿ ಮಂಡಲ್‌ ವರದಿ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಡಿಸೆಂಬರ್‌ 1ರಂದು (ಶುಕ್ರವಾರ) ಬೆಂಳಗೂರಿನ ಕ್ವೀನ್ಸ್‌ ರಸ್ತೆಯ ಕೃಷಿ ತಂತ್ರಜ್ಞಾನ ಸಂಸ್ಥೆಯ ಅರಕೇರಿ ಸಭಾಂಗಣದಲ್ಲಿ ‘ಮಂಡಲ್‌ ವರದಿ ಆಗಿದ್ದೇನು?’ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ.

ಪುಸ್ತಕ ಬಿಡುಗಡೆ, ವಿ ಪಿ ಸಿಂಗ್‌ ಪ್ರಶಸ್ತಿ ಪ್ರದಾನ

ಇದೇ ವಿಚಾರ ಸಂಕಿರಣದಲ್ಲಿ ಡಾ.ಎಂ ಎಸ್‌ ಮಣಿ ಅವರ ‘ಗವಿಮಾರ್ಗ’ ಪುಸ್ತಕ ಬಿಡುಗಡೆ ಮತ್ತು ವಿ ಪಿ ಸಿಂಗ್‌ ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ನಡೆಯಲಿದೆ.

ಮಾಜಿ ಸಚಿವ ಎಚ್‌ ಎಂ ರೇವಣ್ಣ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ ಆರ್‌ ಸುದರ್ಶನ್‌ ಅವರು ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಚ್‌ ಆಂಜನೇಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷ ಕೆ ಆರ್‌ ನೀಲಕಂಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಆದಿಜಾಂಭವ ಬೃಹನ್ಮಠದ ಷಡಕ್ಷರ ಮುನಿ ದೇಶೀಕೇಂದ್ರ ಸ್ವಾಮೀಜಿ ಅವರು ಗವಿ ಮಾರ್ಗ ಪುಸ್ತಕ ಕುರಿತು ಮಾತನಾಡಲಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ ಮತ್ತು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಡಾ. ಮನೋಹರ್ ಯಾದವ್ ಅವರು ವಿಷಯ ಮಂಡಿಸಲಿದ್ದಾರೆ. ಪ್ರಜಾಪ್ರಗತಿ ಕನ್ನಡ ಪತ್ರಿಕೆ ಸಂಪಾದಕ ಎಸ್ ನಾಗಣ್ಣ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ ಎಂ ರಾಮಚಂದ್ರಪ್ಪ ಅವರು ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.

ವಿ ಪಿ ಸಿಂಗ್ ಪ್ರಶಸ್ತಿ ಪುರಸ್ಕೃತರು

ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ ಸಿದ್ದರಾಜು, ಟಿ ಎಸ್‌ ಆರ್‌ ಪ್ರಶಸ್ತಿ ಪುರಸ್ಕೃತ ಗಂಗಾಧರ ಮೊದಲಿಯಾರ್‌, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್‌ ಕಾಂತರಾಜ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್‌, ಜನಮನ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಮಾಜಿ ಗೌರವ ಅಧ್ಯಕ್ಷ ಬಿ ಕೆ ರವಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments